2/22/2018

ಜ್ಞಾನ ಮಂಟಪ ವಿವರ ಪುಟ

ಅರಿವಿನ ಪರಿಮಳ 2 ಸಿದ್ಧರಾಮ ಶಿವಯೋಗಿಗಳ ವಚನಾನುಭವ ಬಸವರಾಜ ಸ್ವಾಮಿ

Font size -16+

'ಅಂಗದಲ್ಲಿ ಲಿಂಗ ! ಆ ಲಿಂಗಧ್ಯಾನದಲ್ಲಿಪ್ಪ
ಒಡಲೊಡವೆ ಒಡೆಯರಿಗೆಂಬ ;
ಮಾಡಿ ಮನದಲ್ಲಿ ಹೊಳೆಯದೆ ಬಾಳೆಯ ಫಲದಂತಿಪ್ಪ
ಮಾತಿನ ಬಟ್ಟೆಗೆ ಹೋಗದ ; ಸೂತಕ ಶ್ರುತವ ಕೇಳದ ;
ಸದ್ಭಕ್ತರ ನೆನೆವುದೆ ಮಂತ್ರವಯ್ಯ,
ಕಪಿಲ ಸಿದ್ಧ ಮಲ್ಲಿಕಾರ್ಜುನ.

ಸ್ಥೂಲಾಂಗದಲ್ಲಿ ಲಿಂಗಾಂಗ ! ಅಂದರೆ ಸ್ಥೂಲಾಂಗ ಒಂದು ; ಈ ಅಂಗದಲ್ಲಿ ಅರಿವಿನ ಅಂಗ ಒಂದು, ಸ್ಥೂಲಾಂಗವನ್ನು ಆವರಿಸಿದ ಮನೋ ಅಂಗ ಒಂದು. ಈ ಅಂಗ ಸದಾ ಅರಿ ವಿನ ಅಂಗದ ಧ್ಯಾನದಲ್ಲಿ ಮಗ್ನವಾಗಿರಬೇಕು. ಸ್ಥೂಲಾಂಗ ಅರಿವಿನ ಅಂಗದ ಒಡವೆ. ಅರಿವಿನ ಲಿಂಗಯ್ಯನೆ ಸ್ಥೂಲಾಂಗದ ಒಡೆಯ !
ಮನವೆಂಬುದು ಭಕ್ತನಾಗಿ,ದಾಸನಾಗಿ,ಕಿಂಕರನಾಗಿ ಸದಾ ಅರಿವೆಂಬ ಲಿಂಗಯ್ಯನ ಸೇವೆ ಯಲ್ಲಿ ನಿರತನಾಗಿರಬೇಕು. ಆ ಅರಿವಿಗೆ ಶರಣು ಹೋಗಿ ಶರಣನಾಗಬೇಕು. ಮಾಡಿದೆನೆಂ ಬುದು ಮನದಲ್ಲಿ ಹೊಳೆಯದಿದ್ದರೆ ಬಾಳೆಯಫಲದಂತೆ ಮತ್ತೊಮ್ಮೆ ಹುಟ್ಟುವುದಿಲ್ಲ.
ಅಂಗದಲ್ಲಿ ಅರಿವು ಸಂಗಮವಾಗಿದೆ. ಮನ ಮರೆತು ಅರಿವನ್ನು ಸಂಗ್ರಹ ಮಾಡಿಕೊಳ್ಳು ತ್ತದೆ. ಅರಿವೆಂದರೆ ಬರೀ ಪುಸ್ತಕದಿಂದ ಬಂದುದೊಂದೇ ಅಲ್ಲ. ಹೊರಗಿನ ಸಕಲ ನೈಪುಣ್ಯಗಳ ನ್ನು ಅರಿವೆಂದು ಭ್ರಮಿಸಿ ಸಂಗ್ರಹಿಸಿಕೊಳ್ಳುತ್ತದೆ. ಸಂಗ್ರಹಿಸಿಕೊಂಡುದೆಲ್ಲವೂ ಅರಿವಿನ ಲಿಂಗ ಯ್ಯನೆಂಬ ಅಂಗಕ್ಕೆ ಅರ್ಪಣೆ ಮಾಡುವ ಕಲೆ ಮನಕ್ಕೆ ಬಂದಾಗ ಮನ ಘನಮನವಾಗ್ತುತದೆ. ಅರ್ಪಣೆ ಮಾಡಿದುದೆಲ್ಲ ಜೀರ್ಣವಾಗಿ ಸ್ಥೂಲಾಂಗಕ್ಕೆ ಪ್ರಸಾದವಾಗುತ್ತದೆ. ಮನ ಇತರರಿಂದ ಪಡೆದುದು ತನ್ನದಾಗುತ್ತದೆ. ಮನದಲ್ಲಿ ಹೊಳೆಯದೆ ಬಾಳೆಯ ಫಲವಾಗುತ್ತದೆ.
ಮನ ಮಾತಿನ ಬಟ್ಟೆಗೆ ಹೋಗುವುದಿಲ್ಲ. ಕೇಳಿದುದು ಕಿವಿಗೆ ಸೂತಕವಾಗುವುದಿಲ್ಲ. ಏಕೆಂದರೆ ಕೇಳಿದುದು,ನೋಡಿದುದು, ಮುಟ್ಟಿದುದು,ಮೂಸಿಸಿದುದು, ರುಚಿಸಿದುದೆಲ್ಲ ಅರಿವಿನ ಅಂಗಕ್ಕೆ ಎಡೆಯಾಗುತ್ತದೆ. ನಂತರ ಮನ ಬಳಸುತ್ತದೆ.
ಅರಿವಿನ ಈ ಶಿಕ್ಷಣದಲ್ಲಿ ಸದಾ ನಿರತರಾದ ಸದ್ಭಕ್ತರ ಸಂಗದಲ್ಲಿ ಕಾಲ ಕಳೆಯುತ್ತ, ನೆನೆ ಯುತ್ತ ಮನ ಮಗ್ನವಾಗಿ ಘನ ಮನವಾಗುವುದೇ ಮನಕ್ಕೆ ಮಂತ್ರವಾಗುತ್ತದೆ.
ಅಂಗದಲ್ಲಿಯೇ ಸಂಗಮವಾದ ಅರಿವೆಂಬ ಲಿಂಗಯನನ್ನು ಸಿದ್ಧರಾಮ ಶಿವಯೋಗಿಗಳು ಕಪಿಲ ಸಿದ್ಧ ಮಲ್ಲಿಕಾರ್ಜುನಯ್ಯ ಎಂದು ಹೆಸರಿಟ್ಟಿದ್ದಾರೆ. ಸದಾ ಆತನ ಧ್ಯಾನದಲ್ಲಿದ್ದು ಆತನನ್ನೇ ಒಡೆಯಾ ಎಂದು ಕೂಗಿ ಕರೆದು ಒಡಲನ್ನು ಒಡೆಯನಿಗೆ ಅರ್ಪಿಸಿ ಒಡಲೊಡೆಯನ ಬೆಳ ಕನ್ನು ಕಂಡು ಬೆಳಕಿಂಗೆ ಬೆಳಕಾಗಿ ಬೆಳಕಿನತ್ತ ಪಯಣಿಸು ಮಾತಲ್ಲದ ಮಾತನ್ನು ವಚನ ರೂಪದಲ್ಲಿ ಬರೆದು ಲೋಕಕ್ಕೆ ಸಹಕರಿಸಿದ್ದಾರೆ.'