5/27/2019

ಶಹಾಪೂರ : ಭೂ ಕುಸಿತ, ಅಧಿಕಾರಿಗಳ ಪರಿಶೀಲನೆ

Font size -16+

'ಸುದ್ದಿಮೂಲ ವಾರ್ತೆ, ಶಹಾಪೂರ, ಜೂ.13
ತಮ್ಮ ಜಮಿನೊಂದರಲ್ಲಿ ಬಿತ್ತನೆಗಾಗಿ ಹದ ಮಾಡಲು ರಂಟೆ ಹೊಡೆಯುವಾಗ ಹಠಾತ್ತನೆ ಭೂ ಕುಸಿತ ಉಂಟಾಗಿ ಆತಂಕಗೊಂಡ ಘಟನೆ ಶಹಾಪುರ ತಾಲೂಕಿನ ದರಿಯಾಪುರ ಸಮೀಪದ ನಾಗನಟಗಿ ರಸ್ತೆ ಮಾರ್ಗದ ಜಮೀನೊಂದರಲ್ಲಿ ಬುಧವಾರ ನಡೆದಿದೆ.
ದರಿಯಾಪೂರ ಗ್ರಾಮದ ರೈತ ಸೋಪಣ್ಣ ತನ್ನ ಹೊಲದಲ್ಲಿ ಬಿತ್ತನೆ ಕಾರ್ಯಕ್ಕೆ ಸಜ್ಜಾದಾಗ ಈ ಘಟನೆ ನಡೆದಿದೆ. ಎತ್ತುಗಳೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿದಾ ಗ ಏಕಾ ಎಕಿ ಭೂಮಿ ಕುಸಿದಾಗ ರೈತ ಸೋಪ ಣ್ಣ ಗಾಬರಿ ಯಾಗಿ ದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಉಪ ತಹಿಸಿಲ್ದಾರ ವೆಂಕಣಗೌಡ , ಕಂದಾಯ ನೀರಿಕ್ಷಕರು, ಗ್ರಾಮ ಲೇಖಪಾಲಕರು , ಸ್ಥಳಿಯ ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ಹಿಂದೆ ಇಲ್ಲಿ ಹೊಲಗಾಲುವೆ ಇತ್ತು ಎಂದು ಹೇಳಲಾಗುತ್ತಿದ್ದು, ಮಳೆಯಿಂದ ಭೂ ಕುಸಿತ ಉಂಟಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದರು. ಭೂ ಕುಸಿತವಾದ ಸ್ಥಳದಲ್ಲಿ ಮಣ್ಣು ಹಾಕಿ ಮುಚ್ಚಿ ರೈತನಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳು ಗ್ರಾ.ಪಂ. ಅಧಿಕಾರಿಗಳಿಗೆ ಸೂಚಿಸಿದರು.ಈ ಘಟನೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಗ್ರಾಮಸ್ಥರು ಆತಂಕ ಪಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದರು.'