5/27/2019

ಅಧಿಕ ಮಾಸದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ1

Font size -16+

'
ನಗರದ ಸತ್ಯನಾರಾಯಣ ಪೇಟೆಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಅಧಿಕ ಮಾಸದ, ಅಧಿಕ ಪುಣ್ಯದ ನಿಮಿತ್ತ ಇಲ್ಲಿನ ಶ್ರೀಮಧ್ವ ಸದನ ಭಜನಾ ಮಂಡಳಿ ಸದಸ್ಯರು, ದೇವರ ಹಾಡುಗಳನ್ನು ತಾರತಮ್ಯವಾಗಿ ಹಾಡಿ ಶ್ರೀವೆಂಕಟೇಶ್ವರನಿಗೆ ಭಕ್ತಿ ಸಮರ್ಪಿಸಿದರು. ಭಜನಾ ಮಂಡಳಿಯ ಎಲ್ಲ ಸದಸ್ಯರು ಒಂದೇ ಸಮವಸ್ತ್ರಗಳನ್ನು ಧರಿಸಿ ಗಮನಸೆಳೆದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಸೋಬಾನ, ಲಕ್ಷ್ಮೀ ಸಹಸ್ರನಾಮಾವಳಿ, ವಿಷ್ಣು ಸಹಸ್ರನಾಮಾವಳಿ ಸೇರಿದಂತೆ ತಾರತಮ್ಯದ ಪ್ರಕಾರ ಸುಮಾರು 50ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದೇವರಿಗೆ ಭಕ್ತಿ ಸಮರ್ಪಿಸಿದರು.
ದೇವಾಲಯದ ಅರ್ಚಕ ವಾದಿರಾಜ ಆಚಾರ್ಯ ಅವರು ಶ್ರೀವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ, ಎಲ್ಲ ಸದಸ್ಯರಿಗೆ ತೀರ್ಥ ಪ್ರಾಸಾದ ವಿತರಿಸಿದರು. ಭಜನಾ ಮಂಡಳಿ ಅಧ್ಯಕ್ಷೆ ಸೇರಿದಂತೆ ಎಲ್ಲ ಸದಸ್ಯರು ಭಾಗವಹಿಸಿದ್ದರು.'