5/27/2019

ಪದವೀಧರರ ಸಮಸ್ಯೆ ಬಗೆ ಹರಿಸುವಲ್ಲಿ ಬಿಜೆಪಿ ಸಾಧನೆ ಶೂನ್ಯ- ಆರೋ

Font size -16+

'ಪ
ಈ ಕ್ಷೇತ್ರದ ಪದವೀದರರು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಪ್ರಥಮವಾಗಿ ಬಿಜೆಪಿಯೇತರ ಅಭ್ಯರ್ಥಿಯಾಗಿ ಡಾ॥ ಚಂದ್ರಶೇಖರ್ ಬಿ. ಪಾಟೀಲರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ ಸಮಸ್ತ ಪದವೀದರರಿಗೆ ಕೃತಜ್ಞತೆಗಳನ್ನು ಸೆನೆಟ್ ಸಿಂಡಿಕೇಟ್ ಸದಸ್ಯರ ಪರವಾಗಿ ಕೆ.ಎಂ.ಮಹೇಶ್ವರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಪ್ರತಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ಈಶ್ಯಾನ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲ್ಬರ್ಗಿ, ಬೀದರ್ ಜಿಲ್ಲೆಗಳು ಹಾಗೂ ಹರಪನಹಳ್ಳಿ ತಾಲ್ಲೂಕಿನ ಮತದಾರರನ್ನೊಳ ಗೊಂಡ ಈಶ್ಯಾನ ಪದವೀದರ ಕ್ಷೇತ್ರದ ಚುನಾವಣೆಯಲ್ಲಿ ಇದೇ ಪ್ರಥಮವಾಗಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಾ॥ ಚಂದ್ರಶೇಖರ್ ಬಿ. ಪಾಟೀಲರು ಜಯಶೀಲ ಾಗುವುದರ ಮುಖೇನ ಈ ಮತ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಖಾತೆ ತೆರದಿರುವ ಡಾ॥ ಚಂದ್ರಶೇಖರ ಪಾಟೀಲ ಅಭಿನಂದನಾರ್ಹರು ಎಂದು ತಿಳಿಸಿದ್ದಾರೆ.
1988ರಿಂದ ಇಲ್ಲಿಯವರೆಗೆ 5 ಅವಧಿಗೆ ಬಿಜೆಪಿ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸತತವಾಗಿ ಆಯ್ಕೆಯಾಗಿದ್ದು, 30 ವರ್ಷಗಳ ಅವಧಿಗಳಲ್ಲಿ ಪದವೀದರರ ಸಮಸ್ಯೆಗಳಿಗೆ ಸ್ಪಂಧಿಸದೇ ನಿರಾಸಕ್ತಿ ವಹಿಸಿದ್ದರು, ಹೈದ್ರಾಬಾದ್ ಕರ್ನಾಟಕದ ಪದವೀದರರಿಗೆ ಸ್ಟೇಪಂಡ್ ಹಾಗೂ ನಿರುದ್ಯೋಗಗಿಗಳಿಗೆ ಉದ್ಯೋಗದ ಪರಿಹಾರದ ನೀಡದೇ ಇರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಬದಲಿಸಿ ಎಂದೇ ನಾವು ಪ್ರಚಾರ ಕೈಗೊಂಡಿದ್ದೇವು. ನಮ್ಮಗಳ ಮನವಿಗೆ ಈ ಕ್ಷೇತ್ರದ ಪದವೀದರರು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಪ್ರಥಮವಾಗಿ ಬಿಜೆಪಿಯೇತರ ಅಭ್ಯರ್ಥಿಯಾಗಿ ಡಾ॥ ಚಂದ್ರಶೇಖರ್ ಬಿ. ಪಾಟೀಲರನ್ನು ಚುನಾಯಿಸುವುದಕ್ಕಾಗಿ ಸಮಸ್ತ ಪದವೀದರರಿಗೆ ಕೃತಜ್ಞತೆಗಳನ್ನು ಸೆನೆಟ್ ಸಿಂಡಿಕೇಟ್ ಸದಸ್ಯರ ಪರವಾಗಿ ಕೆ.ಎಂ.ಮಹೇಶ್ವರಸ್ವಾಮಿ ತಿಳಿಸಿದ್ದಾರೆ.'