5/27/2019

ಜಂಗಮ ವಿದ್ಯಾರ್ಥಿಗಳಿಗೆ ವೈಧಿಕ ಪಾಠಶಾಲಾ ಪ್ರವೇಶ ಆರಂಭ

Font size -16+

'
ಗರದ 3ನೇ ವಾರ್ಡಿನ ಸತ್ಯನಾರಾಯಣ ಪೇಟೆಯಲ್ಲಿ ಶ್ರೀ ಗವಿಸಿದ್ದೇಶ್ವರಸ್ವಾಮಿ ಗುರುಕುಲ ಜ್ಯೋತಿಷ್ಯ, ವೈಧಿಕ ಹಾಗೂ ಸಂಸ್ಕೃತ ಪಾಠಶಾಲೆಯಲ್ಲಿ ವೀರಶೈವ-ಲಿಂಗಾಯತ-ಜಂಗಮ ವಿದ್ಯಾರ್ಥಿಗಳಿಗೆ ವೈಧಿಕ ಜ್ಯೋತಿಷ್ಯ ವಿದ್ಯಾಭ್ಯಾಸ ಪ್ರವೇಶ ಆರಂಭವಾಗಿದ್ದು ಇಂದಿನಿಂದ ಬರುವ ಜುಲೈ 15ರೊಳಗೆ ವಿದ್ಯಾಭ್ಯಾಸ ಮಾಡುವ ಆಸಕ್ತಿ ವಿದ್ಯಾರ್ಥಿಗಳು ಪ್ರವೇಶವಕಾಶವನ್ನು ಪಡೆಯಲು ತಿಳಿಸಲಾಗಿದೆ.
ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಕನಿಷ್ಠ 7ನೇ ತರಗತಿ ಪಾಸಾಗಿರಬೇಕು. ಹಾಗೂ ಸದರಿ ವಿದ್ಯಾರ್ಥಿಗಳಿಗೆ ಗುರುಕುಲದ ವತಿಯಿಂದ ವಿಶೇಷ ಉಪನ್ಯಾಸಕರಿಂದ ಬೋಧನೆ, ಮತ್ತು ವಸತಿ ಸೌಲಭ್ಯ, ಪ್ರಸಾದ ಸೌಲಭ್ಯ ಳನ್ನು ಸಹ ಒದಗಿಸಲಾಗುತ್ತದೆ.
ಪ್ರತಿ ಭಾನುವಾರ ಸಂಜೆ 6-00 ರಿಂದ 7-00 ರವರೆಗೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶ್ಲೋಕ ಪಠಣೆಯನ್ನು ಹೇಳಿಕೊಡಲಾಗುವುದು. ಆಸಕ್ತಿಯುಳ್ಳವರು ಇದರ ಸದುದ್ಧೇಶವನ್ನು ಪಡೆಯಲು ತಿಳಿಸಲಾಗಿದೆ. ಸಂಪರ್ಕಿಸುವ ಸಂಖ್ಯೆಗಳು : ಮಹಾಲಿಂಗಪ್ಪ. ಬಿ- 9448173216, ದೊಡ್ಡಬಸವ ಹಾಸಿನಾಳ-9535124444, ಶ್ರೀಶೈಲ ಹಂಚಿನಾಳ-9242411111 ಹಾಗೂ ಹೆಚ್.ಎಂ ಮಂಜುನಾಥ ವಕೀಲರು- 7899367767 ಇವರನ್ನು ಸಹ ಸಂಪರ್ಕಿಸಲು ತಿಳಿಸಲಾಗಿದೆ.'