5/27/2019

ಕೌಠಾ ಸೇತುವೆ ಶಿಥಿಲ : ವಾಹನಗಳಿಗೆ ನಿರ್ಬಂಧ

Font size -16+

'ಸುದ್ದಿಮೂಲ ವಾರ್ತೆ, ಬೀದರ್, ಜೂ.13
ಲೋಕೋಪಯೋಗಿ ಇಲಾಖೆ ಹಾಗೂ ಬೆಂಗಳೂರಿನ ಪ್ರೆûಮಸಿ ಕಛೇರಿ ನೀಡಿರುವ ತಾಂತ್ರಿಕ ವರದಿಗೆ ಅನುಗುಣವಾಗಿ ಬೀದರ-ಔರಾದ್ ರಸ್ತೆ ಎಸ್.ಹೆಚ್-15ರ ಕಿ.ಮೀ 32.60ರಲ್ಲಿಯ ಕೌಠಾ ಗ್ರಾಮದ ಹತ್ತಿರ ಇರುವ ಬೃಹತ್ ಸೇತುವೆ ಶಿಥಿಲಗೊಂಡಿದ್ದು, ಪಾದಚಾರಿ ಹಾಗೂ ಬೈಕ್ ಸವಾರರನ್ನು ಹೊರತುಪಡಿಸಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅಂತ್ಯದ ತನಕ ಜಿಲ್ಲಾಧಿಕಾರಿ ಅನಿರುದ್ಧ ಪಿ ಶ್ರವಣ್ ನಿರ್ಬಂಧ ವಿಧಿಸಿದ್ದಾರೆ.
ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದ್ದು, ಔರಾದ್‌ನಿಂದ ಬೀದರ ಮಾರ್ಗ ರೂಟ್ ಸಂಖ್ಯೆ-1: ಔರಾದ್-ಸಂತಪೂರ- ಕೌಠಾ(ಕೆ)-ಬನ್ಸಿ ತಾಂಡಾ- ಆಲೂರ(ಕೆ), ಸೊರಳ್ಳಿ ಕ್ರಾಸ್-ಕಂದಗೂಳ- ಚಾಂಬೋಳ-ಬೀದರ್. ರೂಟ್ ಸಂಖ್ಯೆ-2: ಔರಾದ್-ಸಂತಪೂರ- ಹೆಡಗಾಪೂರ- ಹಲಬರ್ಗಾ-ಬೀದರ ಹಾಗೂ
ಬೀದರ್‌ನಿಂದ ಔರಾದ್ ಮಾರ್ಗ ರೂಟ್ ಸಂಖ್ಯೆ-1: ಬೀದರ- ಜನವಾಡಾ- ಚಾಂಬೋಳ-ಕಂದಗೂಳ-ಸೊರಳ್ಳಿ ಕ್ರಾಸ್-ಆಲೂರ(ಕೆ)-ಬನ್ಸಿ ತಾಂಡಾ-ಕೌಠಾ(ಕೆ)-ಸಂತಪೂರ- ಔರಾದ್. ರೂಟ್ ಸಂಖ್ಯೆ-2:ಬೀದರ- ಚಿಕ್‌ಪೇಟ್- ಬೆನಕನಳ್ಳಿ- ಚಾಂಬೋಳ- ಕಂದಗೂಳ- ಸೊರಳ್ಳಿ ಕ್ರಾಸ್- ಆಲೂರ್(ಕೆ)-ಬನ್ಸಿ ತಾಂಡಾ-ಕೌಠಾ (ಕೆ)-ಸಂತಪೂರ-ಔರಾದ್ ಮಾರ್ಗವಾಗಿ ಸಂಚರಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.'