5/27/2019

ಸದಾಶಿವ ಆಯೋಗದ ವರದಿ ಜಾರಿಗೊಳಿಸಿ-ದೊಡ್ಮನಿ

Font size -16+

'
ಸುದ್ದಿಮೂಲ ವಾರ್ತೆ, ಸುರಪೂರ ಜೂ. 13

ಇಂದು ದೇಶದಲ್ಲಿಯ ದಲಿತರ ಮೇಲಿನ ಹಲ್ಲೆಗಳು,ಕೊಲೆಗಳನ್ನು ನೋಡುತ್ತಿದ್ದರೆ ನಾವು ತಲೆ ತಗ್ಗಿಸ ಬೇಕಾದ ಪರಿಸ್ಥಿತಿ ಬಂದಿದೆ.ಇದಕ್ಕೆ ನಮ್ಮಲ್ಲಿ ಇಲ್ಲದ ಒಗ್ಗಟ್ಟಿನ ಕೊರತೆಯೆ ಕಾರಣ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕಾಧ್ಯಕ್ಷ ದೇವಿಂದ್ರಪ್ಪ ದೊಡ್ಮನಿ ಹೇಳಿದರು.
ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ರಚಿಸಲಾದ ಸಂಘಟನೆಯ ಗ್ರಾಮ ಶಾಖೆಗೆ ಚಾಲನೆ ನೀಡಿ ಮಾತನಾಡಿ,ದೇಶದ ಗ್ರಾಮೀಣ ಭಾಗದಲ್ಲಿ ಇಂದಿಗು ಕೂಡ ಅನಿಷ್ಟ ಆಚರಣೆಗಳು ನಿಂತಿಲ್ಲ.ಇದಕ್ಕೆ ಕಾರಣ ನಮ್ಮಲ್ಲಿಯ ಕಾನೂನುಗಳ ಅರಿವಿನ ಕೊರತೆಯಾಗಿದೆ ಎಂದರು.
ಯಾರೊಂದಿಗು ವಿನಾಕಾರಣ ಸಂಘರ್ಷ ಮಾಡದೆ, ಎಲ್ಲರೊಂದಿಗೆ ಅಣ್ಣ ತಮ್ಮಂದಿರಂತೆ ಇದ್ದು,ಸರಕಾರದಿಂದ ದೊರೆಯುವ ಸವಲತ್ತುಗಳನ್ನ ಸದುಪಯೋಗ ಮಾಡಿಕೊಳ್ಳಿ.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸದೆ ಸರಕಾರಗಳು ಮೋಸ ಮಾಡುತ್ತಿವೆ. ಈ ವರದಿ ಜಾರಿಗೊಳಿಸಲು ನಾವೆಲ್ಲ ಒಗ್ಗಟ್ಟಾಗಿ ಒತ್ತಾಯಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಶಾಖೆಗೆ ಪದಾಧಿಕಾರಿಗಳನ್ನಾಗಿ ಲಚಮಣ್ಣ ಗೌರವಧ್ಯಕ್ಷ, ತಿಪ್ಪಣ್ಣ ಹೊಸ್ಮನಿ ಅಧ್ಯಕ್ಷ, ಗೋಪಾಲ ಹಳಿಮನಿ ಉಪಾಧ್ಯಕ್ಷ, ಹಣಮಂತ ಪ್ರ.ಕಾರ್ಯದರ್ಶಿ,ದುರ್ಗಪ್ಪ ಸಹ ಕಾರ್ಯದರ್ಶಿ,ಮಲ್ಲಿಕಾರ್ಜುನ ಸಂ.ಕಾರ್ಯದರ್ಶಿ ಹಾಗು ರಂಗಪ್ಪ ಖಜಾಂಚಿಯನ್ನಾಗಿ ಆಯ್ಕೆ ಮಾಡಲಾ ಯಿತು.
ಭೀಮಾಶಂಕರ ಬಿ,ದಾನಪ್ಪ ಕಡಿಮನಿ ,ಬಸವರಾಜ ಮುಷ್ಠಳ್ಳಿ, ಮರೆಪ್ಪ ಬಸಾಪೂರ,ತಿಮ್ಮಣ್ಣ ದೇವಿಕೇರಾ,ಮಾನಪ್ಪ ಹುಲಕಲ್,ಹಣಮಂತ ಕೂಡಲಗಿ, ಬಲಭೀಮ ಬೋನಾಳ,ದುರಗಪ್ಪ ನಾಗರಾಳ ಮುಂತಾದವರಿದ್ದರು.'