9/18/2019

ಜ್ಞಾನ ಮಂಟಪ ವಿವರ ಪುಟ

ಅರಿವಿನ ಪರಿಮಳ - 09 ಅಂತರಾತ್ಮಬೋಧೆ

Font size -16+

'
-ಸದ್ಗುರು ಶ್ರೀ ವಿದ್ಯಾಾನಂದ ಶರಣರು ಡಬ್ಬೇರುಮಡುವು


ಜೀವ ಕುಳವಳಿಯಿತ್ತು. ಜ್ಞಾನ ಕುಳವುಳಿಯಿತ್ತು. ಭವಪಾಶ ಹರಿಯಿತ್ತುಘಿ
ಅಜ್ಞಾನ ಹಿಂಗಿತ್ತು ಎಲೆ ಗೋಪಿನಾಥ ವಿಶ್ವೇಶ್ವರ ಲಿಂಗವೇ
ನಿಮ್ಮತ್ತ ಮನವಾಯಿತ್ತೆೆನಗೆ ಕೃಪೆ ಮಾಡು ಶಿವಧೊ ಶಿವಧೋ.

ತಾತ್ಪರ್ಯ :ಜೀವ ಕುಳವಳಿಯತ್ತು: ಇದಾವ ಜೀವ, ಜೀವವದು ಅಳಿದ ಕುಳ. ಇದು ಗುರು ಕಾರುಣ್ಯದ ಕುಳ. ವಿಶ್ವೇಶ್ವರನ ಲಿಂಗ ದತ್ತ ಮನವಾದ ಕುಳ. ಕುಳ ಕ್ಕೇನನ್ನಬೇಕು ಇದು ಪರಬ್ರಹ್ಮ ,ಪರಂಜ್ಯೋೋತಿ, ಸ್ವಯಂಜ್ಯೋೋತಿ, ನಿರಂತವಾಗಿರುವ ಮಂಗಳಮಯ ಚಿಜ್ಯೋೋತಿ.
ವಿಶ್ವೇಶ್ವರ ಲಿಂಗದತ್ತ ಮನ, ಆ ಮನ ಅದು ಲಿಂಗ. ಲಿಂಗವರತ ಮನ, ಲಿಂಗದಲ್ಲಿ ಬೆರತ ಮನ, ಲಿಂಗವಾದ ಮನ. ಇದು ವಿಶ್ವೇಶ್ವರನ ಲಿಂಗ ಕೃಪೆಯಲ್ಲಿ ಬೆಳಗುವ ಮನ. ಅರುವಿನ ಮನ.
ವಿಶ್ವೇಶ್ವರನ ಲಿಂಗವದು ವಿಶ್ವಕ್ಕೆೆಲ್ಲ ಬೆಳಗುವ ಲಿಂಗ. ಒಮ್ಮೆೆ ಕಂಡು ಒಮ್ಮೆೆ ಕಾಣದಂತಾಗುವುದಲ್ಲ. ಇದು ಪರ ಪ್ರಕಾಶವಲ್ಲ. ನಿರಂತರವಾಗಿ ಒಳಹೊರಗೆನ್ನದೆ ಬೆಳಗುಳ್ಳ ಬೆಳಗಿಂಗೆ ಉದಯವಾವುದು ಅಸ್ತವಾವುದು? ಚರವಾವುದು, ಅಚರವಾವುದು? ನಿಸ್ಸೀಮವಾಗಿ ಬೆಳಗುವ ಚಿನ್ಮಯ. ಈ ಲಿಂಗದತ್ತ ಮನವಾಗುವದೆಂದರೆ ಅನಂತ ಜನ್ಮಂಗಳ ನಿಷ್ಕಾಾಮ ಕರ್ಮದ ಪುಣ್ಯ. ವಿಶ್ವೇಶ್ವರ ಲಿಂಗವದು ವಿಶ್ವದೊಳಗೆ ನೋಡಬೇಕಾದುದಿಲ್ಲ ತನ್ನೊೊಳಗೆ ನೋಡುವುದು!
ನೋಡುವುದು ನೋಡಲರಿಯದೆ ಕೆಟ್ಟಿಿತ್ತೀ ಜಗವೆಲ್ಲ. ನೋಡುವುದ ನೋಡುವುಡೆ ಕೂಡಲಿಲ್ಲ ಅಗಲಲಿಲ್ಲ. ಗುಹೇಶ್ವರಾ ನಿಮ್ಮ ಶರಣ ಅನುಪಮ ಸುಖಿ. ವಿಶ್ವೇಶ್ವರಲಿಂಗ ತನ್ನೊೊಳಗೆ ನೋಡುವುದು. ಈ ಮಹಾಲಿಂಗವ ನೋಡದ್ದರಿಂದ ಜಗವೆಲ್ಲ ಕೆಟ್ಟಿಿತ್ತು. ಆರು ವಿಶ್ವೇಶ್ವರ ಲಿಂಗ ನೋಡ ಹೋಗಿ ಲಿಂಗವೆ ಆಯಿತ್ತು. ಆಗ ವಿಶ್ವವದು ವಿಶ್ವೇಶ್ವರ. ವಿಶ್ವವದು ಲಿಂಗಮಯವಾಗಿ ಬೆಳಗುವಲ್ಲಿ ಜೀವನೆಂಬ ಭಾವರೂಪ ಭ್ರಮ ನಷ್ಟವಾಯಿತ್ತು.
ಜ್ಞಾನಕುಳ ಉಳಿಯಿತ್ತು:
ಭ್ರಮ ನಿರಸನವಾಗುವುಡೆ ತಾನು ಲಿಂಗ. ವಿಶ್ವವು ಲಿಂಗ. ಲಿಂಗವದು ವಿಶ್ವೇಶ್ವರನೆಂಬುದು ಸ್ವತಃ ಸಿದ್ಧವು. ಇಂತಪ್ಪ ಜ್ಞಾನದಿಂದ ಇಲ್ಲದ ಕಲ್ಪಿಿತ ಇಲ್ಲವಾಗುವುದೆ ಭ್ರಮ ನಿರಸನ. ಇದು ಜೀವ ಕುಳವಳಿದ ಸಂಕೇತ. ಇದ್ದುದು ಇದ್ದಂತೆ ಇದ್ದುದು . ಇದು ಲಿಂಗವರಿತು ಸ್ವಯಲಿಂಗ ತಾನಾದುದೆ ಜ್ಞಾನ. ಜ್ಞಾನಕುಳವೆ ಲಿಂಗ ತಾನಾದುದು. ಇದುವೆ ಅಬಾಧಿತ ಕುಳ, ಇದು ನಿರಂತರವಾಗಿರುವ ಮಂಗಳಮಯ ಚಿಜ್ಯೋೋತಿ, ಇದು ನೆಲೆಯಿಲ್ಲದ ನಿಲವು.
ಭವಪಾಶ ಹರಿಯಿತ್ತು ಅಜ್ಞಾನ ಹಿಂಗಿತ್ತು:
ಗುರುಕೃಪೆಯಿಂದ ತಾನಾರೆಂದು ತನ್ನ ಸ್ವರೂಪದತ್ತ ಮುಖವಾಗಿ ಮನ ಅರಿಯಬಾರದ ಘನ ಅರಿಯಹೋಗುವುಡೆ ತಾನು ಅರಿವ ಅರುಹಿಸಿಕೊಂಬುದು ಪುಸಿಯಾಗಿ ಅರಿಯಲಿಲ್ಲ ; ತಾನು ಅರಿಯಬಾರದ ಘನವೆಂಬುದು ಮರೆಯದ್ದರಿಂದ ಆಗ ಜೀವನೆಂಬುದು ಪುಶಿ. ಭವದ ಬಯಕೆಯು ಪುಶಿ, ಮರವರುವೆಂಬುದು ಪುಶಿಯಾಗಲು ಅದುವೆ ಜ್ಞಾನಕುಳ ಉಳಿದ ಸಂಕೇತ.
ಜ್ಞಾನ ಕುಳ ಉಳಿದ ಸಂಕೇತ ತಾನಾರೆಂದರಿತ ಸಂಕೇತ. ಕಾರಣ ಜ್ಞಾನ ಕುಳವದು ಅಜಾತಕುಳ ಗುಣಾತೀತ ಕುಳ. ಅಚಿಂತ್ಯತ್ವವರಿತು ನಿಶ್ಚಿಿಂತನಾಗಿಹ ನಿರ್ಭಯಕುಳ. ಈ ಮಹಾಂತನಿಗೆ ಭವ ಪಾಶ ಹರಿಯಿತ್ತು. ಆಯಿತ್ತೆೆ ಉದಯಮಾನ ಹೋಯಿತ್ತೆೆ ಅಸ್ತಮಾನ ಎಂದಂತೆ ಜ್ಞಾನೋದಯವಾಗುವುಡೆ ಅಜ್ಞಾನ ಹಿಂಗಿತ್ತು.
ಎಲೆ ಗೋಪಿನಾಥ: ಇಂದ್ರಿಿಯಂಗಳೊಡೆಯನೆ ಅತೀಂದ್ರಿಿಯನೆ, ಇಂದ್ರಿಿಯಾತೀತನೆ ವಿಶ್ವೇಶ್ವರ ಲಿಂಗ, ವಿಶ್ವಾಾತೀತ ಲಿಂಗ, ಭಾವಕ್ಕಗಮ್ಯಲಿಂಗ ಬಹುಕಾಲದಿಂದಲೂ ಸಂಕಲ್ಪ, ವಿಕಲ್ಪಕ್ಕೊೊಳಪಟ್ಟ ಮನ ಭಾವಂಗಳಿಗೊಪ್ಪಿಿ ಭ್ರಾಾಂತವಾಗುವ ಮನ, ಈಗ ನಿಮ್ಮ ಕಡೆ ಮುಖವಾಗುವುದು ನಿಮ್ಮೊೊಳು ಸಮರಸವಾಗಲು ಹಂಬಲಿಸುವದಾಗಿದೆ. ಈ ಮನದ ಮುಖ ನಿಜ ಸುಖದ ಕಡೆ ಪ್ರವೃತ್ತವಾಗಿರುವುದು.
ನಿಮ್ಮತ್ತ ಮನವಾಯಿತ್ತೆೆನಗೆ ಕೃಪೆಮಾಡು ಶಿವಧೋ ಶಿವಧೋ:
ಇಲ್ಲಿ ಎರಡು ಸಲ ಕೃಪೆ ಮಾಡು ಎಂಬ ಸಂಭೋದನೆ ಇದೆ. ಈ ಮನ ನಿಮ್ಮ ಕಡೆ ಮುಖವಾಗದ ಮನ. ಈಗ ಮುಖವಾಗಿಹುದೆಂದಲ್ಲಿ ಪುನಃ ವಿಷಯಾದಿಗಳ ಕಡೆ ಮುಖವಾಗದಂತೆ ಕೃಪೆಮಾಡು ಇದಲ್ಲದೆ ನಿರಂತರ ಅಚಿಂತ್ಯವಾಗಿಹ ಸ್ವರೂಪ ಸುಖವ ಸವಿಯುವಂತೆ ಕೃಪೆಮಾಡು ಎಂದು ಸಂಬೋಧಿಸಿದುದಾಗಿದೆ.
ಎಲ್ಲೆೆಲ್ಲೊೊ ಶಿವಧೋ ಶಿವಧೋ ಎಂಬ ಸುನಾದದ ಸುಖವ ಸವಿಯುವಂತೆ ಮಾಡು. ಶರಣ ಲಿಂಗಮುಖವಾಗಿ ನುಡಿವನು. ಲಿಂಗಮುಖವಾಗಿ ನಡೆಯುವನು ಲಿಂಗಮುಖವಾಗಿ ನೋಡುವನು, ಲಿಂಗ ಮುಖವಾಗಿ ರುಚಿಸುವನು. ಶರಣ ಲಿಂಗ ಮುಖವಾಗಿ ತೃಪ್ತಿಿಯ ನೈದುವನು. ಶರಣ ಲಿಂಗ ಮಖವಾಗಿ ಸಂಗ ಮಾಡುವನು. ಲಿಂಗ ಕಾಯ ಶರಣ. ಶರಣ ಕಾಯಲಿಂಗ ಎಂಬ ಶರಣನ ಘನ ಗಂಭೀರ, ಮಹಾ ಸುಖವ ಸವಿಯುವ ಅರು ಹೃದಯ ಕೃಪೆ ಮಾಡು ಶಿವಧೋ ಶಿವಧೋ.
ಓ ಅತೀಂದ್ರಿಿ ದೇವನೇ ವಿಶ್ವದ ಸ್ವಯಂಜ್ಯೋೋತಿಯೆ ಎತ್ತ ನೋಡಿದಡತ್ತತ್ತ ನಿನ್ನ ಕಾಣುವಂತೆ ಲಿಂಗ ನೋಟವ ಕರುಣಿಸು. ನಿನ್ನ ರಮಿಸುವಂತೆ ಮಾಡುವದು ನಿನ್ನ ಕೃಪೆ ಇದು ಮಹಾತ್ಕೃಪೆ ತಂದೆ, ನಿನ್ನಯ ನೋಟ ನೋಡದ ನೋಟ, ನಿನ್ನನ್ನೆೆ ಕಂಡ ನೋಟ, ನಿನ್ನ ಕೂಟ, ಕೂಡದ ಕೂಟ, ಅಗಲದ ಕೂಟ, ಇದು ಪರವಶವಾಗುವ ಕೂಟ. ವರ್ಣಿಸುವರೆ ಅಗಮ್ಯವು, ಏಕೆಂದರೆ ಆವುದು ಅಗಮ್ಯವಾಗಿದೆ ಅದು ಅವರ್ಣೀಯವಾಗಿದೆ. ಅಲ್ಲಿ ನಾ ನೀನೆಂಬುದಕ್ಕೂ ತೆರಹಿಲ್ಲದ ಘನದ ನಿಲುವಾಗಿದೆ. ಅಂಥಹ ಮಹಾಘನದ ಸುಖವ ಸವಿಯುವ ಮಹತ್ಕೃಪೆ ಮಾಡು. ಶಿವಧೋ ಶಿವಧೋ ಎಂಬ ಸುಖದ ನಾದ ಇದು ಶಿವ ಸುಖದ ಸುನಾದ. ಶಿವೋಹಂ ಸುನಾದ. ಸುಖ ಸ್ವರೂಪೋಹಂ ಸುನಾದ. ಸುಖ ಸುಖ ಎಂಬ ಸುನಾದ. ಸುಖದ ಸುಖವಾಗಿಹ ಸುನಾದ. ಇದು ಸಚ್ಚಿಿದಾನಂದವರಿತ ನಿರಂತರ ಚಿದಾನಂದದ ಸುನಾದ. ಪರಿಪೂರ್ಣ ಪರಮಾನಂದ ಸುನಾದ. ಇದು ಶಿವಧೋ ಶಿವಧೋ ಎಂಬುದಾಗಿದೆ. ಇಲ್ಲಿ ತೋರುವ ಮಾಯೆ ತಾನಲ್ಲವೆಂದು, ತಾನು ಚಿದಾನಂದವೆಂದು ಹೇಳುವರುಂಟು, ಚಿಂತನ ಮಾಡುವರುಂಟು. ತಾನೆಂಬುದು ಅಚಿಂತ್ಯವಾಗಿರುವಲ್ಲಿ ಇದನಾರು ಅರಿಯರಲ್ಲ ಇದೆಂತಹ ಆಶ್ಚರ್ಯ ಅರಿವುಡೆ ಅಚಿಂತ್ಯ ಪದ ಸ್ವತಃ ಸಿದ್ಧಘಿ. ತನ್ನಿಿಂದ ತನಗೆ ವಿಧಿತವಾಗುವುದು ಆಗ ಸಹಜ ತಾನೆ ಅಜ ತಾನೆ.'