9/18/2019

ಜ್ಞಾನ ಮಂಟಪ ವಿವರ ಪುಟ

ಹೋಮಿಯೋಪತಿಗೆ ಶಾಶ್ವತ ನೈಸರ್ಗಿಕ ನಿಯಮದ ಆಧಾರ ಇದೆ - ಡಾ.ರುದ್ರೇಶ್ ಡೈರಿ

Font size -16+

'
- ಡಾ.ಬಿ.ಟಿ. ರುದ್ರೇಶ
ಖ್ಯಾತ ಹೋಮಿಯೋಪತಿ ವೈದ್ಯರು
ಅಶ್ವಿನಿ ಹೋಮಿಯೋ ಕ್ಲಿನಿಕ್ ಬಸವನಗುಡಿ.
ಸಿಂಡಿಕೆಟ್ ಬ್ಯಾಂಕ್ ಎದುರುಗಡೆ ಡಿ.ವಿ.ಜಿ ರಸ್ತೆ ,ಬೆಂಗಳೂರು

ಡಾ. ರುದ್ರೇಶ ಪರಿಚಯ

ನಾಡೋಜ ಡಾ.ಬಿ.ಟಿ.ರುದ್ರೇಶ್ ನಾಡಿನ ಹೆಸರಾಂತ ಹೋಮಿಯೋಪತಿ ವೈದ್ಯರು. ಬೆಂಗಳೂರಿನ ಬಸವನಗುಡಿಯ ಡಿ.ವಿ.ಜಿ.ರಸ್ತೆಯಲ್ಲಿ 1981ರಿಂದ ಅಶ್ವಿನಿ ಹೋಮಿಯೋ ಕ್ಲಿನಿಕ್ ಆರಂಭಿಸಿ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಅವರು ಇಲ್ಲಿಯವರೆಗೆ 20 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನು ತಮ್ಮ ಕಾಯಿಲೆಗೆ ಎಲ್ಲೂ ಚಿಕಿತ್ಸೆ ಇಲ್ಲ ಎಂದು ನೊಂದು ಬೆಂದು ಹೋಗಿದ್ದ ಎಷ್ಟೋ ಜನ ರೋಗಿಗಳಿಗೆ ಚಿಕಿತ್ಸೆ ನೀಡಿ ಸಂಪೂರ್ಣ ಗುಣ ಮುಖರಾಗಿಸಿ ಅವರ ಜೀವನ,ಮೊಗದಲ್ಲಿ ಮಂದಹಾಸ ಮೂಡಿಸಿದವರು ಡಾ.ರುದ್ರೇಶ್. ಹಾಗೆಯೇ 2000 ಸಂತಾನಹೀನ ಮಹಿಳೆಯರಿಗೆ ಸಂತಾನ ಆಗುವಂತೆ ಚಿಕಿತ್ಸೆ ನೀಡಿದ ವರು.
ದಿ.28-03-1956ರಂದು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ ಜನಿಸಿದ ರುದ್ರೇಶ್ ತಮ್ಮ ಯಶಸ್ವಿ ಚಿಕಿತ್ಸೆಯಿಂದ ಹೋಮಿಯೋಪತಿ ಬಗ್ಗೆ ಮೂಗು ಮುರಿಯು ತ್ತಿದ್ದವರ ಕಣ್ಣು ತೆರೆಸಿದವರು. ಇವರ ವೃತ್ತಿ,ಪ್ರವೃತ್ತಿಗೆ ಹತ್ತು ಹಲವು ಉನ್ನತ ಪ್ರಶಸ್ತಿಗಳು ಹುಡುಕಿ ಕೊಂಡು ಬಂದಿವೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಕುರಿತು ಲೇಖನಗಳು ಪ್ರಕಟವಾಗಿವೆ. ಟಿ.ವಿ.ವಾಹಿನಿ ಯಲ್ಲೂ ಸಂದರ್ಶನಗಳು ಪ್ರಸಾರವಾಗಿವೆ. ಪುಸ್ತಕಗಳು, ಅಭಿನಂದನಾ ಗ್ರಂಥ ಗಳು ಪ್ರಕಟಗೊಂಡಿವೆ. ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷ , ಕೇಂದ್ರೀಯ ಹೋಮಿಯೋಪತಿ ಪರಿಷತ್ ಕಾರ‌್ಯಕಾರಿಣಿ ಸದಸ್ಯತ್ವ ಜೊತೆಗೆ ಇತರ ಸಂಸ್ಥೆಗಳ ಸದಸ್ಯರಾಗಿ ಪ್ರಸಿದ್ದಿ ಹೊಂದಿದ್ದಾರೆ.
ಡಾ.ರುದ್ರೇಶ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕಂಡ ನೂರಾರು ಪ್ರಕರಣಗಳ ಪೈಕಿ ಆಯ್ದ ಅಪರೂಪದ ಪ್ರಕರಣಗಳಿಗೆ ಪುಸ್ತಕರೂಪ ನೀಡಿದ್ದು, ‘‘ಡಾ.ರುದ್ರೇಶ್ ಡೈರಿ ’’ ಶೀರ್ಷಿಕೆಯ ಪುಸ್ತಕದಿಂದ ಆಯ್ದ ಲೇಖನಗಳು ವಾರಕ್ಕೊಮ್ಮೆ ಸುದ್ದಿಮೂಲ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. ಪ್ರಕಟಿಸಲು ಸಂತೋಷದಿಂದ ಒಪ್ಪಿಕೊಂಡ ಡಾ.ರುದ್ರೇಶ್ ಅವರಿಗೆ ವಂದನೆಗಳು.
....................

ಸಾವು ಮತ್ತು ಕಾಯಿಲೆ ಎಂಬ ಎರಡು ವಿಷಯಗಳ ಬಗ್ಗೆ ಮನುಷ್ಯ ತನ್ನ ಆದಿಯಿಂದಲೂ ತಲೆ ಕೆಡಿಸಿ ಕೊಂಡಿದ್ದಾನೆ. ಆದರೆ ಪ್ರಕೃತಿಯ ನಿಯಮಗಳು ಚಿಕಿತ್ಸೆಯ ಭಾಗ ವಾಗಿರಬೇಕು ಎಂಬುದನ್ನು ಮರೆತು ಇವೆರಡನ್ನೂ ಗೆಲ್ಲಲು ವಿಫಲವಾ ಗಿದ್ದಾನೆ. ಹಾಗೂ ಇರುವ ಸಮಸ್ಯೆ ಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿ ದ್ದಾನೆ. ಆದರೆ ನಾನು ನಂಬಿರುವ ಹೋಮಿಯೋಪತಿಗೆ ಶಾಶ್ವತ ನೈಸರ್ಗಿಕ ನಿಯಮದ ಆಧಾರ ಇದೆ ಎನ್ನುವುದೇ ನನ್ನ ಸಮಾಧಾನ, ಸಂತಸಕ್ಕೆ ಕಾರಣ.
ನಿಮಗೆ ಈ ವಿಷಯ ಗೊತ್ತಿದ್ದರೆ ಒಳಿತು. ಕಾಯಿಲೆ ಕೇವಲ ಪರಾವ ಲಂಬಿ ಕೀಟಗಳಿಂದ ಬರುವುದಿಲ್ಲ. ಆದರೆ ಮನುಷ್ಯ ತನ್ನ ಸಂಬಂಧವನ್ನು ಕುಟುಂಬ, ಕಾರ‌್ಯಕ್ಷೇತ್ರ ಹಾಗೂ ಸಮಾಜದ ಜತೆ ಸುಮಧುರ ವಾಗಿಟ್ಟುಕೊಳ್ಳದಿದ್ದರೆ ಕಾಯಿಲೆ ಆರಂಭ ಆಗುವುದು ನಿಶ್ಚಿತ. ಕಾಯಿಲೆ ಬಂತೆಂದರೆ ನೀವು ವೈದ್ಯರ ಬಳಿಗೆ ಹೋಗಲೇಬೇಕು. ಆದರೆ ಆ ವೈದ್ಯ ಹೇಗಿರಬೇಕು ? ನೀವು ಚಿಕಿತ್ಸೆ ಪಡೆಯಲು ಹೋಗುವ ವೈದ್ಯ ಸ್ನೇಹಿ ತನಾಗಿರಬೇಕು, ಹಿತೈಷಿಯಾಗಿರ ಬೇಕು. ಮಾರ್ಗ ದರ್ಶಕನಾಗಿರ ಬೇಕು. ಓರ್ವ ವೈದ್ಯ ಹಾಗಿಲ್ಲದಿದ್ದರೆ ಚಿಕಿತ್ಸೆಗೆ ಸ್ಪಂದಿಸುವ ಮನೋಸ್ಥಿತಿಗೆ ಯಾವುದೇ ರೋಗಿ ಸಿದ್ಧನಾಗು ವುದು ಸಾಧ್ಯವಿಲ್ಲ.ಆದರೆ ಇವತ್ತಿನ ಪರಿಸ್ಥಿತಿ ಹೇಗಿದೆ ? ನಿಮಗೇ ಗೊತ್ತು.ನಿಮ್ಮ ಅನುಭವಗಳೇ ಕಹಿಯನ್ನೂ ಉಣಿಸಿರಬಹುದು ಸಿಹಿಯನ್ನೂ ತಿನ್ನಿಸಿರಬ ಹುದು.
ಇದು ಜಾಗತೀಕರಣದ ಯುಗ. ನಿಮಗೆ ಔಷಧಿ ಕೊಡು ವವನು ವೈದ್ಯನಲ್ಲ, ವರ್ತಕ. ಯಾವ ಕಾಯಿಲೆಗೆ ಯಾವ ಔಷಧಿ ಎಂಬು ದನ್ನು ವೈದ್ಯ ನಿರ್ಧರಿಸುವುದಕ್ಕಿಂತ ಅದರ ತಯಾ ರಕರು ನಿರ್ಧರಿಸು ತ್ತಾರೆ. ವಿವಿಧ ಕಾಯಿಲೆಗಳಿಗೆ ವಿವಿಧ ರೀತಿಯ ಪರೀಕ್ಷೆಗಳಿಗೆ ಒಳಪಡಿಸುವ ಅತ್ಯಾಧುನಿಕ ಯಂತ್ರಗಳೇ ಇವೆ. ಆದರೆ ಇಂಥ ಪರೀಕ್ಷೆಗಳಲ್ಲಿ ನಿಮಗೆ ಕಾಯಿಲೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುವ ನಿಗದಿತ ಪ್ರಮಾಣಗಳನ್ನು ಔಷಧ ತಯಾರಕರೇ ನಿರ್ಧರಿಸು ತ್ತಾರೆ. ಅಂದರೆ ನಿಮಗೆ ಕಾಯಿಲೆ ಇದೆ ಅಥವಾ ಇಲ್ಲ ಎನ್ನುವುದನ್ನು ಅತ್ಯಾ ಧುನಿಕ ಸಲಕರಣೆಗಳು ಮತ್ತು ಔಷಧ ತಯಾರಕರು ಮೊದಲೇ ನಿರ್ಧರಿಸಿ ರುತ್ತಾರೆ. ವಿಪರ್ಯಾಸ ಎಂದರೆ ಈ ಯಂತ್ರ ಗಳಿಗೆ ಮನುಷ್ಯನ ಭಾವನೆ ಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದಿರುವುದು !!!
ಆದರೆ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಇಂಥ ಯಾವು ದೇ ಸಮಸ್ಯೆ ಇಲ್ಲ. ಹೋಮಿಯೋ ಪತಿಯಲ್ಲಿ ಮನಸ್ಸನ್ನು ರೋಗಗ್ರಸ್ತ ವಾಗಿ ಮಾತ್ರ ನೋಡುವುದಿಲ್ಲ. ಯಾಕೆಂದರೆ ಮನಸ್ಸು,ಬುದ್ಧಿ ಮತ್ತು ದೇಹದ ನಡುವೆ ಸಮನ್ವಯತೆ ಇರ ಬೇಕು.ಈ ಸಮನ್ವಯತೆಯ ಹಳಿ ತಪ್ಪಿ ದಾಗಲೇ ಈ ಕಾಯಿಲೆ ಹುಟ್ಟಿ ಕೊಳ್ಳು ತ್ತದೆ. ಈ ಕಾರಣದಿಂದಲೇ ಹೋಮಿ ಯೋಪತಿ ಚಿಕಿತ್ಸಾ ಪದ್ಧತಿಯಲ್ಲಿ ಮನುಷ್ಯನನ್ನು ಬಿಡಿಬಿಡಿ ಯಾಗಿ ನೋಡದೇ ಇಡಿಯಾಗಿ ನೋಡಲಾ ಗುತ್ತದೆ. ರೋಗಿಗೆ ಚಿಕಿತ್ಸೆ ಕೊಡದೆ ರೋಗಕ್ಕೆ ಕೊಟ್ಟರೆ ಒಂದು ಹೋಗಿ ಮತ್ತೊಂದು ರೋಗ ಬರು ತ್ತದೆ. ವೈದ್ಯ ಹೇಗಿರಬೇಕು ಎಂಬ ಹತ್ತು ಹಲವು ಕಟ್ಟುಪಾಡುಗಳನ್ನು, ಮಾನ ವೀಯ ಮೌಲ್ಯಗಳನ್ನು ಹೋಮಿ ಯೋಪತಿ ನಿಮಗೆ ಕಲಿಸಿಕೊಟ್ಟಿದೆ. ಕಳೆದ 35 ವರ್ಷಗಳಿಂದ 20 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿರುವ ಅನು ಭವದಿಂದ ನನಗೆ ಈ ಅಂಶಗಳು ವೇದ್ಯವಾಗಿದೆ.
ಈ ಕೃತಿಯ ಬಗ್ಗೆ ಹೇಳುವು ದಾದರೆ, ನನ್ನ ವೃತ್ತಿ ಜೀವನಕ್ಕೆ ಸವಾ ಲಾಗಿ ಯಶಸ್ಸು ಪಡೆದ ನೂರಾರು ಪ್ರಕರಣಗಳಿದ್ದರೂ ಕೆಲವು ಮಿತಿ ಗಳಿಂದಾಗಿ ಸದ್ಯ ಹದಿನೈದು ಪ್ರಕರಣ ಗಳನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದೇನೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಎಂಬಂ ಥ ಇನ್ನೂ ಅದೆಷ್ಟೋ ಪ್ರಕರಣಗಳನ್ನು ಇಲ್ಲಿ ದಾಖಲಿಸಿಲ್ಲ. ಈ ಕೆಲಸವನ್ನು ಮುಂದೆಂದಾದರೂ ಮಾಡುತ್ತೇನೆ. ಇಲ್ಲಿ ದಾಖಲಿಸಿರುವ ಎಲ್ಲ ಪ್ರಕರಣ ಗಳೂ ನೈಜ ಘಟನೆಗಳೇ. ವಿಡಿಯೋ ಚಿತ್ರೀಕರಣದ ಸಾಕ್ಷ್ಯಾ ಧಾರಗಳ ಸಹಿತ ರಾಷ್ಟ್ರೀಯ, ಅಂತರಾಷ್ಟ್ರೀಯ ಕಾರ‌್ಯಾಗಾರಗಳಲ್ಲಿ ಇವುಗಳಲ್ಲಿ ಕೆಲ ವನ್ನು ಮಂಡಿಸಿದ್ದೇನೆ. ಇದರಲ್ಲಿ ಕಂಡ ಯಶಸ್ಸು ರಾಷ್ಟ್ರಾದ್ಯಂತ ನನಗೆ ಹೆಸರು ತಂದು ಕೊಟ್ಟಿವೆಯೇ ಹೊರತು ಇವ್ಯಾವುವೂ ಪವಾಡವೂ ಅಲ್ಲ,ಕಟ್ಟು ಕತೆ ಗಳೂ ಅಲ್ಲ.ಆದರೆ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ಎಲ್ಲ ಪ್ರಕರಣಗಳಲ್ಲಿ ಯಾರದೇ ಹೆಸರನ್ನು ಬಹಿರಂಗಪಡಿಸಿಲ್ಲ. ವೈದ್ಯಕೀಯ ಸಂಹಿತೆಯೂ ಅದನ್ನು ಒಪ್ಪುವುದಿಲ್ಲ. ಇಲ್ಲಿ ಕೆಲವೇ ಪ್ರಕರಣಗಳನ್ನು ವಿವರಿಸಿ ದ್ದೇನೆಂದ ಮಾತ್ರಕ್ಕೆ ಇದೇ ಹೋಮಿ ಯೋಪತಿಯಲ್ಲ. ಕಲ್ಲಂಗಡಿ ಹಣ್ಣಿಗೆ ಚಂದ್ರಿಕೆ ಹಾಕಿದಂತೆ ಕೆಲವು ನಿದರ್ಶ ನಗಳು ಮಾತ್ರ ಹೋಮಿಯೋ ಪತಿಯ ವಿಸ್ತಾರ ಅಂಥದ್ದು. ನನ್ನ ಅನುಭವದ ವ್ಯಾಪ್ತಿಯೂ ವಿಸ್ತರಿಸುತ್ತಾ ಹೋಗುವುದಕ್ಕೆ ಕಾರಣರಾದವರು ನನ್ನ ಮೇಲೆ ವಿಶ್ವಾಸವಿರಿಸಿ ನಾನು ಅಂಥ ಸವಾಲುಗಳನ್ನು ಸ್ವೀಕರಿಸಲು ಅವಕಾಶ ಕೊಟ್ಟ ವ್ಯಕ್ತಿಗಳು. ಇಂಥ ಎಲ್ಲರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರೆ ನನ್ನ ಚಿಕಿತ್ಸೆಯ ಬಗೆಗಿನ ಅವರ ವಿಶ್ವಾಸಕ್ಕೆಯೇ ಹೊರತು ರೋಗಿಗಳ ಸಂಖ್ಯೆ ಹೆಚ್ಚಾಗಲಿ ಎಂಬ ಕಾರ್ಪೋ ರೇಟ್ ಮನೋಸ್ಥಿತಿ ನನ್ನದಲ್ಲ. ವೈದ್ಯ ನಾದವನ ಮನೋಧರ್ಮವೂ ಹೀಗಿರಬಾರದು. ಈ ಮಾತನ್ನು ಉದ್ದೇಶಪೂರ್ವಕವಾಗಿಯೇ ಇಲ್ಲಿ ಉಲ್ಲೇಖಿಸಿದ್ದೇನೆ. ಇತ್ತೀಚಿನ ದಿನ ಗಳಲ್ಲಿ ದೊಡ್ಡ ಷೋರೂಂಗಳಂತೆ ರೂಪಾಂತರ ಹೊಂದಿರುವ ಔಷಧ ಅಂಗಡಿಗಳಿಂದ ರೋಗಿಗಳ ಮೊಬೈಲ್ ಗಳಿಗೆ ಬರುವ ಸಂದೇಶಗಳೇ ನನ್ನ ಈ ಮಾತಿಗೆ ಕಾರಣ. ‘‘ ನೀವು ಆರು ನೂರು ರೂಪಾಯಿ ಔಷಧಿ ಖರೀದಿ ಸಿದರೆ ಟೂಥ್‌ಪೇಸ್ಟ ಉಚಿತ ’’ ಎನ್ನುವಂತೆ ಸಂದೇಶಗಳು ಅದೆಷ್ಟೋ ರೋಗಿಗಳಿಗೆ ಬಂದಿರುವುದನ್ನು ನಾನೇ ನೋಡಿದ್ದೇನೆ. ಐನೂರು ರೂಪಾಯಿ ಔಷಧ ಖರೀದಿಸಿದರೆ ಶೇ.20ರಷ್ಟು ರಿಯಾಯಿತಿ ಎನ್ನುವಂತ ಫಲಕ ಗಳೂ ಔಷಧ ಅಂಗಡಿಗಳಲ್ಲಿ ರಾರಾಜಿಸು ವುದನ್ನು ಕಂಡಿದ್ದೇನೆ. ಆದರೆ ಪ್ರಾಮಾ ಣಿಕತೆಗೆ ಬದ್ಧ ವಾದ ಹೋಮಿ ಯೋಪತಿ ಚಿಕಿತ್ಸೆ ಇಂಥ ವ್ಯಾಪಾರಿ ನಿಲುವನ್ನು ಉತ್ತೇಜಿಸುವುದಿಲ್ಲ. ಹಾಗೆ ಯಾರಾದರೂ ಮಾಡಿದರೆ ಅದು ಹೋಮಿಯೋಪತಿಯ ತಪ್ಪಲ್ಲ. ಕೆಲವು ವ್ಯಕ್ತಿಗಳ ವ್ಯಾಪಾರಿ ಮನೋ ಧರ್ಮದ ತಪ್ಪು. ಆಡು ಭಾಷೆಯಲ್ಲಿ ಹೇಳುವುದಾದರೆ ಕೆಮ್ಮಿನಿಂದ ಕ್ಯಾನ್ಸ ರ್‌ವರೆಗೆ ಹೋಮಿಯೋಪತಿಯಲ್ಲಿ ಚಿಕಿತ್ಸೆ ಇದೆ. ಪ್ರಪಂಚದ ಯಾವುದೇ ಔಷಧಿಯ ಪದ್ಧತಿ ಚಿಕಿತ್ಸೆ ನೀಡುವ ಎಲ್ಲ ರೋಗಗಳಿಗೆ ಹೋಮಿ ಯೋಪತಿಯಲ್ಲಿ ಪರಿಹಾರವಿದೆ. ಅದೂ ಅತ್ಯಂತ ಕಡಿಮೆ ಖರ್ಚಿನಲ್ಲಿ. ಇತರ ಚಿಕಿತ್ಸಾ ಪದ್ಧತಿಗಳಿಂದ ‘ಅಗದು ’ಎಂದು ಕೈಚೆಲ್ಲಿದ ಅನೇಕ ಪ್ರಕರ ಣಗಳು ಆಗಿವೆ ಎಂಬುದಕ್ಕೆ ನನ್ನ ಕ್ಲಿನಿಕ್‌ನ ಎದುರು ಮೂರು ದಶಕ ದಿಂದ ತಿಂಗಳುಗಳ ಮುನ್ನವೇ ಸಾಲು ಗಟ್ಟಿ ನಿಲ್ಲುವ ಎಲ್ಲ ಜಾತಿ, ಧರ್ಮ, ವರ್ಗ, ಅಂತಸ್ತುಗಳಿಗೆ ಸೇರಿದ ಜನರೇ ನಿದರ್ಶನ. ಗುಣಮುಖವಾಗಿಸುವ ಈ ಕಾರ‌್ಯದಿಂದಾಗಿ ಪ್ರಪಂಚದ ಯಾವ ಕೋಟ್ಯಾಧಿಪತಿಗೂ ಸಿಗದ ಸಂತಸ, ನೆಮ್ಮದಿ ನನ್ನದು. ಇದು ನನ್ನ ಆರೋ ಗ್ಯದ ಗುಟ್ಟು ಕೂಡಾ. ಬಹಳ ಪ್ರಕರಣ ಗಳಲ್ಲಿ ‘‘ಎಲ್ಲೂ ಗುಣ ಕಾಣದೇ ನನ್ನ ಬಳಿ ಬಂದು ಸರಿ ಹೋದರು ’’ ಎಂದು ಬರೆ ದಿರುವುದು ವಸ್ತು ಸ್ಥಿತಿಯೇ ಹೊರತು ಅಹಮಿಕೆಯಲ್ಲ.
ನನ್ನ ವೃತ್ತಿ ಜೀವನದಲ್ಲಿ ಅದೆಷ್ಟೋ ಸವಾಲುಗಳನ್ನು ಎದುರಿಸಿ ಯಶಸ್ವಿ ಯಾಗಿರುವ ಪ್ರಕರ ಣಗಳನ್ನು ಅಲ್ಲಲ್ಲಿ ದಾಖಲಿಸುತ್ತಾ ಬಂದಿರುವುದಕ್ಕೆ ಕಾರಣ ಹೋಮಿಯೋಪತಿಯ ಬಗ್ಗೆ ಜನರಲ್ಲಿ ಸಕಾರಾತ್ಮಕ ಮನೋಭಾವ ರೂಪಿಸು ವುದಷ್ಟೇಆಗಿದೆಯೇ ಹೊರತು ಇದರಲ್ಲಿ ಯಾವುದೇ ವೈಯಕ್ತಿಕ ಲಾಭ ನಷ್ಟದ ಲೆಕ್ಕಾಚಾರ ಇರಲಿಲ್ಲ. ಇಲ್ಲಿರುವ ಬಹುತೇಕ ಪ್ರಕರಣ ಗಳನ್ನು ಓದುತ್ತಿದ್ದರೆ ಇವೆಲ್ಲ ಮಾನಸಿಕ ಕಾಯಿಲೆಗಳಲ್ಲವೇ, ಹೋಮಿಯೋ ಪತಿ ಅಂದ್ರೆ ಇದೇನಾ ಎನ್ನುವ ಭಾವನೆ ನಿಮಗೆ ಬರಲಿಕ್ಕೂ ಸಾಕು. ಆದರೆ ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ಗೆ ಸಂಬಂಧಿಸಿದ ಇನ್ನಿತರ 3 ಪ್ರಕರಣಗಳನ್ನು ಇಲ್ಲಿ ವಿವರಿಸಿದ್ದೇನೆ. ಮೇಲ್ನೋಟಕ್ಕೆ ಏನೂ ಇಲ್ಲ ಎಂಬಂ ತಿದ್ದ ಕೇಸ್‌ಗಳೂ ಸಹ ಬಗೆಯುತ್ತಾ, ಬಿಚ್ಚಿಟ್ಟದ್ದನ್ನು ಪದರ ಪದರವಾಗಿ ಬಿಡಿಸುತ್ತಾ ಹೋಗಿ ಒಂದು ತಾರ್ಕಿಕ ಅಂತ್ಯ ಕಂಡು ಅದೆಷ್ಟೋ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ. ಮಿತ್ರ, ಗುರು ಹಾಗೂ ಕಾಂತಾ ಸಮ್ಮಿತಿ ಯಂತೆ ವೈದ್ಯ ಸಮಿತಿಯ ಅಗತ್ಯ ಗುರು ತರವಾದದ್ದು ಎಂದು ಮನ ಗಂಡಿದ್ದೇನೆ.
ವಿಜ್ಞಾನದಲ್ಲಿ ಕಾರ‌್ಯ-ಕಾರಣ ಸಂಬಂಧ ಎಲ್ಲರಿಗೂ ತಿಳಿದೇ ಇದೆ. ಆದರೆ ಮಗು ಹುಟ್ಟಲು 9 ತಿಂಗಳ ಹಿಂದೆ ನಡೆದ ಒಂದು ಮಿಲನವೇ ಕಾರಣ ಎಂದು ಸಾವಿರಾರು ವರ್ಷಗಳ ಕಾಲ ಮನುಷ್ಯನಿಗೆ ತಿಳಿದಿರಲಿಲ್ಲ. ಶೇ.80ರಷ್ಟು ಕಾಯಿಲೆಗಳಿಗೆ ಕಾರಣಗೊತ್ತಿಲ್ಲ ಎನ್ನುವ ವಿಜ್ಞಾನ, ಅದು ಹೇಗೆ ವೈಜ್ಞಾನಿಕವಾಗುತ್ತದೆ ಎನ್ನುವುದೇ ನನ್ನ ಪ್ರಶ್ನೆ. ಆದರೆ ಹೋಮಿಯೋಪತಿಗೆ ಕಾರ‌್ಯ- ಕಾರಣ ಸಂಬಂಧ ತಿಳಿದಿದೆ. ಐ್ಞ ಠ್ಟಞಛಿ ಟ್ಛ ಠಿಛಿ ಜ್ಝ್ಝಿಜ್ಞಿಛಿ ಟ್ಛ ಠಿಛಿ ಞಚ್ಜಟ್ಟಜಿಠಿ , ಅ ್ಛಚ್ಚಠಿ ್ಚಚ್ಞ್ಞಟಠಿ ಚಿಛಿ ಛ್ಝಿ ಠ್ಟ್ಠಿಛಿ ಎನ್ನುತ್ತಾನೆ ಲಿಂಕನ್.
ಜೀವ ಮತ್ತು ಜೀವನ ನಮ್ಮೆಲ್ಲ ಜಾತಿ,ಮತ,ಪಂಥಗಳಿಗಿಂತ ದೊಡ್ಡದು. ಇದನ್ನು ಠಿ ಚ್ಞ ್ಚಟಠಿ ಅಲ್ಲ ಠಿ ಚ್ಝ್ಝ ್ಚಟಠಿ ಸಂರಕ್ಷಿಸಬೇ ಕಾದ್ದು ನಮ್ಮೆಲ್ಲರ ಹೊಣೆ. ದುಬಾರಿ ಯಲ್ಲದ, ಅಪಾಯಕಾರವಲ್ಲದ, ಮಾನವೀ ಯ ಮೌಲ್ಯಗಳನ್ನು ಒಳಗೊಂಡ ಹೋಮಿಯೋ ಪತಿಯನ್ನು ಪಾಲಿಸಿ ದರೆ ನೀವು ಪ್ರಕೃತಿಯನ್ನು ಹಿಂಬಾಲಿ ಸುತ್ತಿದ್ದೀರಿ ಎಂದರ್ಥ. ನಿಮ್ಮ ಆರೋಗ್ಯಕ್ಕೂ ದೊಡ್ಡ ದೊಡ್ಡ ಆಸ್ಪತ್ರೆ ಗಳಿಗೂ, ದೊಡ್ಡ ಡಾಕ್ಟರ್‌ಗಳಿಗೂ, ಔಷಧ ಕಂಪನಿಗಳಿಗೂ ಸಂಬಂಧ ವಿಲ್ಲ. ವ್ಯಕ್ತಿಯ ವೈಯಕ್ತಿಕ ಸ್ವಾಸ್ಥ್ಯ ಆರೋ ಗ್ಯಕರ ಸಮಾಜದ ಸ್ವಾಸ್ಥ್ಯ ವೂ ಹೌದು. ಈ ಅರಿವು ಎಲ್ಲರಿಗೂ ಬಂದರೆ ಸಹ ಜವಾಗಿಯೇ ಬದಲಾ ವಣೆ ಕಾಣುವುದು ಸಾಧ್ಯ. ವೈದ್ಯ ಸಾಹಿತ್ಯ ಸೃಜನಶೀಲ ಅಲ್ಲ, ತಥಾಕ ತಿತ, ಸಂಪಾದಿತ, ಅನುವಾದಿತ ಎನ್ನುವವರೂ ಇದನ್ನೊಮ್ಮೆ ಓದಬೇ ಕೆಂದು ಆಶಿಸುತ್ತೇನೆ.'