5/27/2019

ಹಬ್ಬಗಳನ್ನು ಸಹಬಾಳ್ವೆಯಿಂದ ಆಚರಿಸಬೇಕು - ಪಾಟೀ

Font size -16+

'
ಸುದ್ದಿಮೂಲ ವಾರ್ತೆ, ಕೆಂಭಾವಿ ಜೂ. 13

ಎಲ್ಲ ಹಬ್ಬಗಳ ಆಚರಣೆಯಲ್ಲಿ ಸದುದ್ದೇಶ ಇರಬೇಕು. ಹಬ್ಬಗಳ ಆಚರಣೆಯಿಂದ ಯಾವುದೆ ಸಮಾಜಕ್ಕೆ ಅಶಾಂತಿ ಉಂಟಾಗದೆ ಎಲ್ಲರೂ ಭಾತೃತ್ವ ಪ್ರೇಮದಿಂದ ಎಲ್ಲ ಹಬ್ಬಗಳನ್ನು ಸಹಬಾಳ್ವೆಯಿಂದ ಆಚರಿಸಬೇಕು ಎಂದು ಪಿಎಸ್‌ಐ ಬಾಪುಗೌಡ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಭಾವೈಕ್ಯತೆಯ ಸಂಕೇತವಾದ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಶಾಂತಿಯಿಂದ ಆಚರಿಸುವಂತೆ ಜನತೆಯಲ್ಲಿ ಮನವಿ ಮಾಡಿದ ಅವರು ಯಾವುದೆ ಗಾಳಿ ಸುದ್ದಿಗೆ ಕಿವಿಗೊಡದೆ ಜನತೆ ಪಟ್ಟಣದಲ್ಲಿ ಶಾಂತಿ ನೆಲೆಸುವಂತೆ ಸಹಕರಿಸಬೇಕು. ಕಾನೂನಿಗೆ ಭಂಗ ತರುವ ಸಮಾಜಘಾತುಕ ಶಕ್ತಿಗಳ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರೋಬೆಷನರಿ ಪಿಎಸ್‌ಐ ಚಿದಾನಂದ ಕೆ, ಪ್ರಮುಖರಾದ ಶರಣಪ್ಪ ಬಂಡೋಳಿ, ತಾಹೇರಪಾಶಾ ಖಾಜಿ ಮಾತನಾಡಿದರು. ರೆಹಮಾನ ಪಟೇಲ ಯಲಗೋಡ, ಈರಣ್ಣ ಸೊನ್ನದ, ರಂಗಪ್ಪ ವಡ್ಡರ, ಭಾಗಪ್ಪ ಚಾಂದಕವಟೆ, ಬಂದೇನವಾಜ ನಾಶಿ, ಮಾಳಪ್ಪ ರಾಜಾಪುರ, ಯಲ್ಲಪ್ಪ ಬಾವಿಮನಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಶಿವರಾಜ ನಿರೂಪಿಸಿದರು. ಬೀರಪ್ಪ ವಂದಿಸಿದರು.'