5/27/2019

ಮಲೇರಿಯಾ ವಿರೋಧಿ ಮಾಸಾಚರ

Font size -16+

'
.
ಭೀಮರಾಯನಗುಡಿ ಮಲೇರಿಯಾ ನಿಯಂತ್ರಣ ಘಟಕದ ವತಿಯಿಂದ ತಾಲೂಕಿನ ಬೇವಿನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಜರುಗಿತು.
ಆರೋಗ್ಯಾಧಿಕಾರಿ ಡಾ.ರಾಜಕುಮಾರ ಎನ್.ಆರ್ ಮಾರ್ಗದರ್ಶನದಲ್ಲಿ ಗ್ರಾಮಸ್ಥರಿಗೆ ಮಾರಕ ಮಲೇರಿಯಾ ಕುರಿತು ಹಿರಿಯ ಆರೋಗ್ಯ ಸಹಾಯಕ ಬಾಬುರಾವ್ ಬಿರಾದಾರ ಮಲೇರಿಯಾ ಕುರಿತು ವಹಿಸಬಹುದಾದ ಜಾಗೃತಿ ಮೂಡಿಸಿದರು.
ಅನೊಲಿಸ್ ಎಂಬ ಸೊಳ್ಳೆ ಕಚ್ಚುವ ಮೂಲಕ ರೋಗಾಣು ದೇಹವನ್ನು ಪ್ರವೇಶಿಸಿ 10ರಿಂದ 14ದಿನಗಳೊಳಗಾಗಿ ಮಲೇರಿಯಾ ರೋಗ ಉಲ್ಬಣಗೊಳ್ಳುತ್ತದೆ. ಯಾವುದೇ ನಿಂತ ನೀರಿನಿಂದ ಈ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ಕಾರಣ ಜನತೆ ಜಾಗೃತಿ ವಹಿಸುವುದು ಅವಶ್ಯ ಎಂದು ತಿಳಿಸಿದರು. ಮಲೇರಿಯಾ ರೋಗ ಹರಡದಂತೆ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರವು ಅವಶ್ಯವಾಗಿದೆ ಎಂದು ನುಡಿದರು.
ಕಿರಿಯ ಆರೋಗ್ಯ ಸಹಾಯಕ ಮಲ್ಲಿಕಾರ್ಜುನಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಮಾನವ ಜನಾಂಗದ ಒಳಿತಿಗಾಗಿ ಮಲೇರಿಯಾ ಕೊನೆಗೊಳಿಸುವುದು ಅತ್ಯವಶ್ಯವಾಗಿದೆ ಎಂದು ರೋಗದ ಲಕ್ಷಣಗಳು ಹಾಗೂ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೂವಣ್ಣ ಹಾದಿಮನಿ ವಹಿಸಿದ್ದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಹೊಸಮನಿ,ಉಪಾಧ್ಯಕ್ಷ ಭೀಮರಾಯ ಹಳಿಮನಿ,ಗ್ರಾಪಂ ಸದಸ್ಯೆ ಜ್ಯೋತಿ ಪಾಟೀಲ್,ಶಾಲೆಯ ಪ್ರಭಾರಿ ಮುಖ್ಯಗುರು ಸಂಗಣ್ಣ ಬಿರಾದಾರ ಇದ್ದರು. ಸಹಶಿಕ್ಷಕಿ ಭಾರತಿ ಡಿ. ನಿರೂಪಿಸಿದರು,ಮೀನಾಕ್ಷಿ ವಂದಿಸಿದರು.ಸಹಶಿಕ್ಷಕರಾದ ದೇವಿಂದ್ರಪ್ಪ,ಲಕ್ಷ್ಮೀಬಾಯಿ,ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ,ಕವಿತಾ,ಆಶಾ ಕಾರ್ಯಕರ್ತೆಯರಾದ ದೇವಿಂದ್ರಮ್ಮ,ಮಲ್ಲಣ್ಣ,ನಾಗರಾಜ,ಡಾ.ಮಲ್ಲು ಸಲದಾಪುರ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು,ಮಹಿಳೆಯರು ಹಾಗೂ ಶಾಲೆಯ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.'