5/27/2019

ಸಮಗ್ರ ಕೃಷಿ ಅಭಿಯಾನ ಜಾಗೃತಿ ರಥಕ್ಕೆ ಚಾಲ

Font size -16+

'
ಸುದ್ದಿಮೂಲ ವಾರ್ತೆ, ಸಿರುಗುಪ್ಪ ಜೂ, 13
.
ತಾಲೂಕಿನ ಹಚ್ಚೊಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ ಜಾಗೃತಿ ರಥಕ್ಕೆ ಕೃಷಿ ಅಧಿಕಾರಿ ಗರ್ಜಪ್ಪ ಬುಧವಾರ ಚಾಲನೆ ನೀಡಿದರು.
ಮೂರು ದಿನಗಳ ಕಾಲ ಹಚ್ಚೊಳ್ಳಿ ಹೋಬಳಿಯ ಗ್ರಾಮಗಳಲ್ಲಿ ರಥವು ಸಂಚರಿಸಿ, ಈ ಭಾಗದಲ್ಲಿನ ಗ್ರಾಮಗಳ ರೈತರಿಗೆ ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಸಮಗ್ರ ಮಾಹಿತಿ ಹಾಗೂ ಬೆಳೆ ಪದ್ದತಿ ಮಾಹಿತಿ ಸೇರಿದಂತೆ ಸಮಗ್ರ ಕೃಷಿ ಪದ್ದತಿಯ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಹಚ್ಚೊಳಿ ಹೋಬಳಿ ವ್ಯಾಪ್ತಿಯಲ್ಲಿನ 20ಸಾವಿರ ಹೆಕ್ಟೆೀರ್ ಪ್ರದೇಶದಲ್ಲಿ ಹತ್ತಿಯನ್ನು ಬಿತ್ತನೆ ಮಾಡಲಾಗುತ್ತಿದ್ದು, ಹತ್ತಿ ಬೆಳೆಯಲ್ಲಿ ಬರುವ ಗುಲಾಬಿ ಕಾಯಿ ಕೊರಕ ಹುಳುವಿನ ಬಾಧೆಯನ್ನು ನಿವಾರಿಸುವಲ್ಲಿ ಮೋಹಕ ಬಲೆಗಳ ಅಳವಡಿಕೆ, ಪ್ರಥಮ ಮೊಗ್ಗು ಬಿಡುವ ಹಂತದಲ್ಲಿ ಕೀಟನಾಶಕ ಬಳಸಿ ನಿಯಂತ್ರಿಸುವ ಕುರಿತು ಸಾಕ್ಷ್ಯ ಚಿತ್ರಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗುವುದು,
ಮಳೆಯ ನೀರನ್ನು ಜಮೀನಿನ ಮೂಲಕ ಹರಿಯಲು ಬಿಟ್ಟರೆ ಭೂಮಿಯ ಮೇಲ್ಮೈ ಪದರಲ್ಲಿನ ಲವತ್ತದ ಮಣ್ಣು ಕೊಚ್ಚಿಹೊಗುತ್ತದೆ, ನೀರನ್ನು ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿ ಕೃಷಿ ಹೊಂಡ ಮೂಲಕ ನೀರನ್ನು ಸಂಗ್ರಹಿಸಿಕೊಂಡಲ್ಲಿ ಮಿತ ನೀರು ಬೆಳೆಗಳಿಗೆ ನೀರನ್ನು ಪುರ್ನಬಳಕೆ ಮಾಡಿಕೊಳ್ಳಬಹದು, ನೇರಕೂರಿಗೆ ಬಿತ್ತನೆ ಮೂಲಕ ನೀರನ್ನು ಉಳಿಸಿಕೊಂಡು ಭತ್ತವನ್ನೂ ಬೆಳೆಯಬಹುದು, ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಜೀರೋ ಲೆವೆಲರ ಯಂತ್ರ ಬಳಸಿಕೊಂಡು ಜಮೀನನ್ನು ಪೂರ್ಣ ಸಮತಟ್ಟು ಮಾಡಿಕೊಂಡಲ್ಲಿ ಶೇ.30% ನೀರನ್ನು ಭತ್ತದ ಮಡಿಗಳಲ್ಲಿಯೇ ಉಳಿಸಬಹುದು ಎಂದು ತಿಳಿಸಿದರು.
ರೈತ ಮುಖಂಡ ಎನ್. ಮೋಹನಕುಮಾರ ಮಾತನಾಡಿದರು.. ಆತ್ಮ ಯೋಜನೆಯ ಸಂಯೋಜಕಿ ಶಿಲ್ಪ, ಗ್ರಾಮದ ಪ್ರಗತಿಪರ ರೈತರಾದ ಶಿವರಾಮರೆಡ್ಡಿ, ಜ್ಞಾನರೆಡ್ಡಿ ಗೌಡ, ಕೋಟಿ ಉಮೇಶ, ಉಮಾಪತಿ ಗೌಡ, ನಾಗರಾಜ, ಗಾದೆಪ್ಪ ಸೇರಿದಂತೆ ಇತರರು ಇದ್ದರು.'