5/27/2019

ಸಾಲಬಾಧೆ: ಬಾವಿಗೆ ಜಿಗಿದು ರೈತ ಆತ್ಮಹತ್ಯೆ

Font size -16+

'ಸುದ್ದಿಮೂಲ ವಾರ್ತೆ, ಕಲಬುರಗಿ, ಜೂ.13
ಸಮಯಕ್ಕೆ ಸರಿಯಾಗಿ ಮಳೆಯಾಗದೆ ಇರುವುದರಿಂದ ಬೆಳೆಬಾರದೆ ಮಾಡಿದ ಸಾಲ ತೀರಿಸಲಾಗದೆ ರೈತನೊಬ್ಬ ತಮ್ಮ ಹೊಲದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮೂಡ್ ಗ್ರಾಮದಲ್ಲಿ ನಡೆದಿದೆ.
ನಾಗರೆಡ್ಡಿ ಕಪನೂರ ಆತ್ಮಹತ್ಯೆ ಮಾಡಿಕೊಂಡ ರೈತ. ಈತನಿಗೆ ಕಲ್ಮೂಡ್ ಸೀಮಾಂತರದಲ್ಲಿ 3 ಎಕರೆ ಹೊಲವಿದ್ದು, ಅದರ ಮೇಲೆ ಕಮಲಾ ಪುರದ ಕೆನರಾ ಬ್ಯಾಂಕ್‌ನಲ್ಲಿ 50 ಸಾವಿರ ರೂ. ಬೆಳೆಸಾಲ ತೆಗೆದುಕೊಂಡಿದ್ದ. ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವುದರಿಂದ ಸಾಲ ಹೇಗೆ ತೀರಿಸ ಬೇಕು ಎಂಬ ಚಿಂತೆಯಲ್ಲಿ ಹೊಲದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಮೃತ ರೈತನಿಗೆ ರೇಣುಕಾ ಮತ್ತು ಗೀತಾ ಎಂಬ ಇಬ್ಬರು ಹೆಣ್ಣು ಮಕ್ಕಳು ಮತ್ತು ರಾಜರೆಡ್ಡಿ ಮತ್ತು ಮಾಣಿಕ ರೆಡ್ಡಿ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ರೇಣುಕಾ ಎಂಬ ಹೆಣ್ಣು ಮಗು ಅಂಗವಿಕಲೆಯಾಗಿದ್ದು, ಗೀತಾ ಎಂಬ ಮಗಳಿಗೆ ಎರಡು ಕಣ್ಣುಗಳು ಕಾಣುವುದಿಲ್ಲ ಎಂದು ತಿಳಿದು ಬಂದಿದೆ.
ಮೃತ ರೈತನ ಪತ್ನಿ ವಿಜಯಲಕ್ಷ್ಮಿ ಕಪನೂರ ಅವರು ನೀಡಿದ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.'