2/22/2018

ಜ್ಞಾನ ಮಂಟಪ ವಿವರ ಪುಟ

ಅರಿವಿನ ಪರಿಮಳ 9 ಸಿದ್ಧರಾಮ ಶಿವಯೋಗಿಗಳ ವಚನಾನುಭವ ಬಸವರಾಜ ಸ್ವಾಮಿ

Font size -16+

'ಅಂಗವಿಸದಿರು ಇನ್ನು ಹಿಂಗಿ ಹೋಗೆಂದೆನುತ
ಮಂಗಳಾತ್ಮಕ ನುಡಿದ ಗುರುಕರುಣದಾ
ಅಂಗವಿಸದಿರು ಎಂದನಂಗಹರ ಪ್ರಭುರಾಯ
ಬಂದು ನೂಕಿದನೆನ್ನ ನೇಡಿಸುವ ಮಾಯೆಯನು.
ಮಂಗಳಾತ್ಮಕ ಕಪಿಲಸಿದ್ಧ ಮಲ್ಲೇಶ್ವರನೆ,
ಲಿಂಗ, ನಿಮ್ಮನು ಅರಿವೆ ; ಮಾಯೆಯ ಗೆಲುವೆೆ ಪ್ರಭುವಿನಂದದಲಿ.

ಅಂಗವಾಗಿ ಅಂಗದ ಗರ್ಭದಿಂದ ಹೊರಬಂದು ಅಂಗವಾಗದೆ ಲಿಂಗಾಂಗವಾಗಿ ಅರಿವಿನ ಲಿಂಗವಾಗಿ ಬದುಕೆಂದು ಮಂಗಳಾತ್ಮಕನಾದ ಗುರುದೇವನು ಕರುಣೆಯಿಂದ ನುಡಿದನು. ಮತ್ತೆ ಅಂಗವಿಸದಿರು ಎಂದು ಆಶೀರ್ವದಿಸುತ್ತಾ ಅಂಗಕ್ಕೆ ಬೋಧಿಸಿದನು.
ಆದರೂ ಅಂಗದಲ್ಲಿಯೇ ಸಂಗಮವಾದ ಅನಂಗ ಪ್ರಭುರಾಯನು ಬಂದು ಅಂಗವನ್ನು ಮರುಳು ಮಾಡಿ ಮಾಯೆಯ ಬಲೆಗೆ ನೂಕಿದನು. ಸಮರ್ಥನಾಗಿ ಮಾಯೆಯ ಬಲೆ ಯಿಂದ ಬಿಡಿಸಿಕೊಂಡು ಪುನಃ ತನ್ನಲಿ ಸೇರಲೆಂದು.
ಮಾಯೆಯೆಂದರೆ ಅಂಗವನ್ನಾವರಿಸಿದ ಕತ್ತಲು. ಅನಂಗವೆಂದರೆ ಅಂಗವನ್ನು ಬೆಳಗುವ ಬೆಳಕು. ಕತ್ತಲು ಹುಟ್ಟಿದ್ದು ಬೆಳಕಿನಿಂದಲೇ. ಕತ್ತಲು ತೊಲಗುವುದು ಕೂಡಾ ಬೆಳಕಿನಿಂದಲೇ. ಭೌತಿಕ ಕತ್ತಲಿಗೆ ಚಲನೆಯಿಲ್ಲ. ಅಂಗವನ್ನು ಆವರಿಸಿದ ಮಾಯೆಯೆಂಬ ಕತ್ತಲಿಗೆ ಚಲನೆಯಿದೆ. ಈ ಕತ್ತಲು ಎಂಬ ಮಾಯೆ ಅಂಗವನ್ನು ಕತ್ತಲಿನೆಡೆಗೆ ಮತ್ತೆ ಮತ್ತೆ ಕರೆದೊಯ್ಯುತ್ತದೆ. ಕತ್ತಲಿಗೆ ಕತ್ತಲೆಂದರೆ ಇಷ್ಟ. ಅರಿವಿನ ಬೆಳಕೆಂದರೆ ಬಲು ಕಷ್ಟ. ಬೆಳಕಿನೆಡೆಗೆ ಬಂದರೆ ಕತ್ತಲು ಸಾಯು ತ್ತ ದೆ. ಹೀಗಾಗಿ ಕತ್ತಲಿಗೆ ಬೆಳಕೆಂದರೆ ಭಯ.
ಮಾಯೆಯೆಂಬ ಕತ್ತಲೆಯನು ಅಂಗವಿಸದಿರು ಎಂದು ಹೇಳಿದ ಅರಿವಿನ ಅಂಗ ಅನಂಗ ಪ್ರಭುರಾಯನ ಸಹಾಯದಿಂದಲೇ ಮಂಗಳಾತ್ಮಕ ಕಪಿಲಸಿದ್ಧ ಮಲ್ಲೇಶ್ವರನೆಡೆಗೆ ಕರೆದು ಕೊಂಡು ಹೋಗಿ ಆತನನ್ನು ಅರಿತರಿತು ಮಾಯೆಯನು ಗೆಲ್ಲಬೇಕಾಗಿದೆ.'