2/22/2018

ಜ್ಞಾನ ಮಂಟಪ ವಿವರ ಪುಟ

ಹೈದ್ರಾಬಾದ ಹೋರಾಟ ಇತಿಹಾಸ ರಚನೆ ಯಾವಾಗ ?

Font size -16+

'ಭಾರತೀಯರಿಗೆ ಅದರಲ್ಲೂ ಮುಖ್ಯವಾಗಿ ಭಾರತೀಯತೆಯ ಗುಣಾವಗುಣಗಳನ್ನೆಲ್ಲ ಮೈಗೂಡಿಸಿಕೊಂಡಿರುವ ಮತ್ತು ಭಾರತೀಯತೆಯ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದ ಕನ್ನಡಿಗರಿಗೆ ಇತಿಹಾಸ ಪ್ರಜ್ಞೆ ಇದೆಯೇ? ಈ ಪ್ರಶ್ನೆ ಅನೇಕರಿಗೆ ಅಸಂಗತವಾಗಿ ಕಂಡು ಬರಬಹುದು. ಆದರೆ ಇದು ಕುತೂಹಲಕಾರಿಯಾದುದು ಅಲ್ಲವೆಂದು ಖಂಡಿತವಾಗಿ ಹೇಳ ಲು ಬರುವುದಿಲ್ಲ. ಇನ್ನೂ ಒಂದಿಷ್ಟು ಒಳ ಹೊಕ್ಕು ಇದೇ ಪ್ರಶ್ನೆಯನ್ನು ಭಾರತದ ಮತ್ತು ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಕೇಳಿದರೆ ಅದು ಮತ್ತಷ್ಟು ಕುತೂಹಲಕರ ಎಂದೆನ್ನಿಸಬಹುದು.
ನಿಜ. ತಮ್ಮ ಇತಿಹಾಸವನ್ನು ನಿಜಾರ್ಥದಲ್ಲಿ, ಅದರ ಯಥಾರ್ಥದ ನೆಲೆಯಲ್ಲಿ ಕಟ್ಟಿಕೊಳ್ಳು ವಲ್ಲಿ ಭಾರತೀಯರು ಒಂದು ಹೆಜ್ಜೆ ಹಿಂದೆಯೇ, ಹದಿಮೂರನೇ ಶತಮಾನದವರೆಗಿನ ಭಾರತದ ಮತ್ತು ಕರ್ನಾಟಕದ ಇತಿಹಾಸ ಒಂದು ಬಗೆಯದಾದರೆ,ಅನಂತರ, ಅಂದರೆ ಮುಸ ಲ್ಮಾನರು ಭಾರತವನ್ನು, ಕರ್ನಾಟಕವನ್ನು ಪ್ರವೇಶಿಸಿ ತಮ್ಮ ರಾಜಕೀಯ ಸುಭದ್ರ ನೆಲೆಯನ್ನು ಭದ್ರಪಡಿಸಿಕೊಂಡ ಮೇಲೆ ಮತ್ತು ನಂತರ ಬ್ರಿಟೀಷ್ ಸಾಮ್ರಾಜ್ಯವು ಭಾರತವನ್ನು ವಸಾಹತು ವನ್ನಾಗಿ ಮಾಡಿಕೊಂಡು ಸುಮಾರು ಎರಡು ನೂರು ವರ್ಷಗಳ ಕಾಲ ಆಡಳಿತ ನಡೆಸಿ 1947ರಲ್ಲಿ ಈ ದೇಶ ಬಿಟ್ಟು ತೊಲಗುವವರೆಗಿನ ಇತಿಹಾಸ ಇನ್ನೊಂದು ರೀತಿಯದು. ಏಳೆಂಟು ಶತಮಾನಗಳ ಕಾಲ ಪರಕೀಯ ಆಳ್ವಿಕೆಯಲ್ಲಿ ನಲುಗಿ ಹೋದ ಭಾರತೀಯರಿಗೆ ತಮ್ಮ ನೈಜ ಇತಿಹಾಸ, ಸಂಸ್ಕೃತಿ, ನಾಗರಿಕತೆ, ಪರಂಪರೆ ಮರೆತದ್ದು ಸಹಜವೇ ಎಂದು ಅನೇಕರು ವಾದಿಸು ವುದುಂಟು. ಅದನ್ನು ಒಂದು ನೆಲೆಯಲ್ಲಿ ನಾವು ಒಪ್ಪಿಕೊಂಡರೂ ಅದಕ್ಕೇ ಜೋತು ಬಿದ್ದು ನಮ್ಮ ನೈಜ ಇತಿಹಾಸವನ್ನು ಕಟ್ಟಿಕೊಳ್ಳುವಲ್ಲಿ ನಾವು ವಿಫಲರಾದಲ್ಲಿ ಅದು ಅಕ್ಷಮ್ಯ ಅಪರಾಧವಾದೀತು. ನಮ್ಮ ಭವಿಷ್ಯದ ಜನಾಂಗಗಳಿಗೆ ಮತ್ತು ತಲೆಮಾರುಗಳಿಗೆ ನಾವು ಬಗೆಯಬಹುದಾದ ಅಪಚಾರವೂ ಕೂಡ ಆದೀತು.
ಇತಿಹಾಸ ಕಟ್ಟಿಕೊಳ್ಳುವ ವಿಷಯದಲ್ಲಿ ನೇರವಾಗಿ ಹೈದ್ರಾಬಾದ ಕರ್ನಾಟಕಕ್ಕೆ ಬರುವುದು ಒಳಿತು. ಬ್ರಿಟೀಷ ಗುಲಾಮಗಿರಿಯ ಶೃಂಖಲೆಯಿಂದ ದೇಶ ವಿಮೋಚನೆಗೊಂಡು 1947ರ ಆಗಸ್ಟ 15ರಂದು ಭಾರತ ದೇಶ ಸ್ವಾತಂತ್ರ್ಯ ಪಡೆಯಿತೆಂಬುದು ಎಷ್ಟು ಸತ್ಯವೋ ಭಾರತದ ಅತಿದೊಡ್ಡ ಸಂಸ್ಥಾನಿಕ ರಾಜ್ಯವಾಗಿದ್ದ ಹೈದ್ರಾಬಾದ ಭಾರತ ಒಕ್ಕೂಟದಲ್ಲಿ ವಿಲೀನಗೊಳ್ಳದೇ ಇದ್ದುದರಿಂದ ಮತ್ತೆ ಪರತಂತ್ರದಲ್ಲಿ ಮುಂದುವರೆಯಿ ತೆಂಬುದು ಅಷ್ಟೇ ನಿಚ್ಛಳ.ಅದಕ್ಕಾಗಿ ಪ್ರತ್ಯೇಕ ಹೋರಾಟವನ್ನೇ ನಡೆಸಬೇಕಾ ಯಿತು. ನಿಜಾಂಶಾಹಿಯ ವಿರುದ್ಧ, ಮೊದಲು ಜವಾ ಬ್ದಾರಿ ಸರಕಾರ ರಚನೆಗಾಗಿ, ನಂತರ ಭಾರತ ಒಕ್ಕೂಟದಲ್ಲಿ ಹೈದ್ರಾಬಾದ್ ರಾಜ್ಯದ ಸಂಪೂರ್ಣ ಬೇಷರತ್ ವಿಲೀನಕ್ಕಾಗಿ ನಡೆದ ಹೋರಾಟ ಆಧುನಿಕ ಭಾರತದ ಸ್ವಾತಂ ತ್ರ್ಯೋತ್ತರ ಸಂದರ್ಭದಲ್ಲಿ ಅತ್ಯಂತ ತುಮುಲಯುಕ್ತವೂ, ರಕ್ತಸಿಕ್ತವೂ, ರೋಚಕವೂ ಮತ್ತು ಆತಂಕವಾದಿಯೂ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ಹೋರಾಟದ ಪರಿಣಾಮವಾಗಿಯೇ ಹೈದ್ರಾಬಾದಿನ ನಿಜಾಮರು ಭಾರತದ ಸೇನಾಪಡೆಗಳಿಗೆ ಶರಣಾಗಿ 1948ರ ಸೆಪ್ಟೆಂಬರ್ 17ರಂದು ಇತರ 545 ದೇಶೀಯ ಸಂಸ್ಥಾನಗಳಂತೆ ಹೈದ್ರಾಬಾದ ಸಂಸ್ಥಾನವನ್ನು ಸ್ವತಂತ್ರ ಭಾರತದ ಒಕ್ಕೂಟ ದಲ್ಲಿ ವಿಲೀನಗೊಳ್ಳಲು ಕಾರಣರಾದರು. ಹೈದ್ರಾಬಾದಿನ ಜನತೆ ಬಹುವಾಗಿ ಬೆಲೆತೆತ್ತ ಈ ಹೋರಾಟವನ್ನು ಸ್ವತಃ ಮಹಾತ್ಮಗಾಂಧಿಯವರು ಸ್ವಾತಂತ್ರ್ಯ ಸಂಗ್ರಾಮದ ಕೊನೆಯ ಹೋರಾಟವೆಂದು ಉದ್ಗರಿಸಿದರು !
ನಿಜಾಂ ಸರಕಾರ ಅಕ್ರಮ,ಕಾನೂನುಬಾಹಿರ ಗೂಂಡಾಗಳಿಂದ ಕೂಡಿದ ಮುಸ್ಲಿಂ ಮತಾಂಧ ಅರೆಸೇನಾ ಪಡೆಯಾಗಿದ್ದ ರಜಾಕಾರರ ಸಂಘಟನೆ ನಿಜಾಮನ ಸಾರ್ವಭೌಮ ತ್ವವನ್ನು ಉಳಿಸಿಕೊಂಡು ಹೋಗುವುದಕ್ಕಾಗಿ ಹಿಂದೂಗಳ ಮೇಲೆ ನಡೆಸಿದ ಸಂಘಟಿತ ದೌರ್ಜ ನ್ಯ ಪ್ರಾಯಃ ಕಂಡು ಕೇಳರಿಯದಂತಹುದು. ಹಿಂದೂಗಳು ಮತ್ತು ಮುಸಲ್ಮಾನರು ತಮ್ಮ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿಕೊಂಡಿದ್ದ ಅಸಾಫಶಾಹಿಯ ಕೊನೆಯ ನಿಜಾಮನಾದ ಓಸ್ಮಾನ್ ಅಲಿಖಾನ್ ಸಂಪೂರ್ಣ ಮತಾಂಧನಾಗಿ ರೂಪುಗೊಂಡು ತನ್ನ ಎರಡನೇಯ ಕಣ್ಣಾ ದ ಹಿಂದೂಗಳನ್ನು ರಜಾಕಾರರು ಅಟ್ಟಹಾಸಕ್ಕೆ ಬಲಿಯಾಗುವಂತೆ ಮಾಡಿದನು.
ನಿಜಾಮನು ತನ್ನ ಸಾರ್ವಭೌಮತೆಯನ್ನು ಉಳಿಸಿಕೊಂಡು ಹೋಗಬೇಕೆಂಬ ತನ್ನ ನಿಲು ವಿನಲ್ಲಿ ಯಾವುದೇ ಅಸ್ಪಷ್ಟತೆಯನ್ನು ಹೊಂದಿರಲಿಲ್ಲ. ಅದು ಅತ್ಯಂತ ಪ್ರಜ್ಞಾಪೂರ್ವಕವಾದ ಧೋರಣೆಯಾಗಿತ್ತು. ಈ ನಿಲುವಿನ ಬಗ್ಗೆ ಯಾವುದಾದರೂ ಅಸ್ಪಷ್ಟತೆ, ಗೊಂದಲ,ಅನಿಶ್ಚತತೆ ಇದ್ದುದು ಅಂದಿನ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರಿಗೆ ಮತ್ತು ಅವರ ಸೆಕ್ಯುಲರ್ ಸರಕಾರಕ್ಕೆ. ನಿಜಾಮರನ್ನು ಕೆಣಕುವ ಯಾವುದೇ ಸಾಹಸ ಮಾಡುವ ಮನೋಸ್ಥೈರ‌್ಯ ಪಂಡಿತ ನೆಹರು ಅವರಿಗಿರಲಿಲ್ಲ ಎಂಬುದು ಇತಿಹಾಸವೇ ನಮಗೆ ತಿಳಿಸಿದೆ. ಮುಸಲ್ಮಾನರ ವಿಷಯದಲ್ಲಿ ವಿಶೇಷ ಒಲವುಳ್ಳವರಾಗಿದ್ದ ನೆಹರು ಅವರು ಹೈದ್ರಾಬಾದ ಸಂಸ್ಥಾನದ ವಿಷಯದಲ್ಲಿ ಉದಾಸೀನ ನಿಲುವನ್ನೇ ಹೊಂದಿದ್ದರು. ಅದರ ವಿಪರೀತ ಪರಿಣಾ ಮದ ಬಗ್ಗೆ ಅವರು ಚಿಂತಿತರಾಗಿರಲಿಲ್ಲ, ಅದರ ಕಲ್ಪನೆಯೂ ಅವರಿಗಿರಲಿಲ್ಲ. ನಿಜಾಮ ಆಡಳಿತವನ್ನು ಎದುರು ಹಾಕಿಕೊಳ್ಳುವುದೆಂದರೆ ಭಾರತದ ಮುಸಲ್ಮಾನರನ್ನು ಎದುರು ಹಾಕಿ ಕೊಂಡಂತೆ ಎಂದು ಅವರು ಭಾವಿಸಿದ್ದರು. ಮುಸಲ್ಮಾನರ ಬಗ್ಗೆ ನೆಹರು ಅವರಿಗಿದ್ದ ವಿಶೇಷ ಪ್ರೀತಿ,ಕಾಳಜಿ ಅಸಂಖ್ಯಾತರಿಗೆ ಇಂದಿಗೂ ಒಗಟಾಗಿಯೇ ಉಳಿದಿದೆ.
ಸ್ವತಂತ್ರ ಭಾರತದ ಇತರ ಎಲ್ಲ ರಾಜ್ಯಗಳ ವ್ಯವಹಾರಗಳು ಉಪ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಯಾಗಿದ್ದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ ಭಾಯಿ ಪಟೇಲ್ ಅವರ ವ್ಯಾಪ್ತಿ ಯಲ್ಲಿದ್ದರೆ ಹೈದ್ರಾಬಾದ ರಾಜ್ಯ ವ್ಯವಹಾರವೊಂದನ್ನು ಮಾತ್ರ ನೆಹರು ತಮ್ಮ ಬಳಿ ಇರಿಸಿ ಕೊಂಡಿದ್ದರು. ಈ ಕಾರಣಕ್ಕಾಗಿಯೇ ಹೈದ್ರಾಬಾದ್ ಸಮಸ್ಯೆಯ ವಿಷಯದಲ್ಲಿ ಯಾವ ನಿರ್ಧಾರವನ್ನೂ ಕೈಕೊಳ್ಳುವ ಸ್ಥಿತಿಯಲ್ಲಿ ಪಟೇಲರು ಇರಲಿಲ್ಲ. ಆದರೆ, ಸುದೈವವಶಾತ್ ಮಂತ್ರಿ ಮಂಡಳದ ಕೆಲವು ಸದಸ್ಯರ ಒತ್ತಾಯ ಮೇರೆಗೆ ಹೈದ್ರಾಬಾದ್ ರಾಜ್ಯ ವ್ಯವಹಾರ ಖಾತೆಯನ್ನು ಕಾಲಿಕ್ರಮದಲ್ಲಿ ನೆಹರು ಅವರು ಸರ್ದಾರ್ ಪಟೇಲ ಅವರಿಗೆ ಹಸ್ತಾಂತರಿಸಬೇಕಾಗಿ ಬಂತು. ಹೈದ್ರಾಬಾದ್ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರು ಮತ್ತು ಹೈದ್ರಾಬಾದ ರಾಜ್ಯದ ಜನತೆಗೆ ಉಕ್ಕಿನ ಮನುಷ್ಯನ ಮೇಲೆ ಮಾತ್ರ ವಿಶ್ವಾಸವಿತ್ತು. ಸರ್ದಾರ ಪಟೇಲರಾದರೇ ಅವರ ವಿಶ್ವಾಸವನ್ನು ಹುಸಿಗೊಳಿಸದೆ ನಿಜಾಮನಿಗೆ ಅಗತ್ಯವಿರುವ ಎಲ್ಲ ಅವಕಾಶಗಳನ್ನು ನೀಡಿದ ನಂತರವೂ, ಶಾಂತಿಯುತ ವಿಲೀನಕ್ಕೆ ಹರಸಾಹಸ ಮಾಡಿದ ಮೇಲೆಯೂ ನಿಜಾಮ ಬಗ್ಗದೇ ಇದ್ದಾಗ ಅಂತಿಮವಾಗಿ ‘ಪೊಲೀಸ್ ಆ್ಯಕ್ಷನ್’ ಎಂಬ ಹೆಸರಿನಿಂದ ಕರೆಯಲಾದ ಸೈನಿಕ ಕಾರ‌್ಯಾ ಚರಣೆ ನಡೆಸಿ,ರಜಾಕಾರರೆಲ್ಲ ಬಾಲ ಮುದುಡಿಕೊಂಡಂತವರಾಗಿ ಕೊನೆಗೆ ಸೆಪ್ಟೆಂಬರ್ 17, 1948ರಂದು ನಿಜಾಮ ಭಾರತೀಯ ಸೇನಾಪಡೆಗಳಿಗೆ ಶರಣಾಗಿ ಭಾರತ ಒಕ್ಕೂಟದಲ್ಲಿ ತನ್ನ ರಾಜ್ಯದ ವಿಲೀನಕ್ಕೆ ಸಹಿ ಹಾಕಿದನು, ಅಲ್ಲಿಗೆ ನಿಜಾಂ ಯುಗಾಂತ್ಯವಾಯಿತು.
ಆದರೆ ಅಂತಿಮ ವಿಜಯಕ್ಕಾಗಿ ನಡೆದ ಹೋರಾಟದಲ್ಲಿ ಉಂಟಾದ ಬಲಿದಾನಗಳಿಗೆ ಕರಾರುವಾಕ್ಕಾದ ಲೆಕ್ಕ ಇಡಲು ಯಾರಿಂದಲಾದರೂ ಸಾಧ್ಯವೇನು ? ಗಾಂಧೀ ಪ್ರಣೀತ ಸತ್ಯ,ಅಹಿಂಸೆ,ಅಸಹಕಾರ ಇತ್ಯಾದಿ ತತ್ವಗಳ ಆಧಾರದ ಮೇಲೆ ವಿಜಯ ಸಾಧಿಸಲು ಸಾಧ್ಯವಿ ತ್ತೇನು ? ರಜಕಾರರ ಶಸ್ತ್ರಗಳಿಗೆ ಪ್ರತಿಯಾಗಿ ಶಸ್ತ್ರಗಳನ್ನು ಹಿಡಿಯದೆಯೆ ಅವರ ಹೃದಯವನ್ನು ಗೆಲ್ಲುವ ದುಸ್ಸಾಹಸ ಮಾಡಲು ಸಾಧ್ಯವಿತ್ತೇನು ? ನೂರಾರು,ಸಾವಿರಾರು ಹಿಂದೂ ಮಹಿಳೆ ಯರು ಖೂಳ ರಜಾಕಾರರ ಅತ್ಯಾಚಾರ,ಮಾನಭಂಗಕ್ಕೆ ಒಳಗಾದರಲ್ಲ, ಅವೆಲ್ಲವೂ ಕ್ಷಮಾ ರ್ಹವೇನು ?
ನಿಜಾಂ ಪೊಲೀಸರ ಸಂಪೂರ್ಣ ಬೆಂಬಲವಿದ್ದ ರಜಾಕಾರರು ಹಳ್ಳಿಗಳನ್ನು ಲೂಟಿ ಮಾಡಿ, ಎಲ್ಲವನ್ನೂ ದೋಚಿಕೊಂಡು, ಮನೆ-ಮಠಗಳನ್ನು ಸುಟ್ಟು ಹಾಕಿ ಹೋಗುತ್ತಿದ್ದರಲ್ಲ ಅವುಗಳ ನ್ನು ಪ್ರತಿಭಟಿಸದೇ ಇರಲಿಕ್ಕೆ ಸಾಧ್ಯವಿತ್ತೇನು ? ಹೈದ್ರಾಬಾದಿನ ಕೆಲವು ಮುಖಂಡರು ಹೈದ್ರಾ ಬಾದ್ ಹೋರಾಟದ ವಿಷಯದಲ್ಲಿ ಕೈಕೊಳ್ಳಬೇಕಾದ ಮುಂದಿನ ಹೆಜ್ಜೆಗಳನ್ನು, ಕ್ರಮಗಳನ್ನು ಕುರಿತು ಚರ್ಚಿಸುವಾಗ ರಾಷ್ಟ್ರಪಿತರು ಕೈಚೆಲ್ಲಿ ಕುಳಿತದ್ದೇಕೆ ?
ಸ್ವಾಮಿ ರಮಾನಂದ ತೀರ್ಥರ ಸಮರ್ಥ ನಾಯಕತ್ವ,ನೇತೃತ್ವದಲ್ಲಿ ಹೈದ್ರಾಬಾದ ಜನತೆ, ಮುಖಂಡರು ಒಕ್ಕೊರಲಿನಿಂದ ಎಲ್ಲ ರೀತಿಯ ಹೋರಾಟ ನಡೆಸಿದ್ದರ ಫಲವಾಗಿಯೇ ನಿಜಾ ಸಮರು ಶರಣಾಗಿ ವಿಲೀನಗೊಳ್ಳಲು ಸಾಧ್ಯವಾಯಿತೇ ಹೊರತು ಗಾಂಧೀಜಿಯವರ ಅಹಿಂಸಾ ತತ್ವದ ಮೇಲಾಗಲೀ, ನೆಹರು ಅವರ ಅನರ್ಥಕಾರಿ ಸೆಕ್ಯುಲರ್ ತತ್ವದ ಮೇಲಾ ಗಲೀ ಅಲ್ಲ ಎಂಬುದನ್ನು ಹೈದ್ರಾಬಾದ ಹೋರಾಟ ಸಾಬೀತು ಪಡಿಸಿದೆ.
ಆದರೆ, ಈ ಐತಿಹಾಸಿಕ ತುಮುಲಯುಕ್ತ ಹೋರಾಟ ನಡೆದು ಏಳು ದಶಕಗಳಾಗುತ್ತ ಬಂದರೂ ಈ ಹೋರಾಟ ಕುರಿತಾದ ಮಾಹಿತಿ ನಮ್ಮ ಇತಿ ಹಾಸ ಪಠ್ಯಕ್ರಮದಲ್ಲಿ ಇನ್ನೂ ಬಾರದಿರುವುದು ಒಂದು ಬಹುದೊಡ್ಡ ಕೊರತೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತು ಸತ್ಯವಲ್ಲವೇನು ? ಇಂದಿಗೂ ಕೂಡ ಹೈದ್ರಾಬಾದ ಹೋರಾ ಟದ ಇತಿಹಾಸವನ್ನು ವ್ಯವಸ್ಥಿತವಾಗಿ ದಾಖಲಿಸುವ ಪ್ರಯತ್ನ ನಡೆದೇ ಇಲ್ಲ. ಸತ್ಯ ಮತ್ತು ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು ಎಂಬ ಭ್ರಮೆಯ ಲ್ಲಿಯೇ ನಾವೆ ಲ್ಲರೂ ಇದ್ದೇವೆ. ಹೈದ್ರಾಬಾದ ಹೋರಾಟ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾ ಟಕ್ಕಿಂತ ಅಥವಾ ಬೇರಾವುದೇ ಸ್ವಾತಂತ್ರ್ಯ ಚಳವಳಿಗಿಂತ ವಿಶಿಷ್ಟವೂ,ವಿಭಿನ್ನವೂ ಆಗಿದೆ. ಈ ಹೋರಾಟದಲ್ಲಿ ಪಾಲ್ಗೊಂಡ ತಲೆಮಾರು ಈಗ ಅಳಿವಿನ ಅಂಚಿನಲ್ಲಿದೆ ಅಥವಾ ಹೆಚ್ಚು ಕಡಿಮೆ ಅಳಿದು ಹೋಗಿದೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ 2009ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹೈದ್ರಾಬಾದ ಕರ್ನಾಟಕ ಹೋರಾಟದ ಇತಿಹಾಸವನ್ನು ರಚಿಸುವ ಬೇಡಿಕೆಗೆ ಒಂದಿಷ್ಟು ಬೆಂಬಲ ನೀಡಿತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿರಿಯ ಕವಿ ಪ್ರೊ.ವಸಂತ ಕುಷ್ಟಗಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸುವ ಆದೇಶ ವನ್ನು ಹೊರಡಿಸಿದರು. ಅಲ್ಲಿಗೇ ನಿಂತು ಹೋಯಿತು ಇತಿಹಾಸ ರಚನೆಯ ಕಾರ‌್ಯ !
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಬದುಕಿದ್ದಾಗಲೇ ಹೈದ್ರಾಬಾದಿನ ಸ್ವಾಮಿ ರಮಾ ನಂದ ತೀರ್ಥ ಸಮಿತಿ ಒಂದು ಉತ್ತಮ ಕಾರ‌್ಯ ಮಾಡಿತು. ಕನ್ನಡಿಗರಾದ ಶ್ರೀ ವಿ.ಎಚ್. ದೇಸಾಯಿ ಅವರು ಶ್ರೀ ಸಿ.ಸುದರ್ಶನ ಅವರೊಂದಿಗೆ ಛಿ ಐ್ಞಜಿೞ ್ಛ್ಟಛಿಛಿಟಞ ಟ್ಛ ಏಛ್ಟಿಚಿ ್ಝಜಿಚಿಛ್ಟಿಠಿಜಿಟ್ಞ ಠ್ಟ್ಠಿಜಜ್ಝಛಿ ಜ್ಞಿ ಐ್ಞಜಿೞ ್ಛ್ಟಛಿಛಿಟಞ ಟಛಿಞಛ್ಞಿಠಿ ಎಂಬ ಗ್ರಂಥವನ್ನು ರಚಿಸಿದರು. ದೇಸಾಯಿಯವರೇ ಇಂಗ್ಲೀಷನಲ್ಲಿ ಬರೆದ ಊ್ಟಟಞ ಚ್ಞಛಿ ಞಠಿಚ್ಟಞ ಠಿಟ ಒಚ್ಞಜಚ್ಞಞಚ್ಞ ಎಂಬ ಕೃತಿಯನ್ನು ಶ್ರೀ ಕಲ್ಯಾಣರಾವ್ ಭಕ್ಷಿಯವರು ಕನ್ನಡಕ್ಕೆ ಅನು ವಾದಿಸಿದರು. ಶ್ರೀ ಕುಷ್ಟಗಿ ಅವರು ಈಚೆಗೆ ‘ಹೈದ್ರಾಬಾದ ಕರ್ನಾಟಕ ಕಣಜದಿಂದ ಎಂಬ ಕೃತಿಯನ್ನು ರಚಿಸಿದ್ದಾರೆ. ಈ ಅಂಕಣಕಾರ ಈಚೆಗೆ ಹೈದ್ರಾಬಾದ ಹೋರಾಟದ ಇತಿಹಾಸಕ್ಕೆ ಸಂಬಂಧಿಸಿದಂತೆ ‘ಜೈಲಿನಲ್ಲಿ ಜರ್ನಲಿಸಂ ’ ಎಂಬ ಕೃತಿಯನ್ನು ರಚಿಸಿದ್ದಾರೆ. ಹೀಗೆ ಕೆಲವೇ ಕೆಲವು ಪ್ರಯತ್ನ ಬಿಟ್ಟರೆ ಹೈದ್ರಾಬಾದ್ ಹೋರಾಟ ಇತಿಹಾಸ ರಚನೆಗೆ ಸಂಘಟಿತ ಪ್ರಯತ್ನ ಇಲ್ಲವೇ ಇಲ್ಲ.'