5/27/2019

ಉಸಿರಾಡಲು ಹಸಿರಾಗಿಸೋಣ - ಸುಬೇದಾರ್

Font size -16+

'
ನಾವು ಬದುಕಲು ಪ್ರಾಣವಾಯು ಅವಶ್ಯ, ಇಂತಹ ಪ್ರಾಣವಾಯುವನ್ನು ಪ್ರಕೃತಿ ನಮಗೆ ಪುಕ್ಕಟೆಯಾಗಿ ನೀಡುತ್ತಿದೆ. ನಮ್ಮ ದೇಹಕ್ಕೆ ಉಸಿರಾಡಲು ಪ್ರಾಣವಾಯು ಬೇಕಾಗಿದೆ. ಆಮ್ಲಜನಕ ನೀಡುವ ಮರಗಳನ್ನು ನೆಟ್ಟು ನೀರೆರೆದು ಪೋಷಿಶಿ ಬೆಳೆಸುವುದು ಮುಖ್ಯವಾಗಿದೆ. ನಾವೆಲ್ಲರೂ ಸಾಧ್ಯವಾದಡೆ ಎಲ್ಲಾ ಮರ-ಗಿಡಗಳನ್ನು ನೆಟ್ಟು ಬೆಳೆಸೋಣ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಶಿವಪ್ಪ ಸುಬೇದಾರ್ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಹಿನ್ನಲೆಯಲ್ಲಿ ಸಾಮಾಜಿಕ ಅರಣ್ಯ ವಲಯ ಜಿ.ಪಂ. ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ಆವರಣದಲ್ಲಿ ತಗ್ಗು ತೆಗೆದು ಅದರಲ್ಲಿ ಬೇವು, ನೇರಳೆ, ಅಶೋಕ, ಹುಣಸೆ ಮತ್ತು ಇನ್ನಿತರ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಹಶೀಲ್ದಾರ್ ಎಸ್.ಪದ್ಮಕುಮಾರಿ ಮಾತನಾಡಿ, ಕಾಂಕ್ರೀಟ್ ಕಾಡಾಗುತ್ತಿರುವ ನಾಡನ್ನು ಮತ್ತೆ ಹಸರೀಕರಣಗೊಳಿಸೋಣ. ಅತ್ಯವಸರ ಸಂದರ್ಭಗಳಲ್ಲಿ ಕೃತಕ ಆಮ್ಲಜನಕವನ್ನು ಸಹಸ್ರಾರು ರೂ. ತೆತ್ತು ಖರೀದಿಸಿತ್ತಿದ್ದೇವೆ. ಆದರೆ ಗಿಡ-ಮರಗಳು ಕಡಿಮೆ ಆದರೆ ಅದು ಎಲ್ಲರಿಗೂ ತೊಂದರೆಯಾಗುತ್ತದೆ. ಎಲ್ಲರೂ ಸೇರಿ ಹಸಿರು ಕ್ರಾಂತಿ ಮಾಡೋಣ ಎಂದರು.
'