11/16/2019

ದೇಶ | ವಿದೇಶ ವಿವರ ಪುಟ

ಕವಿತಾಳ : ಕೃಷಿಹೊಂಡ ನಿರ್ಮಾಣದಲ್ಲಿ ಹಣ ಎತ್ತುವಳಿ-ಸರಕಾರದ ಹಣ ದುರುಪಯೋಗ..? ಅನುಮೋದನೆ ಒಬ್ಬರಿಗೆ ; ಕಾಮಗಾರಿ ಮತ್ತೊಬ್ಬರಿಗೆ - ದೂರು

Font size -16+

'ಸುದ್ದಿಮೂಲ ವಾರ್ತೆೆ, ಕವಿತಾಳ, ಆ.25
ಪಟ್ಟಣ ಸಮೀಪದ ಹಿರೇಹಣಗಿ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಕೃಷಿಹೊಂಡ ನಿರ್ಮಾಣ ಕಾಮಗಾರಿಯಲ್ಲಿ ಸರಕಾರದ ಹಣ ದುರುಪಯೋಗವಾದ ಹಿನ್ನೆಲೆಯಲ್ಲಿ ಕಾಮಗಾರಿಯಿಂದ ವಂಚಿತಗೊಂಡ ಲಾನುಭವಿ ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ.
ಗ್ರಾಮದ ವೀರನಗೌಡ ತಂದ ಗೌಡರಡ್ಡೆಪ್ಪಗೌಡ ಎನ್ನುವವರು ತಮ್ಮ ಸ.ನಂ.3/ಎ ಜಮೀನಿನಲ್ಲಿ ಕೃಷಿಹೊಂಡ ನಿರ್ಮಾಣಕ್ಕಾಗಿ ಅರ್ಜಿ ಹಾಕಿದ್ದರು, ಕಾಮಗಾರಿಗೆ ಗ್ರಾಮಸಭೆಯಲ್ಲಿ ಅಂಗೀಕರಿಸುವ ಮೂಲಕ ಕಾಮಗಾರಿ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಕೂಡ ನೀಡಲಾಗಿತ್ತು, ಆದರೆ ಅರ್ಜಿ ಸಲ್ಲಿಸಿದ್ದು ಒಬ್ಬರು, ಕಾಮಗಾರಿ ತೆಗೆದುಕೊಂಡದ್ದು ಇನ್ನೊಬ್ಬರು ಎನ್ನುವ ಗೊಂದಲದ ಮಧ್ಯೇ ಬಿಲ್ ಮಾತ್ರ ಎತ್ತುವಳಿಯಾಗಿರುವುದು ಸತ್ಯವಾಗಿದೆ.
ದೂರು ವಿವರ-ವೀರನಗೌಡ ಎನ್ನುವವರು ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿಹೊಂಡ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಇವರ ಜಮೀನಿನಲ್ಲಿ ಯಾವುದೇ ಕಾಮಗಾರಿ ಮಾಡದೆ ಬಿಲ್ ಎತ್ತಿರುವುದು ಮನಗಂಡ ಇವರು ಗ್ರಾ.ಪಂ.ಯಲ್ಲಿ ವಿಚಾರಿಸಿದರೆ ಗ್ರಾ.ಪಂ.ಆಡಳಿತ ಮಂಡಳಿ ಸರಿಯಾದ ಮಾಹಿತಿ ನೀಡದೆ ನಿಷ್ಕಾಳಜಿ ತೋರಿದ್ದಾರೆ, ಆದರೆ ಇದೇ ಜಮೀನಿನಲ್ಲಿ ಕೃಷಿಹೊಂಡ ನಿರ್ಮಾಣದ ಹೆಸರಿನಲ್ಲಿ ಗ್ರಾ.ಪಂ.ಅಧಿಕಾರಿಗಳು 41,860 ರೂ.ಗಳು ಕೂಲಿಕಾರರ ಹೆಸರಿನಲ್ಲಿ ಪಾವತಿ ಮಾಡಿದ್ದಾರೆ. ಕಾಮಗಾರಿ ನಿರ್ವಹಿಸದೆ ಹಣ ಎತ್ತುವಳಿ ಮಾಡಿದ್ದಲ್ಲದೆ ಸರಕಾರದ ಹಣ ದುರುಪಯೋಗಪಡಿಸಿಕೊಂಡಿದ್ದಾರೆ, ನಾವು ಯೋಗ್ಯ ಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದೇ ವೆಂದು ಜಮೀನು ಮಾಲೀಕರ ಮಗ ಪ್ರವೀಣಕುಮಾರ ಅವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪಂ. ರಾಯಚೂರು ಹಾಗೂ ಕಾರ್ಯನಿರ್ವಾ ಹಕ ಅಧಿಕಾರಿ ತಾ.ಪಂ.ಮಾನ್ವಿ ಇವರಿಗೆ ದೂರು ನೀಡಿ ಕಾಮಗಾರಿಗೆ ಸಂಬಂಧಿಸಿದವರ ಮೇಲೆ ಸೂಕ್ತಕ್ರಮ ಜರುಗಿಸಬೇಕೆಂದು ಒತ್ತಾಯಿದ್ದಾರೆ.
ಸಂಪರ್ಕ-ದೂರವಾಣಿ ಮೂಲಕ ಗ್ರಾ.ಪಂ.ಅಧ್ಯಕ್ಷ ಚನ್ನಬಸವನಗೌಡ ಅವರನ್ನು ಸಂಪರ್ಕಿಸಿ ವಿಚಾರಿಸಿದರೆ ವೀರನಗೌಡ ಎನ್ನುವವರ ಮನೆಯಲ್ಲಿ ಕೆಲಸ ಮಾಡುವ ತಿಮ್ಮಣ್ಣ ಎನ್ನುವ ವ್ಯಕ್ತಿ ವೀರನಗೌಡ ಹೆಸರಿನಲ್ಲಿ ಕೃಷಿಹೊಂಡ ಕಾಮಗಾರಿಗೆ ಅರ್ಜಿಸಲ್ಲಿದ್ದಾನೆ, ತನ್ನ ಜಮೀನು ತೋರಿಸಿ ಇದು ಗೌಡರ ಜಮೀನು ಇಲ್ಲಿ ಕೃಷಿಹೊಂಡ ನಿರ್ಮಿಸಲು ಹೇಳಿದ್ದಾರೆಂದು ತನ್ನ ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಿ ಹಣ ಪಡೆದುಕೊಂಡಿದ್ದಾನೆ. ಇದಕ್ಕೆ ವೀರನಗೌಡರು ಸಹ ಒಪ್ಪಿಗೆ ನೀಡಿದ್ದರು.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಹೇಶ ಅವರನ್ನು ವಿಚಾರಿಸಿದರೆ ಅಧ್ಯಕ್ಷರು ನೀಡಿದ ಮಾಹಿತಿ ನೀಡುತ್ತ ವೀರನಗೌಡ ಎನ್ನುವವರ ಮನೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ರಸ್ತೆ ಅಗಲೀಕರಣ ಸಮಯದಲ್ಲಿ ಮನೆ ತೆರವುಗೊಳಿಸಲಾಗುವುದೆಂಬ ಉದ್ದೇಶದಿಂದ ನಮ್ಮ ಗ್ರಾ.ಪಂ.ಯಿಂದ ಎನ್‌ಎ ಆದ ಖಾತಾ ಉತಾರ ಕಾಪಿ ನೀಡುವಂತೆ ಕೇಳಿದ್ದರು. ಆದರೆ ನಮ್ಮ ಗ್ರಾ.ಪಂ.ಗ್ರಾಮ ಠಾಣಾ ವ್ಯಾಪ್ತಿಗೆ ಬರುವುದರಿಂದ ಎನ್‌ಎ ಖಾತಾ ಉತಾರ ನೀಡಲು ಬರುವುದಿಲ್ಲವೆಂದು ಹೇಳಿದ್ದಕ್ಕೆ, ಅಲ್ಲದೆ ಖಾತಾ ಉತಾರ ಪಡೆಯಲು ಸರಿಯಾದ ದಸ್ತಾವೇಜು ನೀಡೆಂದು ಹೇಳಿದರೂ ನೀಡದೆ ಈ ವಿಷಯ ಆಧಾರವಾಗಿಟ್ಟುಕೊಂಡು ಕೃಷಿಹೊಂಡ ಕಾಮಗಾರಿ ತಾಲೇ ಖುದ್ದಾಗಿ ನಿರ್ಮಿಸಿ ನಮ್ಮ ಮೇಲೆ ಆರೋಪ ಹೊರಿಸುತ್ತಿ ದ್ದಾರೆಂದು ಮಾಹಿತಿ ನೀಡಿದರು.
ಪ್ರವೀಣ ಅವರನ್ನು ವಿಚಾರಿಸಿದರೆ ಗ್ರಾ.ಪಂ.ಯಲ್ಲಿ ತುಂಬ ಭ್ರಷ್ಟಾಚಾರ ನಡೆಯುತ್ತಿದೆ, ಹೇಳುವವರಿಲ್ಲ, ಕೇಳುವವರಿಲ್ಲ, ಅರ್ಜಿ ನಮ್ಮದು, ಕಾಮಗಾರಿ ಬೇರೆಯವರಿಗೆ ಇದು ಯಾವ ನ್ಯಾಯವೆಂದು ಹೇಳಿದರು.'