9/18/2019

ದೇಶ | ವಿದೇಶ ವಿವರ ಪುಟ

ಜನರ ಧ್ವನಿಯಾಗಿ ಪತ್ರಕರ್ತರ ಕೆಲಸ - ಶಾಸಕ ಶಿವನಗೌಡ

Font size -16+

'ಸುದ್ದಿಮೂಲ ವಾರ್ತೆೆ, ದೇವದುರ್ಗ, ಆ.25
ಜನರ ಸಮಸ್ಯೆ ಮತ್ತು ಅಭಿವೃದ್ಧಿಪರವಾದ ಕೆಲಸಗಳು ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಕಾಣದೇ ಇದ್ದಾಗ ಪತ್ರಕರ್ತರು ಸುದ್ದಿ ಮಾಡುವ ಮೂಲಕ ಜನರ ಧ್ವನಿಯಾಗಿ ಪ್ರಚಾರಗೊಳಿಸಿ ಎಚ್ಚರಿಸುತ್ತಾರೆಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಮುರಿಗೆಪ್ಪ ಖೇಣೇದ್ ಂಕ್ಷನ್ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಹಿಂದುಳಿದ ತಾಲೂಕ ಎನ್ನುವ ಕಳಂಕ ತೆಗೆದು ಹಾಕಿ ಶೈಕ್ಷಣಿಕವಾಗಿ, ಮತ್ತು ಅಭಿವೃದ್ಧಿ ಕೆಲಸಗಳಿಂದ ರಾಜ್ಯದಲ್ಲಿ ದೇವದುರ್ಗ ತಾಲೂಕು ಗುರ್ತಿಸುವ ಕೆಲಸ ಮಾಡುವುದಕ್ಕೆ ಪರ್ತಕರ್ತರು ಸಹಕರಿಸಬೇಕು ಎಂದರು.
ಯಾವುದೇ ವ್ಯಕ್ತಿಗತವಾಗಿ ತೇಜೋವಧೆ ಸುದ್ದಿ ಮಾಡದೇ ಪತ್ರಿಕೆ ಮೇಲಿಟ್ಟಿರುವ ಜನರ ವಿಶ್ವಾಸಕ್ಕೆ ನೈಜ ಸುದ್ದಿ ಮಾಡುವ ಮೂಲಕ ಜನಪತ್ರಿನಿಧಿಗಳಿಗೆ ಅಧಿಕಾರಿಗಳಿಗೆ ಕಣ್ಣು ತೆರೆಸುವಂತ ಕೆಲಸ ಮಾಡಬೇಕಾಗಿದೆ ಎಂದು ಕೆ.ಶಿವನಗೌಡ ನಾಯಕ ಹೇಳಿದರು.
ಸಂಸದ ಬಿ.ವಿ. ನಾಯಕ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೆ ತರುವ ಹಲವಾರು ಯೋಜನೆಗಳು ಜನ ಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಪತ್ರಿಕೆಗಳ ಮೇಲೆ ಇದೆ.ಪತ್ರಿಕೆಗಳು ಆಡಳಿತದಲ್ಲಿರುವ ಸರಕಾರದ ವಿರೋಧ ಪಕ್ಷವಾಗಿ ಕೆಲಸ ಮಾಡಿದಾಗ ಮಾತ್ರ ಜನಸಾಮಾನ್ಯರಿಗೆ ನ್ಯಾಯ ಸಿಗುವಂತಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ ಮಾತನಾಡಿ, ಸ್ಥಳೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕ ಮತ್ತು ಗ್ರಾಮೀಣ ಭಾಗದ ಪತ್ರಕರ್ತರಿಗೆ ಆರ್ಥಿಕ ಸಹಾಯ ಇರುವುದಿಲ್ಲವೆಂದು ತಿಳಿದು ಬಂದಿದ್ದು, ಇದರ ಸಂಬಂಧ ನಾನು ಸದನದಲ್ಲಿ ಧ್ವನಿ ಎತ್ತಿ ಸರಕಾರಕ್ಕೆ ಒತ್ತಾಯ ಮಾಡುವುದಾಗಿ ಇಟಗಿ ಭರವಸೆ ನೀಡಿದರು.ಹಲವು ಪತ್ರಕರ್ತರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಶ್ರೀನಿವಾಸ ಸೀರನೂರ್‌ಕರ್ ಜಿಲ್ಲಾ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಕಾರ್ಯದರ್ಶಿ ಗುರುನಾಥ, ಶಿವಮೂರ್ತಿ ಸೇರಿ ತಾಲೂಕಿನ ಪತ್ರಕರ್ತರು ಜನ ಪ್ರತಿನಿಧಿಗಳು ಭಾಗವಹಿಸಿದ್ದರು.'