9/18/2019

ಜ್ಞಾನ ಮಂಟಪ ವಿವರ ಪುಟ

ಹೈ.ಕ. ವ್ಯಾಾಪ್ತಿಗೆ ಗದಗ ಜಿಲ್ಲೆೆಯ ಹಳ್ಳಿಿಗಳ ಸೇರ್ಪಡೆ ಹುನ್ನಾಾರ - ಹೈ.ಕ. ಜನ- ದನಿ

Font size -16+

'
- ಡಾ.ರಝಾಕ ಉಸ್ತಾಾದ ಎಂ.ಎಸ್ಸಿ., ಪಿ.ಎಚ್.ಡಿ.
ರಾಜ್ಯ ಉಪಾಧ್ಯಕ್ಷರು, ಹೈದ್ರಾಾಬಾದ ಕರ್ನಾಟಕ
ಹೋರಾಟ ಸಮಿತಿ, ರಾಯಚೂರು. ಮೊ:9886209046

ಹೈದ್ರಾಾಬಾದ ಕರ್ನಾಟಕ ಪ್ರದೇಶಕ್ಕೆೆ ಸಂವಿಧಾನದ 371ಜೆ ಕಾನೂನಿನ ಹಕ್ಕು ಜಾರಿಯಾದ ನಂತರ ರಾಜ್ಯದಲ್ಲಿ ಇತರೆ ಪ್ರದೇಶದಲ್ಲಿ ವಾಸಿಸುವ ಬಹುತೇಕ ಜನರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಆಗುತ್ತಿಿರುವ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಈ ಅಂಶ ಮತ್ತಷ್ಟು ಖಾತರಿಯಾಗುತ್ತದೆ. ಹೈದ್ರಾಾಬಾದ ಕರ್ನಾಟಕಕ್ಕೆೆ ಸಂವಿಧಾನಬದ್ದವಾಗಿ ಬಂದಂತಹ 371ಜೆ ಕಾನೂನು ನಾಲ್ಕು ವರ್ಷವಾದರೂ ಸಮರ್ಪಕವಾಗಿ ಜಾರಿಯಾಗುತ್ತಿಿಲ್ಲ ಎಂದರೆ ಈ ರಾಜ್ಯದಲ್ಲಿ ಸಂವಿಧಾನದಡಿಯಲ್ಲಿ ಸ್ಥಾಾಪಿತವಾದ ಸರಕಾರವಿದೆಯೇ ಎಂದು ಪ್ರಶ್ನಿಿಸಬೇಕಾಗುತ್ತದೆ. ಶಿಕ್ಷಣ ಮೀಸಲಾತಿಯನ್ನು ಪರಿಗಣಿಸಿದರೆ, ಈ ಭಾಗದ ಸಚಿವರು ಪದೇ ಪದೇ ಹೇಳುತ್ತಿಿರುವದು ಬಹಳಷ್ಟು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟುಗಳು ಸಿಕ್ಕಿಿವೆ, ಇಷ್ಟೊೊಂದು ಸೀಟುಗಳು ಹಿಂದೆಂದೂ ಹೈದ್ರಾಾಬಾದ್ ಕರ್ನಾಟಕ ಪ್ರದೇಶಕ್ಕೆೆ ಸಿಕ್ಕರಲಿಲ್ಲ ಎಂದು ಹೇಳುತ್ತಿಿದ್ದಾಾರೆ. ಈ ಸಚಿವರ ಮಾತನ್ನು ಕೇಳಿದರೆ, ಈ ಸರಕಾರ ನಮ್ಮ ಮೇಲೆ ಕೃಪೆ ತೋರಿದೆಯೇನೋ ಎಂದು ಕಾಣಿಸುತ್ತಿಿದೆ. ಈ ಮೂಲಕ ಸರಕಾರಕ್ಕೆೆ ಮತ್ತು ಈ ಭಾಗದ ಎಲ್ಲ ಸಚಿವರ ಗಮನಕ್ಕೆೆ ತರುವದೆನೆಂದರೆ, ಸಂವಿಧಾನದ 371ಜೆ ಅನ್ನುವದು ಈ ಭಾಗಕ್ಕೆೆ ಸಿಕ್ಕಿಿರುವದು ‘‘ಸಂವಿಧಾನಬದ್ದ ಹಕ್ಕು, ಭಿಕ್ಷೆ ಅಲ್ಲ’’ ಅನ್ನುವದು ನೆನಪಿಡಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ ಸೀಟುಗಳ ಹಂಚಿಕೆಯಲ್ಲಿ ಹೈದ್ರಾಾಬಾದ ಕರ್ನಾಟಕಕ್ಕೆೆ ಸಾಕಷ್ಟು ಅನ್ಯಾಾಯವಾಗುತ್ತಿಿದೆ, ಈ ಎರಡೂ ಇಲಾಖೆಗೆ ಹೈದ್ರಾಾಬಾದ ಕರ್ನಾಟಕದ ಸಚಿವರೆ ಇದ್ದರೂ ಅನ್ಯಾಾಯ ತಪ್ಪುುತ್ತಿಿಲ್ಲ. ಉದಾಹರಣೆಗೆ, ಹೈದ್ರಾಾಬಾದ ಕರ್ನಾಟಕದ ಒಬ್ಬ ವಿದ್ಯಾಾರ್ಥಿ ಮೆಡಿಕಲ್ ರ್ಯಾಾಂಕ್ ಪ್ರಕಾರ ಅವನಿಗೆ ನಾನ್ ಹೈಕ ಸೀಟು ಸಿಗುತ್ತಿಿದ್ದರೂ ಆ ವಿದ್ಯಾಾರ್ಥಿ ಹೈಕ ಕೋಟಾ ಕೇಳಿರುವದರಿಂದ ಕಡ್ಡಾಾಯವಾಗಿ ಹೈಕ ಸೀಟ ನೀಡಲಾಗುತ್ತಿಿದೆ. ಇದರಿಂದ ಹೈದ್ರಾಾಬಾದ ಕರ್ನಾಟಕದ ಕಡಿಮೆ ರ್ಯಾಾಂಕ್ ಇರುವ ವಿದ್ಯಾಾರ್ಥಿಗೆ ಸೀಟು ಸಿಗುವದಿಲ್ಲ, ಇದನ್ನು ಸರಿಪಡಿಸಲು ಸಾಕಷ್ಟು ಸಲ ಮನವಿ ಮಾಡಲಾಗಿದೆ ಮತ್ತು ಇಲಾಖೆಗೆ ನಮ್ಮದೇ ಭಾಗದ ಸಚಿವರು ಇದ್ದರೂ ಕಣ್ಣುಮುಚ್ಚಿಿ ಆಡಳಿತ ಮಾಡುತ್ತಿಿದ್ದಾಾರೆ.
ಉದ್ಯೋೋಗ ಮೀಸಲಾತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 26 ಇಲಾಖೆಗಳು ಹೈಕ ಮೀಸಲಾತಿ ನೀಡದೇ ನೇಮಕಾತಿ ಮಾಡಿಕೊಂಡಿದ್ದಾಾರೆ, ಕಳೆದ ತಿಂಗಳು ಜಿಲ್ಲಾಾ ಸಿವಿಲ್ ನ್ಯಾಾಯಾಧೀಶರ ಹುದ್ದೆೆಗಳ ನೇಮಕಾತಿಯಲ್ಲಿ ಹೈಕ ಮೀಸಲಾತಿ ನೀಡದೇ ನೇಮಕಾತಿ ಪ್ರಕ್ರಿಿಯೆ ನಡೆಯುತ್ತಿಿದೆ. ರಾಜ್ಯ ಸರಕಾರದ ಆಧೀನದಲ್ಲಿ ಬರುವ ಯಾವುದೇ ಇಲಾಖೆ/ಕಛೇರಿ/ಸಂಸ್ಥೆೆ/ನಿಗಮ/ಮಂಡಳಿ ಗಳಲ್ಲಿ ಮೀಸಲಾತಿ ನೀಡುವದು ಕಾನೂನು ಪ್ರಕಾರ ಕಡ್ಡಾಾಯ. ಇತ್ತೀಚಿಗೆ ಬೆಂಗಳೂರು ನಗರ ಜಿಲ್ಲೆೆಯ ಪಟ್ಟಣ ಪಂಚಾಯತಗಳಲ್ಲಿ ಪೌರಕಾರ್ಮಿಕರ ಹುದ್ದೆೆಗೆ ನಡೆದಂತ ನೇಮಕಾತಿಯಲ್ಲಿಯೂ ಸಹ ಮೀಸಲಾತಿ ನೀಡಿರುವದಿಲ್ಲ. ಇಂತಹ ನೂರು ಉದಾಹರಣೆ ನೀಡಬಹುದು, ಹೈದ್ರಾಾಬಾದ ಕರ್ನಾಟಕ ಭಾಗದ ಸಚಿವರು ಇರುವ ಇಲಾಖೆಗಳಲ್ಲಿಯೇ ಸಾಕಷ್ಟು ಮೀಸಲಾತಿ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿಿವೆ. ಬಹುತೇಕ ವಿಶ್ವವಿದ್ಯಾಾಲಯಗಳು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಾಟಾಚಾರಕ್ಕೆೆ ನೀಡುತ್ತಿಿದ್ದಾಾರೆ, ಕೆಲವು ಸಂಸ್ಥೆೆಗಳು ಮೀಸಲಾತಿಯನ್ನೇ ನೀಡದೆ ಪ್ರವೇಶ ಪಡೆಯುತ್ತಿಿವೆ. ಇನ್ನೂ ಹಲವಾರು ಶಿಕ್ಷಣ ಸಂಸ್ಥೆೆಗಳು ರಾಜ್ಯದ ಇತರೆ ಪ್ರದೇಶದಲ್ಲಿ ಸರಕಾರದಿಂದ ಅನುದಾನ ಪಡೆದು ವಿಶೇಷ ಕೋರ್ಸಗಳನ್ನು ನಡೆಸುತ್ತಿಿದ್ದು, ಹೈಕ ಮೀಸಲಾತಿ ನೀಡುತ್ತಿಿಲ್ಲ.
ಸಂವಿಧಾನದ 371ಜೆ ಅಡಿಯಲ್ಲಿ ಶಿಕ್ಷಣ, ಉದ್ಯೋೋಗದಲ್ಲಿ ಮೀಸಲಾತಿ ಮತ್ತು ಪ್ರದೇಶಾಭಿವೃದ್ಧಿಿ ಕುರಿತು ಕಾನೂನು ರಚಿಸಲು ಹೆಚ್.ಕೆ.ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿತ್ತು, ಸಮಿತಿಯಲ್ಲಿ ಕಾನೂನು ಸಚಿವರು ಮತ್ತು ಹೈದ್ರಾಾಬಾದ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆೆಗಳ ಜಿಲ್ಲಾಾ ಉಸ್ತುವಾರಿ ಸಚಿವರು ಸದಸ್ಯರಿದ್ದಾಾರೆ. ಕಾನೂನು ರಚಿಸಿದ ನಂತರ ಅದೇ ಸಮಿತಿಯನ್ನು ಅನುಷ್ಠಾಾನ ಸಮಿತಿಯನ್ನಾಾಗಿ ಮುಂದುವರೆಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಸಭೆಗಳನ್ನು ಮಾಡಿರುವ ಈ ಸಮಿತಯು ಇಷ್ಟೆೆಲ್ಲ ಮೀಸಲಾತಿ ಉಲ್ಲಂಘನೆ ಪ್ರಕರಣ ನಡೆಯುತ್ತಿಿದ್ದರೂ ಯಾವುದೇ ಕಟ್ಟುನಿಟ್ಟಿಿನ ಕ್ರಮ ಜರುಗಿಸಿರುವ ಒಂದೇ ಒಂದು ಉದಾಹರಣೆ ಇಲ್ಲ. ಇದೇ ಸಮಿತಿ ಕಾನೂನು ರಚಿಸಿ ಸರಕಾರಕ್ಕೆೆ ವರದಿ ಸಲ್ಲಿಸುವಾಗ 25 ಶಿಾರಸ್ಸುಗಳನ್ನು ಸರಕಾರಕ್ಕೆೆ ಸಲ್ಲಿಸಿದೆ. ಆ ಎಲ್ಲ ಶಿಾರಸ್ಸುಗಳನ್ನು ಕಾಲಮಿತಿಯೊಳಗೆ ಅನುಷ್ಠಾಾನಗೊಳಿಸುವದಾಗಿ ಮುಖ್ಯಮಂತ್ರಿಿಗಳು ಎರಡೂ ಸದನಗಳಲ್ಲಿ ಲಿಖಿತ ಭರವಸೆ ನೀಡಿದ್ದಾಾರೆ. ಆದರೆ, ಹಲವು ಸಲ ಮನವಿ ಸಲ್ಲಿಸಿದಾಗಲೂ ಇಲ್ಲಿಯವರೆಗೆ ಉಪಸಮಿತಿಯಾಗಲೀ ಅಥವಾ ಮುಖ್ಯಮಂತ್ರಿಿಗ ಳಾಗಲೀ ಈ ಶಿಾರಸ್ಸುಗಳನ್ನು ಅನುಷ್ಠಾಾನ ಮಾಡುವ ಬಗ್ಗೆೆ ಚಕಾರ ಎತ್ತಿಿರುವುದಿಲ್ಲ.
ಈ ಮೇಲಿನ 25 ಶಿಾರಸ್ಸುಗಳಲ್ಲಿ ಒಂದು ಶಿಾರಸ್ಸು, ರೋಣ ವಿಧಾನಸಭೆ ಸದಸ್ಯರಾದ ಜಿ.ಎಸ್.ಪಾಟೀಲರು 2013ರಲ್ಲಿ ಉಪಸಮಿತಿಗೆ ಮನವಿ ಸಲ್ಲಿಸಿ ರೋಣ ತಾಲ್ಲೂಕಿನ 28 ಹಳ್ಳಿಿಗಳು ಮತ್ತು ಮುಂಡರಗಿ ತಾಲ್ಲೂಕಿನ ಕೆಲವು ಹಳ್ಳಿಿಗಳು ನಿಜಾಮ ಆಡಳಿತಕ್ಕೊೊಳಪಟ್ಟಿಿದ್ದರಿಂದ ಅವುಗಳನ್ನು 371ಜೆ ವ್ಯಾಾಪ್ತಿಿಗೆ ಸೇರಿಸಬೆಕು ಎಂದು ಕೋರಿರುತ್ತಾಾರೆ. ಅದನ್ನು ತಮ್ಮ 25 ಶಿಾರಸ್ಸುಗಳಲ್ಲಿ ಇದನ್ನು ಸೇರಿಸಿ ಉಪಸಮಿತಿಯು ಸರಕಾರಕ್ಕೆೆ ವರದಿ ಸಲ್ಲಿಸಿದೆ.
ಹಾಗಾಗಿ ಗದಗ ಜಿಲ್ಲೆೆಯ ಕೆಲವು ಹಳ್ಳಿಿಗಳನ್ನು ಹೈದ್ರಾಾಬಾದ ಕರ್ನಾಟಕಕ್ಕೆೆ ಸೇರಿಸಿ 371ಜೆ ಸೌಲಭ್ಯ ನೀಡುವ ಬಗ್ಗೆೆ ೆಬ್ರವರಿ 23 ರಂದು ನಡೆದ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ಹೈಕ ಭಾಗಕ್ಕೆೆ ಸೇರಿಸುವ ನಿರ್ಣಯ ಕೈಗೊಂಡಿದ್ದಾಾರೆ. ಇಲ್ಲಿ ಬಹಳ ಸೂಕ್ಷ್ಮ ವಿಷಯವೆನೆಂದರೆ, ರೋಣ ಶಾಸಕರು ಮನವಿ ಸಲ್ಲಿಸಿರುವದು ರೋಣ ತಾಲ್ಲೂಕಿನ 28 ಹಳ್ಳಿಿಗಳು ಮತ್ತು ಮುಂಡರಗಿ ತಾಲೂಕಿನ ಕೆಲವು ಹಳ್ಳಿಿಗಳು ಎಂದಿದ್ದರೂ ಉಪಸಮಿತಿಯಲ್ಲಿ ಮಾತ್ರ ‘‘ಕಂದಾಯ ಇಲಾಖೆಯು ಭಾಷಾವಾರು ಪ್ರಾಾಂತ್ಯ ವಿಂಗಡಣೆ ಮುನ್ನಾಾ ದಿನಗಳಲ್ಲಿ ಹೈದ್ರಾಾಬಾದ ಪ್ರಾಾಂತ್ಯದಡಿಯಲ್ಲಿದ್ದು, ಪ್ರಸ್ತುತವಾಗಿ ಹಾಲಿ ಗದಗ ಜಿಲ್ಲೆೆಯ ವ್ಯಾಾಪ್ತಿಿಯಡಿಯಲ್ಲಿ ಬಂದಿರುವಂತಹ ಹಳ್ಳಿಿಗಳನ್ನು ಗುರುತಿಸಿ, ಹೈದ್ರಾಾಬಾದ ಕರ್ನಾಟಕ ಪ್ರದೇಶದ ಜಿಲ್ಲೆೆಗಳ ವ್ಯಾಾಪ್ತಿಿಯಡಿಯಲ್ಲಿ ಬರುವಂತೆ ಸೂಕ್ತ ಆದೇಶ ನೀಡಬೇಕು’’ ಎಂದು ನಿರ್ಣಯ ಕೈಗೊಂಡಿದ್ದಾಾರೆ.
ಒಂದು ವೇಳೆ ಈ ನಿರ್ಣಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕರೆ ಗದಗ ಜಿಲ್ಲೆೆಯ ಎಲ್ಲ ಹಳ್ಳಿಿಗಳು ಹೈದ್ರಾಾಬಾದ ಕರ್ನಾಟಕಕ್ಕೆೆ ಸೇರಿಸಿದರೂ ಆಶ್ಚರ್ಯ ಪಡಬೇಕಿಲ್ಲ.
ಸಚಿವ ಸಂಪುಟ ಉಪಸಮಿತಿಯಲ್ಲಿ ಈ ರೀತಿ ನಿರ್ಣಯವಾಗಲು ಮೂಲತಃ ಕಾರಣ, ಈ ಭಾಗದ ಸಚಿವರು ಉಪಸಮಿತಿಯಲ್ಲಿ ಭಾಗವಹಿಸದೇ ಇರುವದು. ೆಬ್ರವರಿ 23 ರಂದು ನಡೆದ ಉಪಸಮಿತಿಯಲ್ಲಿ ಹೈದ್ರಾಾಬಾದ ಕರ್ನಾಟಕದಿಂದ ಸಚಿವರಾದ ಈಶ್ವರ ಖಂಡ್ರೆೆ ಮತ್ತು ಬಸವರಾಜ ರಾಯರೆಡ್ಡಿಿ ಮಾತ್ರ ಹಾಜರಿದ್ದು, ಉಳಿದ ಸಚಿವರು ಸಭೆಗೆ ಹೋಗಿರುವದಿಲ್ಲ. ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿಿಯವರ ಹೇಳಿಕೆ ಪ್ರಕಾರ ತಾವು ಈ ನಿರ್ಣಯ ವಿರೋಧಿಸಿದ್ದು, ಈಶ್ವರ ಖಂಡ್ರೆೆ ಈ ನಿರ್ಣಯವನ್ನು ಬೆಂಬಲಿಸಿದ್ದಾಾರೆ ಎಂದಿದ್ದಾಾರೆ. ಬಸವರಾಜ ರಾಯರೆಡ್ಡಿಿಯವರು ಸಚಿವ ಸಂಪುಟ ಉಪಸಮಿತಿಯಲ್ಲಿ ವಿರೋಧಿಸಿದ್ದೇನೆ ಮತ್ತು ಈಶ್ವರ ಖಂಡ್ರೆೆ ಬೆಂಬಲ ನೀಡಿದ್ದಾಾರೆ ಎಂದು ಹೇಳಿದ್ದರೂ, ತಾವು ವಿರೋಧ ಮಾಡಿರುವದನ್ನೇ ಪತ್ರಿಿಕಾ ಗೋಷ್ಠಿಿ ನಡೆಸಿ ಈ ಮೊದಲೇ ಹೇಳಿದ್ದರೆ, ಈ ವಿಷಯ ಸಚಿವ ಸಂಪುಟಕ್ಕೆೆ ಹೋಗುತ್ತಿಿರಲಿಲ್ಲ ಮತ್ತು ಇದು ಇಷ್ಟೊೊಂದು ದೊಡ್ಡ ಸುದ್ದಿಯಾಗುತ್ತಿಿರಲಿಲ್ಲ.
ೆಬ್ರವರಿ 23ರ ಉಪಸಮಿತಿಯ ನಿರ್ಣಯವನ್ನು ಸಚಿವ ಸಂಪುಟ ಸಭೆಗೆ ಟಿಪ್ಪಣಿ ಮಾಡಿ ಸಂಪುಟದ ಅನುಮೋದನೆ ಕೋರಿ ಮಾರ್ಚ 3 ರಂದು ನಡೆದ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿದೆ. ನಿಜವಾಗಿಯೂ ಹೈದ್ರಾಾಬಾದ ಕರ್ನಾಟಕದ ಸಚಿವರಿಗೆ ಈ ಭಾಗದ ಬಗ್ಗೆೆ ಕಾಳಜಿ, ಭದ್ದತೆ ಇದ್ದಲ್ಲಿ ಸಂಪುಟ ಸಭೆಯ ನಂತರ ವಿವರಣೆ ನೀಡಬಹುದಿತ್ತು. ಸಂಪುಟ ಸಭೆಯಲ್ಲಿ ವಿರೋಧ ಮಾಡಿದ್ದೇವೆ, ಯಾವುದೇ ಕಾರಣಕ್ಕೂ ಬೇರೆ ಭಾಗದ ಹಳ್ಳಿಿಗಳನ್ನು 371ಜೆ ವ್ಯಾಾಪ್ತಿಿಗೆ ಸೇರಿಸುವದಿಲ್ಲ ಎಂದು ಹೇಳಬಹುದಿತ್ತು. ಅದರ ಬದಲಾಗಿ ಈ ವಿಷಯವನ್ನು ಮುಚ್ಚಿಿಹಾಕಲು ಪ್ರಯತ್ನ ಮಾಡಿದ್ದು, ಈ ಭಾಗದಲ್ಲಿ ಸಾಕಷ್ಟು ಸಂಘಟನೆಗಳು, ಸಾಹಿತಿಗಳು ವಿರೋಧ ಮಾಡಿದ ನಂತರ ವಿವರಣೆ ನೀಡಲು ಮುಂದಾಗಿರುವದು ಅತ್ಯಂತ ಖಂಡನೀಯವಾಗಿದೆ.
ಈ ಭಾಗದ ಹಿರಿಯ ನಾಯಕರು, 371ಜೆ ತಿದ್ದುಪಡಿಯ ರೂವಾರಿಯೂ ಆದಂತಹ ಮಲ್ಲಿಕಾರ್ಜುನ ಖರ್ಗೆಯವರು ಖಾರವಾಗಿಯೇ ಸರಕಾರದ ನಡೆಯ ವಿರುದ್ದ ಪ್ರತಿಕ್ರಿಿಯೆ ನೀಡಿದ್ದಾಾರೆ, ನಮ್ಮ ಭಾಗದ ನಾಯಕರು ಮಲ್ಲಿಕಾರ್ಜುನ ಖರ್ಗೆಯವರನ್ನು ಅನುಸರಿಸುವದು ಒಳಿತು.
ಅತ್ಯಂತ ಸೋಜಿಗದ ಸಂಗತಿ ಹೈದ್ರಾಾಬಾದ ಕರ್ನಾಟಕಕ್ಕೆೆ ಸಂಬಂದಿಸಿದ್ದೇನೆಂದರೆ, ಆಡಳಿತ ಪಕ್ಷದಿಂದ 371ಜೆ ಅನುಷ್ಠಾಾನದಲ್ಲಿ ಸಾಕಷ್ಟು ಲೋಪದೋಷವಿದ್ದು, ಬೇರೆ ಭಾಗದ ಹಳ್ಳಿಿಗಳನ್ನು ಹೈ-ಕ ಕ್ಕೆೆ ಸೇರಿಸಲು ಮುಂದಾಗಿರುವ ರಾಜ್ಯ ಸರಕಾರದ ನಡೆ ಒಂದು ಕಡೆಯಾದರೆ, ರಾಜ್ಯದಲ್ಲಿ ಇರುವ ವಿರೋಧ ಪಕ್ಷದ ನಡುವಳಿಕೆ ಎಂತಹದ್ದೆೆಂದರೆ, ಇಷ್ಟೆೆಲ್ಲ ಆಗುತ್ತಿಿದ್ದರೂ ವಿರೋಧ ಪಕ್ಷದ ನಾಯಕರೊಬ್ಬರೂ ಸರಕಾರದ ವಿರುದ್ದ ಮಾತನಾಡುವ ಧೈರ್ಯ ತೋರದೇ ಇರುವದು. ಇದು ಹೈ-ಕ ಕ್ಕೆೆ ಇರುವ ತಾತ್ಸಾಾರ ಮನೋಭಾವ ಎನ್ನಬೇಕೋ ಅಥವಾ ಹೊಟ್ಟೆೆಕಿಚ್ಚು ಎನ್ನಬೇಕೋ ಅಥವಾ ಹೈ-ಕ ದ ಪಾಲಿಗೆ ವಿರೋಧ ಪಕ್ಷಗಳು ಸತ್ತು ಹೋಗಿದ್ದಾಾವೆ ಎನ್ನಬೇಕೋ ಅಥವಾ ಇದನ್ನೆೆಲ್ಲ ಮತಬ್ಯಾಾಂಕ ರಾಜಕಾರಣ ಎಂದರೂ ತಪ್ಪಾಾಗಲಿಕ್ಕಿಿಲ್ಲ.
ಇನ್ನೂ ಈ ವಿಷಯದಲ್ಲಿ ಇಷ್ಟೆೆಲ್ಲ ಆದ ನಂತರವೂ ಗೊಂದಲವಿರುದು ನಿಜ, ಸಚಿವರು ಹೇಳುವದೇನೆಂದರೆ ಸಚಿವ ಸಂಪುಟದಲ್ಲಿ ತಿರಸ್ಕರಿಸಿದ್ದೇವೆ, ಆದರೆ, ಸಚಿವ ಸಂಪುಟ ಉಪಸಮಿತಿಯಲ್ಲಿ ಗದಗ ಜಿಲ್ಲೆೆಯ ಹಳ್ಳಿಿಗಳನ್ನು ಸೇರಿಸಬೇಕೆಂದು ನಿರ್ಣಯವಾಗಿರುವದರಿಂದ ಮುಂದೊಂದು ದಿನ ಅದೇ ನಿರ್ಣಯವನ್ನು ಸಚಿವ ಸಂಪುಟಕ್ಕೆೆ ತಂದು ಮರುಜಾರಿಗೆ ಪ್ರಯತ್ನ ಮಾಡುವದಿಲ್ಲ ಎನ್ನುವದು ಏನು ಗ್ಯಾಾರಂಟಿ. ಹಾಗಾಗಿ, ತಕ್ಷಣ ಉಪಸಮಿತಿಯಲ್ಲಿ ಆಗಿರುವ ನಿರ್ಣಯವನ್ನು ವಾಪಸ್ ಪಡೆದು ಹೈದ್ರಾಾಬಾದ ಕರ್ನಾಟಕದ ಜನರಲ್ಲಿ ಮೂಡಿರುವ ಸಂಶಯ ದೂರ ಮಾಡುವ ಕೆಲಸ ಉಪಸಮಿತಿಯಿಂದ ಆಗಲೀ.
ಹೈದ್ರಾಾಬಾದ ಕರ್ನಾಟಕದ ಜನತೆ ಪಕ್ಷಾತೀತವಾಗಿ ಯಾವುದೇ ಕಾರಣಕ್ಕೂ 371ಜೆ ದುರ್ಬಳಕೆ, ದುರ್ಬಲಗೊಳಿಸುವಿಕೆ, ಬೇರೆ ಭಾಗದ ಹಳ್ಳಿಿಗಳ ಸೇರ್ಪಡೆ, ಅಸಮರ್ಪಕ ಅನುಷ್ಠಾಾನ ಸಹಿಸಿಕೊಳ್ಳಬಾರದು, ಒಂದು ವೇಳೆ ಇದನ್ನು ಹೀಗೆ ಮುಂದುವರೆಯಲು ಬಿಟ್ಟರೆ ತೆಲಂಗಾಣಕ್ಕೆೆ ಆದಂತಹ ಪರಿಸ್ಥಿಿತಿ ನಮ್ಮದಾಗಬಹುದು.'