5/27/2019

ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ ಯಾದಗಿರಿ ಜಿಲ್ಲೆಯ ಸುರಪೂರದ ಬೋನಾಳ ಪಕ್ಷಿಧಾಮ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೆ ಪ್ರವಾಸಿಗರ ಬೇಸರ..!

Font size -16+

'ಮಲ್ಲಿಕಾರ್ಜುನ ತಳ್ಳಳ್ಳಿ
ಸುದ್ದಿಮೂಲ ವಾರ್ತೆ, ಸುರಪೂರ ಜೂ, 13

ದಕ್ಷಿಣ ಭಾರತದ ಹೆಸರಾಂತ ಕೆರೆ ಹಾಗು ಪಕ್ಷಿಧಾಮಗಳಲ್ಲಿ ಒಂದಾದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೋನಾಳ ಕೆರೆ ಪಕ್ಷಿಧಾಮ ಮಳೆಯ ಕೃಪೆಯಿಂದ ತುಂಬುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಸುರಪುರ ನಗರದ ಕುಂಬಾರಪೇಟದಿಂದ ಪಶ್ಚಿಮಕ್ಕೆ ಕೇವಲ 15 ಕಿ.ಮೀ ದೂರದಲ್ಲಿರುವ ಬೋನಾಳದ ಕೆರೆಯು ದಕ್ಷಿಣ ಭಾರತದ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿದೆ.
ಸುಮಾರು 17ನೇ ಶತಮಾನದಲ್ಲಿ ಸುರಪುರದ ಅರಸು ರಾಜಾ ಪಮನಾಯಕರ ಆಡಳಿತದ ಸಂದರ್ಭದಲ್ಲಿ ವೀರಪ್ಪ ನಿಷ್ಠಿಯವರ ನಿರ್ದೇಶನದಲ್ಲಿ ಕೆರೆಯನ್ನು ನಿರ್ಮಿಸಲಗಿದೆ ಎಂದು ಇತಿಹಾಸಕಾರರಿಂದ ತಿಳಿದು ಬರುತ್ತದೆ.ಇಂತಹ ಕೆರೆಯು ಅನೇಕ ವರ್ಷಗಳ ಕಾಲ ಸರಕಾರಗಳ ನಿರ್ಲಕ್ಷ್ಯದಿಂದ ಅಭಿವೃಧ್ಧಿ ಇಲ್ಲದೆ ಸೊರಗಿದೆ.
ಈ ಕೆರೆಯುವ ಕೇವಲ ನೀರು ತುಂಬಿಕೊಂಡಿರಲು ಮಾತ್ರ ಸೀಮಿತವಾಗಿರದೆ.ಕರ್ನಾಟಕದ ಎರಡನೆ ಪಕ್ಷಿಧಾಮವು ಆಗಿದೆ.ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಜಾತಿಯ ಪಕ್ಷಿಗಳು ಅದು ಆಸ್ಟ್ರೇಲಿಯಾ,ಶ್ರೀಲಂಕಾ,ಮಲೇಷಿಯಾದಂತ ಅನೇಕ ರಾಷ್ಟ್ರಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ.ಈ ಪಕ್ಷಿಗಳನ್ನು ನೋಡುವದೆ ಕಣ್ಣಿಗೆ ಆನಂದದಾಯಕವಾಗಿದೆ.
ಸುಮಾರು ಎಂಟು ನೂರು ಎಕರೆ ಪ್ರದೇಶವುಳ್ಳ ಈ ಕೆರೆಯು ಸುಮಾರು ಎರಡು ಚದರ ಕಿಲೊ ಮೀಟರ್ ವಿಸ್ತೀರ್ಣ ಉಳ್ಳದ್ದಾಗಿದೆ.ಸುತ್ತಲು ಬೆಳೆದು ನಿಂತಿರುವ ಹಸಿರು ಪರಿಸರ,ಮರಗಳಲ್ಲಿ ಕಾಣಸಿಗುವ ವಿವಿಧ ಜಾತಿಯ ಪಕ್ಷಿಗಳು ಮನಮೋಹಕವಾಗಿವೆ.ಅಲ್ಲದೆ ಕೆರೆಯ ದಂಡೆಯಲ್ಲಿ ಹೂದೋಟ ನಿರ್ಮಿಸಲಾಗಿದೆ,ಪ್ರವಾಸಿಗರಿಗಾಗಿ ಪ್ರವಾಸಿ ಗೋಪುರ ಮತ್ತು ತಂಗುದಾಣಗಳನ್ನು ನಿರ್ಮಿಸಲಾಗಿದೆಯಾದರು ಅವುಗಳ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಕಣ್ಣು ತೆರೆದು ಅಭಿವೃದ್ಧಿ ಜೊತೆಗೆ ಪ್ರಚಾರಕ್ಕೆ ಆದ್ಯತೆ ನೀಡಬೇಕಿದೆ.
ಪ್ರವಾಸಿಗರಿಗೆ ಯಾವುದೆ ರೀತಿಯ ಸೌಕರ್ಯಗಳಿಲ್ಲದೆ ಇಲ್ಲಿಗೆ ಬರುವವರು ಬೇಸರ ಮಾಡಿಕೊಳ್ಳುವಂತಾಗಿದೆ.ಬರುವ ಪ್ರವಸಿಗರಿಗೆ ಕನಿಷ್ಟ ಸುರಪುರ ನಗರದಿಂದ ಬಸ್ಸಿನ ಸೌಲಭ್ಯವನ್ನು ಕೂಡ ಸರಕಾರ ಮಾಡದಿರೋದು ಬೇಸರದ ಸಂಗತಿಯಾಗಿದೆ.ಇನ್ನು ಪಕ್ಷಿಧಾಮದಲ್ಲಿ ಪಕ್ಷಿಗಳ ತಂಗಲು ಸರಿಯಾದ ವ್ಯವಸ್ಥೆಯಿಲ್ಲ.ಇಲ್ಲಿಯುವ ಹೂದೋಟ ಹಾಗು ಇತರೆ ಕಟ್ಟಡಗಳ ರಕ್ಷಣೆಗೆ ಸಿಬ್ಬಂದಿಗಳು ಇಲ್ಲ.ಪ್ರವಾಸಿಗರಿಗೆ ಈ ತಾಣದ ಮಾಹಿತಿ ನೀಡಲು ಮಾರ್ಗದರ್ಶಕರು ಇಲ್ಲ ಎಂಬುದೆ ಖೇದಕರ.
ಭಾರತದ ಪ್ರವಾಸಿ ತಾಣಗಲ ಪಟ್ಟಿಯಲ್ಲಿ ಈ ಕೆರೆಯನ್ನು ಹಿಂದಿನ ಶಾಸಕರುಗಳಾದ ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಪಕ್ಷಿಧಾಮಕ್ಕೆ ಅನೇಕ ಸುಧಾರಣೆ ಕೆಲಸಗಳನ್ನು ಮಾಡಿದ್ದಾರೆ.ಅದರಂತೆ ಹಿಂದಿನ ಶಾಸಕರಾದ ರಾಜಾ ವೆಂಕಟಪ್ಪ ನಾಯಕರು ಕೋಟ್ಯಾಂತರ ರೂಪಾಯಿಗಳ ಅನುದಾನದಲ್ಲಿ ಅಭೀವೃಧ್ಧಿ ಕಾರ್ಯಗಳನ್ನು ಮಾಡಿದ್ದಾರಾದರು ಇನ್ನೂ ಹೆಚ್ಚಿನ ಅಭಿವೃಧ್ಧಿ ಆಗುವ ಮೂಲಕ ನಾಡು,ದೇಶ ವಿದೇಶದ ಪ್ರವಾಸಿಗರ ತನ್ನತ್ತ ಸೆಳೆಯುವಂತಾಗಬೇಕಿದೆ.
ಆ ನಿಟ್ಟಿನಲ್ಲಿ ಇಂದಿನ ಸರಕಾರ ಆದ್ಯತೆ ನೀಡುವ ಮೂಲಕ ಅಭಿವೃಧ್ದಿ ಮಾಡುವದೆ ಕಾದು ನೋಡಬೇಕಿದೆ. ಜಿಲ್ಲೆಯ ಪ್ರಗತಿಗೆ ಜನಪ್ರತಿನಿಧಿಗಳು ಗಮನಿಸಬೇಕಿದೆ.'