5/27/2019

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಜಾರಿ ಕಷ್ಟ- ತಮ್ಮಣ್ಣ

Font size -16+

'ಸುದ್ದಿಮೂಲ ವಾರ್ತೆ, ಬೆಂಗಳೂರು, ಜೂ.13
ಜಾತಿ, ಧರ್ಮ ಬೇಧವಿಲ್ಲದೇ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವ ಕುರಿತು ಹಿಂದಿನ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಘೋಷಣೆ ಜಾರಿ ಕಷ್ಟ ಸಾಧ್ಯ ಎಂಬ ಮಾತು ಕೇಳಿ ಬಂದಿದೆ. ಉಚಿತ ಬಸ್‌ಪಾಸ್ ನೀಡುವ ಸರ್ಕಾರದ ಘೋಷಣೆ ಜಾರಿ ಮಾಡುವುದು ಕಷ್ಟ ಎಂದು ಜೆಡಿಎಸ್ ಮುಖಂಡ ಹಾಗೂ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಇಂದಿಲ್ಲಿ ಇಂದಿಲ್ಲಿ ಸೂಚ್ಯವಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕೊನೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವ ಯೋಜನೆ ಜಾರಿಗೆ 629 ಕೋಟಿ ರೂ. ಅಗತ್ಯವಿದೆ. ಆದರೆ ಸಾರಿಗೆ ಸಂಸ್ಥೆಗಳು ಆರ್ಥಿಕ ನಷ್ಟದಲ್ಲಿವೆ. ಈಗಾಗಲೇ 4 ನಿಗಮಗಳು ತಲಾ 500 ಕೋಟಿ ನಷ್ಟ ಅನುಭವಿಸುತ್ತಿವೆ ಹೀಗಿರುವಾಗ ಯೋಜನೆ ಜಾರಿ ಕಷ್ಟವಾಗಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಯೋಜನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ದೊರೆತಿಲ್ಲ. ಇಷ್ಟೊಂದು ಹಣ ಎಲ್ಲಿಂದ ತರುವುದು. ದಿನೇ ದಿನೇ ಡೀಸೆಲ್ ದರ ಸಹ ಏರಿಳಿತವಾಗುತ್ತಿದೆ. ಹೀಗಿರುವಾಗ ಉಚಿತ ಬಸ್ ಪಾಸ್ ಒದಗಿಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.'