5/27/2019

ಪುಟಪಾಕ ಗ್ರಾಮದಲ್ಲಿ ಶಾಸಕ ನಾಗನಗೌಡರಿಗೆ ಸನ್ಮಾ

Font size -16+

'
ಸುದ್ದಿಮೂಲ ವಾರ್ತೆ, ಯಾದಗಿರಿ ಜೂ. 13

ಗುರುಮಠಕಲ್ ತಾಲೂಕಿನ ಪುಟಪಾಕ ಗ್ರಾಮದಲ್ಲಿ ಗುರುಮಠಕಲ್ ವಿಧಾನ ಸಭೆಯ ನೂತನ ಶಾಸಕ ನಾಗನಗೌಡ ಕಂದಕೂರ ಅವರಿಗೆ ಗ್ರಾಮಸ್ಥರಿಂದ ಅಭಿನಂದನಾ ಸಮಾರಂಭನಡೆಯಿತು.
ತೆರೆದ ವಾಹನದಲ್ಲಿ ಶಾಸಕರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಭಾಜಾ ಭಜಂತ್ರಿ ಹಾಗೂ ಪಟಾಕಿ ಸಿಡಿಸಿ ಮೆರವಣಿ ಮೂಲಕ ಗ್ರಾಮಸ್ಥರು ಸ್ವಾಗತಿಸಿದರು.
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ನಾಗನಗೌಡ ಕಂದಕೂರು, ನನ್ನನ್ನು ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸಿರುವುದು ನಮ್ಮ ಮೇಲಿನ ಪ್ರೀತಿ ಎತ್ತಿ ತೋರಿಸಿದಂತಾಗಿದೆ. ನಾನು ನೆಮ್ಮೆಲ್ಲರಿಗೂ ಚಿರಋಣಿಯಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ಧಕ್ಕೆ ಬರದಂತೆ ಕೆಲಸ ಮಾಡುತ್ತೇನೆ ಎಂದರು.
ಶಾಸಕನಾಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಮತ್ತು ನಿಮ್ಮೆಲ್ಲರ ಸಮಸ್ಯೆಯನ್ನು ಬಗೆಹರಿಸಲು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಯಾವುದೇ ಸಂಕೋಚವಿಲ್ಲದೆ ನಿಮ್ಮ ಯಾವುದೇ ಕೆಲಸಗಳಿದ್ದರೂ ನಮ್ಮ ಗಮನಕ್ಕೆ ತನ್ನಿರಿ ಕೆಲಸ ಮಾಡಿಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಮುಖಂಡರಾದ ಜಿ. ತಮ್ಮಣ್ಣ, ಬಾಲಪ್ಪ ನಿರೇಟಿ, ಕಿಷ್ಟಾರೆಡ್ಡಿ, ವಿಜಯ ಕುಮಾರ ನಿರೇಟಿ, ವಾಸುದೇವಗೌಡ, ಭೋಜಣಗೌಡ ಯಡ್ಡಳ್ಳಿ, ಶರಣು ಅವಂಟಿ, ಶಿವಕುಮಾರ ಕಡೇಚೂರ, ನಾಗೇಶ ಚಂಡ್ರಿಕಿ, ಆಸೀಮ್ ಸಾಬ್, ಮಹಮದ್ ಅಯುಬ್, ಮೌಲಾನಾ, ವೆಂಕಟಪ್ಪ ಮತ್ತಿತರರು ಇದ್ದರು.'