5/27/2019

ಕೆಎಸ್‌ಸಿಮಹಿಳಾ ಕಾಲೇಜಿಗೆ ಶೇ.99 ರಷ್ಟು ಲಿತಾಂಶ 60 ವಿದ್ಯಾರ್ಥಿನಿಯರು ಜಿಲ್ಲಾ ಶ್ರೇಣಿಯಲ್ಲಿ ತೇರ್ಗಡೆ

Font size -16+

'
ಸುದ್ದಿಮೂಲ ವಾರ್ತೆ, ಗಂಗಾವತಿ ಜೂ, 13
..
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 2017 - 2018ನೇ ಸಾಲಿನ ಬಿ.ಎ. ಪದವಿ ಪರೀಕ್ಷೆಯ ಲಿತಾಂಶ ಪ್ರಕಟಿಗೊಂಡಿದ್ದು, ಗಂಗಾವತಿಯ ಶ್ರೀ ಕೋಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯಕ್ಕೆ ಶೇಕಡಾ 99 ಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾಗಿದ್ದ 102 ವಿದ್ಯಾರ್ಥಿನಿಯರಲ್ಲ್ಲಿ 60 ವಿದ್ಯಾರ್ಥಿನಿಯರು ಜಿಲ್ಲಾಶ್ರೇಣಿಯಲ್ಲಿ, 40 ವಿದ್ಯಾರ್ಥಿನಿಯರು ಪ್ರಥಮ ಓರ್ವ ವಿದ್ಯಾರ್ಥಿನಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು ಒಟ್ಟಾರೆ ಶೇಕಡಾ 99 ರಷ್ಟು ಅತ್ಯುತ್ತಮ ಲಿತಾಂಶ ದಾಖಲಾಗಿದೆ. 31 ವಿದ್ಯಾರ್ಥಿನಿಯರು ಶೇಕಡಾ 80.ಕ್ಕಿಂತ ಅಧಿಕ ಶ್ರೇಣಿ ಪಡೆದಿದ್ದಾರೆ.
ಶ್ರೀ ರಾಜರಾಜೇಶ್ವರಿ ಶೇಕಡಾ 86.78., ಶಾಂತಲಾ .ಎಸ್. ಶೇಕಡಾ 86.55., ಗಂಗಮ್ಮ .ಎಂ. ಶೇಕಡಾ 85.94., ಎಂ. ಪ್ರಿಯಾಂಕ ಶೇಕಡಾ 81.57, ಮತ್ತು ಆಯುಷಾಬೇಗಂ ಶೇಕಡಾ 81.26 ರಷ್ಟು ಅಂಕ ಗಳಿಸಿ ಕ್ರಮವಾಗಿ ಮಹಾವಿದ್ಯಾಲಯಕ್ಕೆ ಪ್ರಥಮ ಐದು ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಕೊಟ್ಟೂರು ಮಹಾ ಸ್ವಾಮಿಗಳು, ಕಾರ್ಯದರ್ಶಿ
ಹೆಚ್. ಪ್ರಭಾಕರ ವಕೀಲರು, ಮತ್ತು ಕಾಲೇಜ ಆಡಳಿತ ಮಂಡಳಿಯ ಚೇರಮನ್‌ಕೆ. ಚನ್ನಬಸಯ್ಯಸ್ವಾಮಿ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತ ಪಡಿಸಿದ್ದಾರೆ.'