5/27/2019

ರೈತರಿಗೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಸಿ - ಹಾಲಪ್ಪ

Font size -16+

'
ಸುದ್ದಿಮೂಲ ವಾರ್ತೆ, ಯಲಬುರ್ಗಾ ಜೂ, 13

ಉತ್ತಮ ಮುಂಗಾರು ಮಳೆಯಾಗಿದ್ದು ರೈತರ ಉಳುಮೆಗಾಗಿ ಬೇಕಾಗುವ ಬೀಜ- ಗೊಬ್ಬರವನ್ನು ಕೃಷಿ ಅಧಿಕಾರಿಗಳು ಸಮರ್ಪಕ ಪೂರೈಕೆ ಮಾಡುವ ಮೂಲಕ ರೈತರ ಬಗ್ಗೆ ಕಾಳಜಿ ವಹಿಸಬೇಕು ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಮುಂದೆ ಮಂಗಳವಾರ ಆಯೋಜಿಸಲಾಗಿದ್ದ ಕೃಷಿ ಅಭಿಯಾನ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಆಯೋಜಿಸಲಾದ ಕೃಷಿ ಅಭಿಯಾನ ಕೇವಲ ಕಾರ್ಯಕ್ರಮವಾಗಿಸದೆ ಪ್ರತಿ ಹಳ್ಳಿಗೂ ಈ ಅಭಿಯಾನದ ಮಾಹಿತಿ ನೀಡುವ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಳ್ಳಬೇಕು ಎಂದು ಸೂಚಿಸಿದರು.
ಕೃಷಿ ಅಭಿಯಾನ ಯೋಜನೆಯಡಿ ಸರಕಾರದಿಂದ ರೈತರಿಗೆ ಹಲವು ಸೌಲಭ್ಯಗಳು ದೊರೆಯಲಿದ್ದು ಇವುಗಳ ಸಮರ್ಪಕ ಮಾಹಿತಿ ಎಲ್ಲಾ ರೈತರಿಗೆ ದೊರೆಯಬೇಕು. ಇನ್ನೂ ಮೀನುಗಾರಿಕೆ, ರೇಷ್ಮೇ, ಮತ್ತು ಪಶುಸಂಗೋಪನಾ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳುವಲ್ಲಿ ರೈತರು ಮುಂದಾಗಬೇಕು. ಕೃಷಿ ಅಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳ ಕುರಿತ ಮಾಹಿತಿ ನೀಡುವ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದರು.
ಕೊಪ್ಪಳ ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕ ವಿರೇಶ ಹುನಗುಂದ ಮಾತನಾಡಿ, ತಾಲೂಕಿನಲ್ಲಿರುವ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸಂಚಾರಿ ವಾಹನ 3 ದಿನಗಳ ಕಾಲ ಸಂಚಾರ ಮಾಡಲಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಬಸಲಿಂಗಪ್ಪ ಭೂತೆ, ಸಿಎಚ್ ಪೋಲಿಸ್ ಪಾಟೀಲ್, ರತನ್ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಪ್ರಭುರಾಜ ಕಲಬುರ್ಗಿ, ಶಣ್ಮುಖಪ್ಪ ರಾಂಪೂರ, ರವಿ ಕಲಬುರ್ಗಿ, ಅಡಿವೆಪ್ಪ ಭಾವಿಮನಿ, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ ನರೇಗಲ್ಲ, ನೀಲನಗೌಡ ತವಳಗೇರಿ, ಸಿದ್ದರಾಮೇಶ ಬೆಲೇರಿ, ಶಿವಾನಂದ ಬಣಕಾರ, ಈರಪ್ಪ ಬಣಕಾರ, ನಾಗರಾಜ ತಲ್ಲೂರ, ಕೃಷಿ ಇಲಾಖೆ ಅಧಿಕಾರಿ ಹಾರೂನ್ ರಶೀದ್, ಅಧಿಕಾರಿಗಳಾದ ನಾಗನಗೌಡ ಪೋಲಿಸ್ ಪಾಟೀಲ್, ಆರ್ ವಿ ಬೋರಣ್ಣವರ, ರೈತಮುಖಂಡ ತಿರುಗುಣೆಪ್ಪ ಬೆಟಗೇರಿ ಸೇರಿದಂತೆ ಇತರರು ಇದ್ದರು.'