5/27/2019

ಪೌರ ಕಾರ್ಮಿಕರ ಮಕ್ಕಳಿಂದ ವಿನೂತನ ಪ್ರತಿಭಟ

Font size -16+

'
ಸುದ್ದಿಮೂಲ ವಾರ್ತೆ, ಗಂಗಾವತಿ ಜೂ, 13

ಕಳೆದ ಒಂಬತ್ತು ತಿಂಗಳಿಂದ ತಮ್ಮ ತಂದೆ, ತಾಯಿ ಸೇರಿದಂತೆ ತಮ್ಮ ಪಾಲಕರಾಗಿರುವ ಪೌರ ಕಾರ್ಮಿಕರಿಗೆ ವೇತನ ನೀಡುವಂತೆ ಕಾರ್ಮಿಕ ಮಕ್ಕಳೂ ಕೂಡಾ ಪ್ರತಿಭಟನೆ ನಡೆಸಿದ ಸನ್ನಿವೇಶ ನಡೆದಿದ್ದು, ನಗರಸಭೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.
9 ತಿಂಗಳಿಂದ ತಮಗೆ ವೇತನ ಪಾವತಿಸಿಲ್ಲ ಎಂದು ನಗರಸಭೆ ಹೊರ ಗುತ್ತಿಗೆ ಪೌರ ಕಾರ್ಮಿಕರು ನಡೆಸುತ್ತಿರುವ ಅನಿಧಿಷ್ಟಾವಧಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಜೂನ್ ತಿಂಗಳಿನಲ್ಲಿ ತಮಗೆ ವೇತನ ಬಿಡುಗಡೆಯಾಗದಿದ್ದರಿಂದ ಮಕ್ಕಳ ಶಾಲೆ, ಕಾಲೇಜಿನ ಶುಲ್ಕ ಕಟ್ಟಲು ತೊಂದರೆಯಾಗಿದೆ ಎಂದು ಪ್ರತಿಭಟನೆಯಲ್ಲಿ ಕಾರ್ಮಿಕರು ಅಳಲು ತೊಡಿಕೊಂಡಿದ್ದರು. ಒಂದು ವಾರ ದಲ್ಲಿ ವೇತನ ಪಾವತಿಸುವ ಭರವಸೆ ನೀಡಿದ್ದ ನಗರಸಭೆ ಪೌರಾಯುಕ್ತ ಖಾಜಾ ಮೋಹಿ ನುದ್ಧಿನ್ ಹಲವು ತಾಂತ್ರಿಕ ಕಾರಣಗಳು ಮತ್ತು ಅನುದಾನ ಬಿಡುಗಡೆಯಾಗದ ಕಾರಣ ವೇತನ ನೀಡದೇ ಕೈ ಚೆಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಪೌರ ಕಾರ್ಮಿಕ ಮಕ್ಕಳು ಶಾಲೆಗೆ ಹೋಗದೇ ನಗರಸಭೆ ಮುಂದೆ ಧಾವಿಸಿ ತಮ್ಮ ಪಾಲಕರಿಗೆ ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಪರಶುರಾಮ, ಕಾರ್ಮಿಕ ಮುಖಂಡ ಬಸವನಗೌಡ ಸುಳೇಕಲ್ ಮತ್ತಿತರು ಮಾತನಾಡಿ, ವೇತನವಿಲ್ಲದೇ ಕಾರ್ಮಿಕರು ಸಾಕಷ್ಟು ತೊಂದರೆ ಪಡುವಂತಾಗಿದೆ. ಒಂದು ವಾರದಲ್ಲಿ ಒಂದುವರೆ ತಿಂಗಳ ವೇತನ ನೀಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ಇನ್ನು ವಿಳಂಬ ಮಾಡುತ್ತಿದ್ದಾರೆ. ಶಾಸಕರು ಕೂಡಾ ನಮ್ಮ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸಮಾಧಾನಪಡಿಸಿದ್ದರು. ಕಾರ್ಮಿಕರ ತಾಳ್ಮೆ ಮೀರುತ್ತಿದ್ದು, ಮಕ್ಕಳು ಕೂಡಾ ಇಂದು ಪ್ರತಿಭಟನೆಗೆ ಬಂದಿದ್ದಾರೆ. ಈಗಲಾದರೂ ಅಧಿಕಾರಿಗಳು ವೇತನ ನೀಡಲು ಮುಂದಾಗಬೇಕು ಎಂದು ಅಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಖಾಜಾ ಮೋಹಿನುದ್ದೀನ್, ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಎ್ಸಿ ಅನುದಾನ ಮಂಜೂರಾಗಿದ್ದರೂ ಬಿಡುಗಡೆ ಯಾಗಿಲ್ಲ. ಇದು ರಾಜ್ಯದ್ಯಾಂತ ಸಮಸ್ಯೆ ಯಾಗಿದೆ. ಆದಷ್ಟು ಬೇಗ ನಾವು ವೇತನ ಪಾವತಿ ಮಾಡುತ್ತೇವೆ. ಹಿಂದಿನ ಅಧಿಕಾರಿಗಳ ಯಡವಟ್ಟಿನಿಂದಾಗಿ ಈಗ ಸಮಸ್ಯೆ ಎದುರಾಗಿದೆ. ಕಾರ್ಮಿಕರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೆ ಅವರು ಆಡಳಿತ ಮಂಡಳಿ ನೀವು ಸೇರಿ ಸರಿಪಡಿಸಿಕೊಳ್ಳಿ ಎಂದು ಸಬೂಬು ಹೇಳು ತ್ತಾರೆ. ಇದರಿಂದ ನಾವು ಸಂಕಷ್ಟಕ್ಕೆ ಸಿಲುಕಿ ದ್ದೇವೆ. ಪೌರ ಕಾರ್ಮಿಕರಿಗೆ ಅನವಶ್ಯಕ ತೊಂದರೆ ಕೊಡುವ ಉದ್ದೇಶವಿಲ್ಲ. ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ ಎಂದರು.'