11/21/2017

ಜ್ಞಾನ ಮಂಟಪ ವಿವರ ಪುಟ

ಹೈ.ಕ.ಪ್ರಾ.ಅ.ಮಂಡಳಿಗೆ ಕಾಯಂ ಕಾರ‌್ಯದರ್ಶಿ ಯಾಕೆ ಇಲ್ಲ ?

Font size -16+

'ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಕಳೆದ ನಾಲ್ಕು ವರ್ಷಗಳಿಂದ ಅಸ್ತಿತ್ವಕ್ಕೆ ಬಂದು, ಕಾರ್ಯ ನಿರ್ವಹಿಸುತ್ತಿದೆ. ಮಂಡಳಿಗೆ ನೀಡಲಾದ ಅನುದಾನ ಯಾವ ಆಧಾರದ ಮೇಲೆ ಖರ್ಚು ಮಾಡಬೇಕು ಎನ್ನುವ ಪ್ರಶ್ನೆ ಬಂದಾಗ ಎಲ್ಲರ ಅಭಿಪ್ರಾಯ ಒಂದೂವರೆ ದಶಕದ ಹಿಂದೆ ಅಂದರೆ, 2002ರಲ್ಲಿ ಸರಕಾರಕ್ಕೆ ಸಲ್ಲಿಸಲಾದ ಡಾ.ಡಿ.ಎಂ. ನಂಜುಂಡಪ್ಪನವರ ವರದಿಯ ಆಧಾರದಲ್ಲಿ ಅನುದಾನ ಬಳಕೆ ಮಾಡಬಹುದು ಎಂದು ತೀರ್ಮಾನಿಸಿದ್ದಾರೆ. ಮಂಡಳಿಯ ಈ ನಿರ್ಣಯದಲ್ಲಿ ಆದ ಪ್ರಮಾದವೇ ನೆಂದರೆ, ಒಂದೂ ವರೆ ದಶಕದಿಂದ ಈ ಭಾಗದ ವಿವಿಧ ತಾಲ್ಲೂಕುಗಳಲ್ಲಿ ಆದ ಅಭಿವೃದ್ದಿಯ ಬದಲಾವಣೆ ಯನ್ನು ಪರಿಗಣಿಸದೇ ಇರುವದುರಿಂದ ಬಹುತೇಕ ತಾಲ್ಲೂಕುಗಳಿಗೆ ಅನ್ಯಾಯವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪ್ರದೇಶದ ಅಭಿವೃದ್ದಿ ಕೇವಲ ಸರಕಾರದ ಜವಾಬ್ದಾರಿ ಮಾತ್ರವಲ್ಲ, ಆ ಪ್ರದೇಶದಿಂದ ಆಯ್ಕೆಯಾದ ಜನಪ್ರತಿನಿಧಿಯ ಜವಾಬ್ದಾರಿಯೂ ಕೂಡ ಅಷ್ಟೇ ಮಹತ್ವದ್ದಾಗಿರುತ್ತದೆ. ಕಳೆದ ಹದಿನೈದು ವರ್ಷಗಳಲ್ಲಿ ಬಹುತೇಕ ವಿಧಾನಸಭಾ ಕ್ಷೇತ್ರ ಗಳಲ್ಲಿ ಹೊಸ ಹೊಸ ಯುವ ಜನಪ್ರತಿನಿಧಿಗಳು ಆಯ್ಕೆಯಾಗಿರುವುದು ಕಂಡುಬಂದಿದೆ. ಈ ಹದಿನೈದು ವರ್ಷಗಳಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳ ಇಚ್ಚಾಶಕ್ತಿ, ಆಸಕ್ತಿ, ಬದ್ದತೆಯ ಕಾರಣದಿಂದ ಕೆಲವು ತಾಲ್ಲೂಕುಗಳು ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕುವೆಂದು ಪರಿಗಣಿಸಿದ್ದರೂ ಈಗ ಅಂತಹ ತಾಲ್ಲೂಕು ಸಾಕಷ್ಟು ಅಭಿವೃದ್ದಿ ಯಾಗಿವೆ ಮತ್ತು ಸರಕಾರಗಳು ಕೂಡ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನ ಕ್ಕಾಗಿ ಸಾವಿರಾರು ಕೋಟಿ ಅನುದಾನ ಖರ್ಚು ಮಾಡಿರುವುದರಿಂದ ಆ ಹಿಂದುಳಿದ ತಾಲ್ಲೂ ಕುಗಳಲ್ಲಿ ಅಭಿವೃದ್ದಿಯ ಬದಲಾವಣೆಯಾಗಿರಬಹುದು.
ಉದಾಹರಣೆಗೆ, ಡಾ.ಡಿ.ಎಂ.ನಂಜುಂಡಪ್ಪನವರು ಪ್ರಾದೇಶಿಕ ಅಸಮಾನತೆ ಕುರಿತು ಅಧ್ಯಯನ ಮಾಡುವಾಗ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಅಭಿವೃದ್ದಿ ಎನ್ನುವುದು ಮರೀಚಿಕೆಯಾಗಿತ್ತು. 2002ರ ನಂತರ ಆ ತಾಲ್ಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯ ಹಾಗೂ ಗೂಗಲ್ ಬ್ಯಾರೆಜ್ ನಿರ್ಮಾಣದ ಕಾರಣಕ್ಕೆ ನೀರಾವರಿ ವ್ಯವಸ್ಥೆ ಜಾರಿಗೆ ಬಂದು ರೈತರ ಜಮೀನುಗಳು ನೀರಾವರಿಗೆ ಒಳಪಟ್ಟಿರುವದರಿಂದ, ದೇವ ದುರ್ಗ ತಾಲ್ಲೂಕಿನಲ್ಲಿ ಬಹುತೇಕ ಆರ್ಥಿಕ ಬದಲಾವಣೆಯಾಗಿದೆ. ಅದರ ಜೊತೆಗೆ ರಸ್ತೆ ಯೇ ಕಾಣದ ಗ್ರಾಮೀಣ ಪ್ರದೇಶಗಳು ಡಾಂಬರ್ ರಸ್ತೆ ಕಂಡಿವೆ, ಹತ್ತಾರು ಶಾಲಾ ಕಾಲೇ ಜುಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಪ್ರಾರಂಭವಾಗಿ ಒಂದಿಷ್ಟು ಶೈಕ್ಷಣಿಕ ಬದಲಾವಣೆ ಕಂಡಿದೆ. ಅದೇ ರೀತಿ ಗುಲ್ಬರ್ಗಾ ನಗರ ತಾಲ್ಲೂಕು ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಯಂತೆ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿ ಗುರುತಿಸಲಾಗಿದ್ದರೂ 2002ರ ನಂತರ ಎನ್.ಧರ್ಮಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿಯಾದ ಕಾರಣಕ್ಕೋ ಅಥವಾ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರದಲ್ಲಿ ಸಚಿವರಾದ ಕಾರಣಕ್ಕೋ ಗುಲ್ಬರ್ಗಾ ತಾಲ್ಲೂಕು ಈಗ ಯಾವ ದೃಷ್ಟಿಯಲ್ಲೂ ಹಿಂದುಳಿದಿದೆ ಎಂದು ಅನಿಸುವುದೇ ಇಲ್ಲ. ಹೀಗಾಗಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನದ ನಂತರ ಹಾಗೂ ರಾಜ್ಯ ಸರಕಾರದ ಇಚ್ಛಾಶಕ್ತಿಯ ಕಾರಣಕ್ಕೆ ಆದ ಬದಲಾವಣೆಯನ್ನು ಪರಿಗಣಿಸದೇ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಆ ವರದಿಯ ಆಧಾರದಲ್ಲಿ ಕಾರ್ಯ ನಿರ್ವಹಿ ಸುತ್ತಿರುವುದು ಸೂಕ್ತವಲ್ಲ. ಅದರ ಬದಲಾಗಿ ಒಂದು ಕಾಲಮಿತಿಯೊಳಗೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯ ಅನುಷ್ಠಾನದ ನಂತರ ಆದ ಬದಲಾವಣೆ ಮತ್ತು ಮಂಡಳಿಯ ಅಭಿವೃದ್ದಿಯ ಹತ್ತು ವರ್ಷಗಳ ಮುನ್ನೋಟವನ್ನು ತಯಾರಿಸಲು ಒಂದು ಸಮಿತಿ ರಚನೆ ಮಾಡಿ ಸೂಕ್ತ ವರದಿ ಪಡೆಯಲಿಕ್ಕೆ ಪ್ರಯತ್ನ ಮಾಡಬಹುದಿತ್ತು.
ಆದರೆ, ಸರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಪ್ರತಿ ವರ್ಷ ಸಾವಿರಾರು ಕೋಟಿ ಅನುದಾನ ನೀಡುತ್ತಿದೆಯಾದರೂ ಅದಕ್ಕೆ ಒಬ್ಬ ಖಾಯಂ ಕಾರ್ಯ ದರ್ಶಿಯನ್ನು ನೇಮಕ ಮಾಡದೇ ಇರುವದು ಕೂಡ ಹಿಂದುಳಿದ ಪ್ರದೇಶದ ಅಭಿವೃದ್ದಿಯ ಬಗ್ಗೆ ಸರಕಾರಕ್ಕೆ ಇರುವ ಬದ್ಧತೆಯನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ಒಬ್ಬ ಖಾಯಂ ಕಾರ್ಯದರ್ಶಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಸರಕಾರ ನೇಮಕ ಮಾಡಿದಲ್ಲಿ, ಆ ಅಧಿಕಾರಿ ತಿಂಗಳಲ್ಲಿ ಒಂದು ದಿನವಾದರೂ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಮಂಡಳಿಯಿಂದ ಅನುಷ್ಠಾನವಾಗುತ್ತಿರುವ ಕಾರ್ಯಕ್ರಮಗಳ ವೀಕ್ಷಣೆ, ಕಾಮಗಾರಿ ಗುಣ ಮಟ್ಟ ಪರಿಶೀಲನೆ ಮಾಡಿದಲ್ಲಿ ಯೋಜನೆಗಳ ಅನುಷ್ಠಾನ ವೇಗ ಪಡೆಯುತ್ತಿತ್ತು. ಪ್ರಾದೇಶಿಕ ಆಯುಕ್ತರನ್ನೇ ಮಂಡಳಿಯ ಪ್ರಭಾರಿ ಕಾರ್ಯದರ್ಶಿಯೆಂದು ನೇಮಕ ಮಾಡುತ್ತಿರುವ ಕಾರ ಣಕ್ಕೆ ಆ ಅಧಿಕಾರಿಗೆ ನೆಪ ಹೇಳಲಿಕ್ಕೆ ಅವಕಾಶ ಕೊಟ್ಟಂತಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಖಾಯಂ ಕಾರ್ಯದರ್ಶಿ ಇಲ್ಲದೆ ಇರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಶೇ. 30ಕ್ಕಿಂತ ಕಡಿಮೆ ಜ್ಚಿಚ್ಝ ಹಾಗೂ ಊಜ್ಞಿಚ್ಞ್ಚಜಿಚ್ಝ ಪ್ರಗತಿ ಸಾಧಿಸಿದೆ. ಉದಾಹರಣೆಗೆ ರಾಯಚೂರು ಜಿಲ್ಲೆಗೆ ಹರಿದು ಬಂದಂತಹ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅನುದಾನದಡಿಯಲ್ಲಿ ಕೈಗೊಂಡ ಕಾಮಗಾರಿ ಗಳನ್ನು ವಿವಿಧ ಇಲಾಖೆ ಅಥವಾ ಏಜೆನ್ಸಿಗಳಿಗೆ ಹಂಚಿಕೆ ಮಾಡಲಾಗಿದೆ. ರಾಯಚೂರು ಜಿಲ್ಲೆಯ ಲೋಕೋಪಯೋಗಿ ಇಲಾಖೆಗೆ 373 ಕಾಮಗಾರಿಗಳನ್ನು ನೀಡಲಾಗಿದೆ, ಅವುಗಳಲ್ಲಿ 157 ಕಾಮಗಾರಿಗಳು ಪ್ರಾರಂಭ ಮಾಡಿರುವುದಿಲ್ಲವೆಂದು, 34 ಕಾಮಗಾರಿ ಮುಗಿದಿವೆ ಮತ್ತು ಉಳಿದ ಕಾಮಗಾರಿಗಳು ಪ್ರಗತಿ ಹಂತದಲ್ಲಿ ವೆಯೆಂದು ವರದಿ ನೀಡಿವೆ. ಅಂದರೆ, ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯು ಕಳೆದ ನಾಲ್ಕು ವರ್ಷ ಗಳಲ್ಲಿ ಈ ಇಲಾಖೆಗೆ ನೀಡಿದ ಕಾಮಗಾರಿಗಳಲ್ಲಿ ಶೇ. 9 ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಈಗಿರುವ ವ್ಯವಸ್ಥೆಯಲ್ಲಿ ಪ್ರಭಾವಿ ರಾಜಕಾರಣಿ ಇರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ, ಉಳಿದ ಕ್ಷೇತ್ರಗಳಿಗೆ ಸಾಮಾನ್ಯವಾಗಿ ಅತೀ ಕಡಿಮೆ ಅನುದಾನ ನೀಡಲಾಗುತ್ತಿದೆ. ಪ್ರಭಾವಿ ರಾಜ ಕಾರಣಿಗಳಿಗೆ ಹೆಚ್ಚು ಅನುದಾನ ನೀಡಲು ಬಳಸಿಕೊಳ್ಳುತ್ತಿರುವ ವ್ಯವಸ್ಥೆಯನ್ನು ಮ್ಯಾಕ್ರೋ ಕಾಮಗಾರಿಯೆಂದು ಹೆಸರಿಸಲಾಗಿದೆ. ಮಂಡಳಿಗೆ ಪ್ರತಿವರ್ಷ ಸರಕಾರ ನೀಡುತ್ತಿರುವ ಅನು ದಾನವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಅನುದಾನದ ಒಂದು ಭಾಗವನ್ನು ಡಾ.ಡಿ.ಎಂ. ನಂಜುಂಡಪ್ಪನವರ ವರದಿಯ ಇಟಞಟ್ಟಛಿಛ್ಞಿಜಿಛಿ ಇಟಞಟಜಿಠಿಛಿ ಈಛಿಛ್ಝಿಟಞಛ್ಞಿಠಿ ಐ್ಞಛ್ಡಿ(ಇಇಈಐ) ಅಂಕಿ ಅಂಶಗಳ ಆಧಾರದಲ್ಲಿ ತಾಲ್ಲೂಕುಗಳಿಗೆ ಹಂಚಿಕೆ ಮಾಡಲಾಗಿ. ಎರಡನೇಯ ಭಾಗವನ್ನು ಚ್ಚ್ಟಟಟ್ಟಟ್ಜಛ್ಚಿಠಿ ಎಂದು ವಿಂಗಡಿಸಿ ಪ್ರಭಾವಿ ಜನಪ್ರತಿನಿಧಿ ಇರುವ ಕ್ಷೇತ್ರ ಳಿಗೆ ನೀಡಲಾಗುತ್ತಿದೆ. ಈ ರೀತಿ ಮಂಡಳಿಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಕಳೆದ ನಾಲ್ಕು ವರ್ಷಗಳಿಂದಲೂ ನಡೆದುಕೊಂಡು ಬಂದರೂ ಇತರೆ ಜನಪ್ರತಿನಿಧಿಗಳು ಮಂಡಳಿಯ ಈ ನಿಲುವನ್ನು ಪ್ರಶ್ನೆ ಮಾಡಿರುವುದಿಲ್ಲ. ಇದು ಹೈದ್ರಾಬಾದ ಕರ್ನಾಟಕ ಪ್ರದೇಶದ 31 ತಾಲ್ಲೂಕುಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಂತರಿಕ ಅಸಮಾನತೆ ಸೃಷ್ಟಿ ಮಾಡುತ್ತಿರುವುದು ಕಳವಳಕಾರಿ ವಿಷಯ. ಹೈದ್ರಾಬಾದ ಕರ್ನಾ ಟಕ ಪ್ರದೇಶದ 31 ತಾಲ್ಲೂಕುಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ದಿಯ ತಾರತಮ್ಯ ಹೆಚ್ಚು ಹೆಚ್ಚು ಬೆಳೆಯುತ್ತಿರುವುದು ಕಂಡು ಬಂದಿದೆ.
ಸಂವಿಧಾನದ 371ಜೆ ತಿದ್ದುಪಡಿಗಾಗಿ ದಶಕಗಳ ಕಾಲ ಹೋರಾಟ ಮಾಡಿದ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿಚಾರವಾದಿಗಳು, ಬುದ್ದಿಜೀವಿಗಳು, ರಾಜಕೀಯ ಪಕ್ಷಗಳ ಮುಖಂಡರು ಮಂಡಳಿಯಲ್ಲಿ ಆಗುತ್ತಿರುವ ಈ ತಾರತಮ್ಯವನ್ನು ಪ್ರಶ್ನೆ ಮಾಡದೇ ಇರುವುದು ಸೋಜಿಗವಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಸಂವಿಧಾ ನದ 371ಜೆ ತಿದ್ದುಪಡಿ ಆದರೆ ಮಾತ್ರ ಸಾಲುವುದಿಲ್ಲ ಅದರ ಸಮರ್ಪಕ ಅನುಷ್ಠಾನವಾಗುವ ಅವಶ್ಯಕತೆಯಿದೆ. ಹಾಗಾಗಿ ಈ ಭಾಗದ ಸಂಘಟನೆಗಳು ತಾವು ನಡೆಸಿದ ಹೋರಾಟ ಮುಗಿದಿದೆ ಎಂದು ಭಾವಿಸುವ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ಈ ಭಾಗದ ಎಲ್ಲ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿಚಾರವಾದಿಗಳು, ರಾಜಕೀಯ ಪಕ್ಷಗಳ ಪ್ರಮುಖರು, ಬುದ್ದಿಜೀವಿಗಳು ಒಗ್ಗಟ್ಟಾಗಿ ಒಂದು ವೇದಿಕೆಗೆ ಬಂದು ಚರ್ಚಿಸಿ ಮಂಡಳಿ ಯನ್ನು ಸರಿದಾರಿಗೆ ತರುವ ಕುರಿತು ಹೋರಾಟ ರೂಪಿಸದೇ ಇದ್ದರೆ ಈ ಭಾಗಕ್ಕೆ ಉಳಿಗಾಲ ವಿಲ್ಲ ಎನ್ನುವುದು ಸ್ಪಷ್ಟ.
ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ಈ ಭಾಗದ ಅಭಿವೃದ್ದಿಗಾಗಿ ಪ್ರತಿ ತಾಲ್ಲೂಕಿನಲ್ಲಿ ಆಗಬೇಕಾದ ಅಭಿವೃದ್ದಿಗಳ ಕುರಿತು ಮುಂದಿನ ಹತ್ತು ವರ್ಷದ ಕ್ರಿಯಾ ಯೋಜನೆಯನ್ನು ತಯಾರಿಸಬೇಕಿದೆ. ಪ್ರತಿ ತಾಲ್ಲೂಕಿನಲ್ಲಿ ಈಗ ಲಭ್ಯವಿರುವ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಸಂಖ್ಯೆ, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು, ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿ ಯನ್ನು ಪರಿಗಣಿಸಬೇಕು. ಆ ತಾಲ್ಲೂಕಿನಲ್ಲಿ ಇರುವ ಜನಸಂಖ್ಯೆ ಆಧರಿಸಿ ಮತ್ತು ಮುಂದಿನ ಹತ್ತು ವರ್ಷಗಳಲ್ಲಿ ಹೆಚ್ಚಾಗುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಮಟ್ಟದ ಅಭಿವೃದ್ದಿಯ ಹಿನ್ನೆಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ಆಗಬೇಕಾದ ಮತ್ತು ಅವಶ್ಯವಿರುವ ಕ್ರಿಯಾ ಯೋಜನೆಯೊಂದನ್ನು ಸಿದ್ದಪಡಿಸಿ, ಮಂಡಳಿಗೆ ಬರುವ ಅನುದಾನ ವನ್ನು ಮುಂದಿನ ಹತ್ತು ವರ್ಷದಲ್ಲಿ ಆ ತಾಲ್ಲೂಕಿಗೆ ಪ್ರತಿ ವರ್ಷ ಏಷ್ಟು ಅನುದಾನ ನೀಡಿದರೆ ಈ ಕ್ರಿಯಾ ಯೋಜ ನೆಯಂತೆ ಅಭಿವೃದ್ದಿ ಮಾಡಬಹುದೆಂದು ಒಂದು ನೀಲಿ ನಕ್ಷೆ ತಯಾರಿಸಬೇಕಿದೆ.
ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಗೆ ಮುಂದಿನ ಹತ್ತು ವರ್ಷಗಳಲ್ಲಿ ಯಾರೇ ಅಧ್ಯಕ್ಷರಾಗಿ ಅಥವಾ ಸದಸ್ಯರಾಗಿ ನೇಮಕವಾದರೂ ಅಥವಾ ರಾಜ್ಯದಲ್ಲಿ ಯಾವು ದೇ ಪಕ್ಷದ ಸರಕಾರ ಬಂದರೂ ಅಥವಾ ಯಾರೇ ವಿಧಾನಸಭಾ ಸದಸ್ಯರಾಗಿ ಅಥವಾ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರೂ ಮಂಡಳಿ ತಯಾರು ಮಾಡಿರುವ ನೀಲಿ ನಕ್ಷೆಯ ಕ್ರಿಯಾ ಯೋಜನೆ ಯಂತೆಯೇ ಅನುದಾನವನ್ನು ಪ್ರತಿ ತಾಲ್ಲೂಕಿಗೆ ನೀಡಬೇಕು. ಇದರಿಂದ ಈ ಭಾಗದಲ್ಲಿ ತಾಲ್ಲೂಕುಗಳ ನಡುವೆ ಸೃಷ್ಟಿಯಾಗುತ್ತಿರುವ ಅಭಿವೃದ್ದಿ ತಾರತಮ್ಯಕ್ಕೆ ಅವಕಾಶವಿರುವುದಿಲ್ಲ. ಈ ನಿಟ್ಟಿನಲ್ಲಿ ಮಂಡಳಿ ಮತ್ತು ಈ ಭಾಗದ ಜನಪ್ರತಿನಿಧಿಗಳು ವಿಚಾರ ಮಾಡುವ ಅವಶ್ಯಕತೆಯಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಕಾರ್ಯನೀತಿಯನ್ನು ಸರಿದಾರಿಗೆ ತರದೇ ಇದ್ದರೆ ಇಂತಹ ಇನ್ನೂ ಹತ್ತು ಮಂಡಳಿ ಸ್ಥಾಪನೆ ಮಾಡಿದರೂ ಈ ಭಾಗದ ಅಭಿವೃದ್ದಿ ಸಾಧ್ಯವಾಗುವದಿಲ್ಲ. ಈ ಭಾಗದ ಜನರ ಸಹಭಾಗಿತ್ವ ಇಲ್ಲದೇ ಇದ್ದರೆ ಯಾವುದೇ ಅಭಿವೃದ್ದಿ ಯೋಜನೆಯೂ ಕೂಡ ಜನರಿಗೆ ತಲುಪಲಿಕ್ಕೆ ಆಗುವುದಿಲ್ಲ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸತ್ಯ.
'