9/18/2019

ಜ್ಞಾನ ಮಂಟಪ ವಿವರ ಪುಟ

ಸುಂದರ ಕವಿತೆಗಳ ‘ಮಳೆಬಿಲ್ಲು ’

Font size -16+

'‘ಮಳೆಬಿಲ್ಲು ’ ಇದು ವಿದ್ಯಾರ್ಥಿ ಕವಿಮಿತ್ರ ಶಿವಶಂಕರ ಕಡದಿನ್ನಿ ಅವರ ಚೊಚ್ಚಲ ಸಂಕ ಲನ. ಒಟ್ಟು ನಲವತ್ತೆಂಟು ಕವಿತೆಗಳು ಈ ಸಂಕಲನದಲ್ಲಿವೆ. ಸುಂದರ,ಆಕರ್ಷಕ ಮುಖಪುಟ ಹೊಂದಿರುವ ಈ ಕೃತಿಯಲ್ಲಿ ಕವಿ ಶಿವಶಂಕರ ತನಗೆ ಹೊಳೆದ ನೂರೆಂಟು ಭಾವನೆಗಳನ್ನು ಹಿಡಿದಿಟ್ಟು ಅವುಗಳಿಗೆ ಅಕ್ಷರರೂಪ ನೀಡಿದ್ದಾರೆೆ.
ಯುವಕರಾದರೂ ಶಿವಶಂಕರ್ ವಯೋ ಸಹಜವಾಗಿ ಪ್ರೀತಿ,ಪ್ರೇಮ,ವಿರಹ ವೇದನೆ ಯಂತಹ ಭಾವನೆಗಳಿಗಿಂತ ಹೆಚ್ಚಾಗಿ ಮಕ್ಕಳಂತೆ ಯೋಚಿಸಿ ‘ಗಾಳಿಪಟ’, ‘ಬುಗುರಿ’,‘ಚಿಟ್ಟೆ ’ಯಂತಹ ಮಕ್ಕಳ ಪದ್ಯಗಳನ್ನು ಸುಂದರವಾಗಿ ರಚಿಸಿದ್ದಾರೆ. ತನ್ನ ಊರು, ಪರಿಸರದಲ್ಲಿ ಕಂಡುಂಡ ವಸ್ತು, ಅನುಭವಗಳನ್ನು ಕವಿ ಇಲ್ಲಿ ಕಾವ್ಯವಾಗಿಸಿದ್ದಾರೆ. ಬಹುದಿನಗಳಿಂದ ಬಾರದೇ ಮುನಿಸಿಕೊಂಡಿದ್ದ ಮಳೆ ಒಮ್ಮೆಲೇ ಧೋ ಎಂದು ಸರಿದಾಗ ಸಿಗುವ ಆನಂದದ ನೋಟ, ಕ್ಷಣಗಳನ್ನು ಬೆರಗುಗಂಗಳಿಂದ ನೋಡಿದ ಕವಿ ‘ಮಳೆ’ ಕವಿತೆಯಲ್ಲಿ ಹಿಡಿದಿಟ್ಟಿದ್ದಾರೆೆ. ಋತು ಗಳ ರಾಜ ವಸಂತನ ಕಾಲದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಯನ್ನು ಕೂಡಾ ಕವಿ ಅದೇ ಬೆರಗುಗಂಗಳಿಂದ ನೋಡಿ ತನ್ನೊಳಗೆ ಮೂಡಿದ ಭಾವನೆಗಳಿಗೆ ಕಾವ್ಯರೂಪ ಕೊಟ್ಟಿ ದ್ದಾರೆ. ಪ್ರಕೃತಿ ಹಾಡು, ಜಾನಪದ ಹಾಡುಗಳು ಜೊತೆಗೆ ಒಂದಷ್ಟು ಗಜಲ್ ಮೂಲಕ ಕಾಡುವ ಪ್ರೀತಿ, ಪ್ರಣಯದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಆಧ್ಯಾತ್ಮದತ್ತಲೂ ಕವಿ ಇಲ್ಲಿ ದೃಷ್ಟಿ ಹರಿಸಿದ್ದಾರೆೆ. ಯಾಂತ್ರಿಕತೆಯಿಂದಾಗಿ ಸುಗ್ಗಿಯ ಸಂಭ್ರಮ ಮರೆಯಾಗುತ್ತ್ತಿರುವ ಈ ದಿನ ಗಳಲ್ಲಿ ಸುಗ್ಗಿಯ ಸಂಭ್ರಮವನ್ನು ಕವಿ ಸ್ಮರಿಸಿಕೊಂಡಿದ್ದಾರೆೆ. ಅಪ್ಪ-ಅಮ್ಮಂದಿರ ಮರೆತು ವಿದೇ ಶದಲ್ಲಿ ಕಾಲ ಕಳೆಯುತ್ತಿರುವ ಮಕ್ಕಳಿರುವ ಇಂದಿನ ಸಂದರ್ಭದಲ್ಲಿ ಹೆತ್ತಮ್ಮನ ಮಹತ್ವ ತಿಳಿ ಸಿದ್ದಾರೆ. ಗುರುವಿನ ಮಹತ್ವ, ಮಗಳಿಲ್ಲದ ತವರು ಮನೆಯ ಚಿತ್ರಣವನ್ನು ಕವಿ ಸುಂದರ ವಾಗಿ ಕಟ್ಟಿಕೊಟ್ಟಿದ್ದಾರೆ. ಆದರೂ ಕವಿಗೆ ನಿರಂತರ ಅಧ್ಯಯನಶೀಲತೆ, ಜೀವನಾನುಭವ ಬೇಕಾ ಗಿದೆ. ಜೀವನಾನುಭವ ಗಟ್ಟಿಗೊಂಡಂತೆ ಕವಿಯ ಕಾವ್ಯವೂ ಗಟ್ಟಿಯಾಗಬಲ್ಲದು. ಶಿವಶಂಕರ ಅವರಿಂದ ಮುಂದಿನ ದಿನಗಳಲ್ಲಿ ಈ ಕೊರತೆಯನ್ನು ನೀಗಿಸಿಕೊಂಡು ಉತ್ತಮ ಹಾಗೂ ವೌಲಿಕ ಕೃತಿಗಳು ಹೊರಬರಲಿ ಎಂದು ಆಶಿಸುವೆ.
-ರಘುನಾಥರೆಡ್ಡಿ ಮನ್ಸಲಾಪುರ'