2/22/2018

ಜ್ಞಾನ ಮಂಟಪ ವಿವರ ಪುಟ

8 ಅರಿವಿನ ಪರಿಮಳ ಸಿದ್ಧರಾಮ ಶಿವಯೋಗಿಗಳ ವಚನಾನುಭವ ಬಸವರಾಜ ಸ್ವಾಮಿ

Font size -16+

'
ಅಂಗವಸ್ತ್ರವನುಟ್ಟುಕೊಂಡಳವ್ವೆ.
ಕಾಳಿಗವಟ್ಟೆಯ ಕುಪ್ಪಸವ ತೊಟ್ಟುಕೊಂಡಳವ್ವೆ.
ಕಣ್ಣಲಿ ಬಟ್ಟಂಬಳೆಯ ಬೊಟ್ಟ ನಿಟ್ಟುಕೊಂಡಳವ್ವೆ.
ತನ್ನುರವರದ ಕುಚದ ಮೇಲೆ ತೊಟ್ಟಿಲ್ಲದ ಮಣಿಯ ಸರವ
ಇನಿಸುವ ಸಿಂಗಾರವ ಮಾಡಿ ಒಪ್ಪಿದಾಕೆಯವರಸುವನವ್ವ !
ಕಪಿಲಸಿದ್ಧ ಮಲ್ಲಿನಾಥಯ್ಯ !

ಜಗದಲ್ಲಿ ಜನ್ಮ ತಳೆದ ಅಂಗಗಳೆಲ್ಲ ಒಂದೇ. ಸಕಲ ಅಂಗಗಳಲ್ಲಿಯೂ ಮಹಾಜ್ಞಾನ ಭರಿತ ವಾಗಿದೆ. ಆದರೂ ಆ ಮಹಾಜ್ಞಾನ ಸಕಲ ಅಂಗಗಳಿಗೂ ಪ್ರಕಟವಾಗುವುದಿಲ್ಲ. ಇದೊಂದು ಅಂಗದ ದುರ್ದೈವವೇ ಸರಿ. ಅಂಗದಲ್ಲಿಯೇ ಭರಿತವಾದ ಮಹಾಜ್ಞಾನದ ಸಂಪತ್ತನ್ನು ಅಂಗ ಪಡೆದುಕೊಳ್ಳಬೇಕೆಂಬ ಬಯಕೆ ಅಂಗಕ್ಕೆ ಉಂಟಾಗುವುದೇ ಇಲ್ಲ. ಅಂಗವನ್ನು ಆವರಿಸಿದ ಮನಕ್ಕೂ ಉಂಟಾಗುವುದಿಲ್ಲ.
ಮನವೆಂಬುದು ಸುಂದರವಾದ ಹೆಣ್ಣು. ಅದು ಅಂಗವನ್ನು ಆವರಿಸಿಕೊಂಡು ಅಂಗಕ್ಕೆ ಸುಂದರವಾದ ವಸ್ತ್ರವನುಡುಸಿ ಕಪ್ಪನೆಯ ಕುಪ್ಪಸ ತೊಡಿಸಿ ಬೊಟ್ಟನಿಟ್ಟುಕೊಂಡು ಅರಿವಿನ ನಲ್ಲನು ಒಪ್ಪುವುದಕ್ಕಾಗಿ ವನಪು ವೈಯ್ಯಾರವನು ಮಾಡುತ್ತಾಳೆ. ಪ್ರೇಮಭರಿತವಾದ ಮಾತುಗಳನ್ನು ಆಡುತ್ತ ಕಪಿಲಸಿದ್ಧ ಮಲ್ಲಿನಾಥಯ್ಯನ ಶ್ರೀ ಚರಣಗಳನ್ನು ಹಿಡಿದು ಆತನನ್ನೇ ಒಪ್ಪಿದರೆ ಮಾತ್ರ ವರಿಸುತ್ತಾನೆ.
ಮನದ ಶೃಂಗಾರವೇನಿದ್ದರೂ ಮನದೊಡೆಯ ಮಲ್ಲಯ್ಯ ನೋಡುವುದಕ್ಕಾಗಿ, ಮಲ್ಲಯ್ಯ ನಿಗಾಗಿ ಇರಬೇಕೆ ಹೊರತು ಮಂದಿಗಾಗಿ ಅಲ್ಲ ಎನ್ನುವುದು ಮನಕ್ಕೆ ಸಂಪೂರ್ಣವಾಗಿ ತಿಳಿ ದಿರಬೇಕು.
ಹೆಣ್ಣು ಇದ್ದಲ್ಲಿಗೆ ಗಂಡು ಹೋಗಿ ಹೆಣ್ಣನ್ನು ನೋಡುವುದು ಸಂಪ್ರದಾಯ. ಆದರೆ ಗಂಡನ್ನು ಹುಡುಕುತ್ತ ಅರಿವಿನ ಗಂಡು ಇದ್ದಲ್ಲಿಗೆ ಹೋಗಿ ಆ ಗಂಡಿಗೆ ಸಂಪೂರ್ಣ ಶರಣಾಗಿ ತನ್ನನ್ನು ಅರ್ಪಿಸಿಕೊಳ್ಳುವುದು ಅರಿವಿನ ಸಂಪ್ರದಾಯ.ಆಧ್ಯಾತ್ಮದ ಸಂಪ್ರದಾಯ. ಅಂದರೆ ಗುರುವಿದ್ದಲ್ಲಿಗೆ ಶಿಷ್ಯ ಹೋಗುವುದು. ಅಥವಾ ಸದಾ ಗುರುವಿನ ಸ್ಮರಣೆಯಲ್ಲಿದ್ದು ಗುರುವಿ ಗಾಗಿ ಹಗಲಿರುಳೆನ್ನದೆ ಹಪಹಪಿಸುವ ಶಿಷ್ಯನಲ್ಲಿಗೆ ಗುರುದೇವ ಬಂದು ಅಪ್ಪಿಕೊಂಡು ಆಶೀ ರ್ವದಿಸುತ್ತಾನೆ.
ಗುರು ಶಿಷ್ಯ ಸಂಬಂಧವನ್ನು ಬೆಡಗಿನ ಮಾತಿನಲ್ಲಿ ಹೇಳುವುದು ಸುಲಭ. ಏಕೆಂದರೆ ಬೆಡಗು ಆಧ್ಯಾತ್ಮದ ಭಾಷೆ ! ಅಮೂರ್ತ ಸ್ವರೂಪವನ್ನು ಮೂರ್ತರೂಪಕ್ಕೆ ತಂದು ; ಮೂರ್ತ ರೂಪವನ್ನೇ ಅಮೂರ್ತರೂಪವನ್ನಾಗಿ ನೋಡುವ ಭಾಷೆ. ಇಂತಹ ಭಾಷೆಯನ್ನು ಆಡುಭಾಷೆ ಯಲ್ಲಿ ಆಡುವಾಗ ಬರೆಯುವಾಗ ಅನಿವಾರ‌್ಯವಾಗಿ ಬೆಡಗು ಪುನಃ ಬಂದು ತನ್ನ ನಿಜ ಸ್ವರೂ ಪವನ್ನು ತೋರಿಸುತ್ತದೆ. ಮನಕ್ಕೆ ಹೊರಗಣ ಸುಖದ ಆಸೆ ಅತಿಯಾದಾಗ ಒಳಗಣ ಸುಖದ ಬೆಡಗಿನ ಭಾಷೆ ಭಾರವಾಗುವುದು ಸಹಜ. ಏಕೆಂದರೆ ಒಳಗಣ ಸುಖದ ಆಸೆ ಬಲಿಯದ ನಿಮಿತ್ತ ಮನಕ್ಕೆ ಬೆಡಗಿನ ಅಮೂರ್ತ ಸ್ವರೂಪದ ಭಾಷೆ ಅರ್ಥವಾಗುವುದಿಲ್ಲ. ಆದರೆ ಒಳಗಣ ನಿಜ ಅರಿವನ್ನು ; ಅರಿವೆಂಬ ದೇವರನ್ನು ಬಲವಾಗಿ ನಂಬದೆ ಹೊರಗೆ ಆರಾಧಿಸಿ ಪೂಜಿಸುವುದನ್ನು ಬಿಡುವುದಿಲ್ಲ. ಅರಿವಿನ ದಾರಿ ದೂರವಾಗಬಹುದು ಅಷ್ಟೆ. ದೇವರನ್ನು ಒಪ್ಪಿದ ಮನವನ್ನು ಅರಿವಿನ ದೇವರು ಇಂದಲ್ಲ ನಾಳೆ ಒಪ್ಪಿಯೇ ಒಪ್ಪುತ್ತಾನೆ.'