9/18/2019

ದೇಶ | ವಿದೇಶ ವಿವರ ಪುಟ

ಪ್ರಸಕ್ತ ವರ್ಷ 1.95 ಕೋ.ರೂ ನಿವ್ವಳ ಲಾಭ ಮಾನ್ವಿಯ ಬಸವಶ್ರೀ ಬ್ಯಾಂಕು ಕಲ್ಲು ಸಕ್ಕರೆಯಂತಿದೆ - ಚೀಕಲಪರ್ವಿ ಶ್ರೀ

Font size -16+

'ಸುದ್ದಿಮೂಲ ವಾರ್ತೆೆ, ಮಾನ್ವಿ, ಆ.25
ಕಲ್ಲು ಸಕ್ಕರೆಯಂತಿರುವ ಮಾನ್ವಿಯ ಶ್ರೀ ಬಸವಶ್ರೀ ಬ್ಯಾಂಕು ಎಲ್ಲರಿಗೂ ಬೇಕಾಗಿದೆ ಎಂದು ಚೀಕಲಪರ್ವಿ ಮಠದ ಅಭಿನವ ಶ್ರೀ ರುದ್ರಮುನಿ ಮಹಾ ಸ್ವಾಮಿಗಳು ಬ್ಯಾಂಕಿನ ಕಾರ್ಯವನ್ನು ಬಣ್ಣಿಸಿದರು.
ರವಿವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸ ವಶ್ರೀ ಬ್ಯಾಂಕಿನ 16 ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಜವಾಬ್ದಾರಿ ಯುತ ವ್ಯಕ್ತಿಗಳು ತಮ್ಮ ಸುಖವನ್ನು ಇನ್ನೊ ಬ್ಬರಿಗೆ ಹಂಚಿಕೊಂಡು ಬದುಕುತ್ತಾರೆ ಎಂಬು ದಕ್ಕೆ ಬಸವಶ್ರೀ ಬ್ಯಾಂಕಿನ ಅಧ್ಯಕ್ಷರು, ನಿರ್ದೇ ಶಕರು ಸಾಕ್ಷಿಯಾಗಿದ್ದಾರೆ. ಈ ಬ್ಯಾಂಕಿನ ಆಡಳಿ ತ ಮಂಡಳಿ ಪ್ರಸಕ್ತ ವರ್ಷ ನೆರೆ ಸಂತ್ರಸ್ತರಿಗೆ 2 ಲಕ್ಷ 25 ಸಾವಿರ ದೇಣಿಗೆ ನೀಡಿದೆ.
ಪ್ರತಿ ವರ್ಷ ಹೆಚ್ಚು ಅಂಕ ಪಡೆದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ, ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಾರೆ. ನಿಧನ ಹೊಂದಿದ ಬ್ಯಾಂಕಿನ ಸದಸ್ಯರು 50 ಸಾವಿರ ಕ್ಕಿಂತ ಸಾಲ ಪಡೆದಿದ್ದರೆ ಅಂತವರ ಸಾಲವನ್ನು ಮನ್ನಾ ಮಾಡುತ್ತಾರೆ. ಪ್ರತಿವರ್ಷ ಬೇಸಿಗೆ ಯಲ್ಲಿ ಕುಡಿಯುವ ನೀರಿನ ಅರವಟಿಗೆ ಆರಂ ಭಿಸುತ್ತಾರೆ. ಪ್ರತಿ ವರ್ಷ ಜಿಲ್ಲೆಯ ಪ್ರತಿ ತಾ ಲೂಕಿನ ಒಂದು ಸರಕಾರಿ ಶಾಲೆಗೆ ಬಿಸಿಯೂಟ ಮಾಡಲು ಮಕ್ಕಳಿಗೆ ತಟ್ಟೆ-ಲೋಟ ಒದಗಿಸುತ್ತಾರೆ.
ಪ್ರತಿ ವರ್ಷ ಸಸಿಗಳನ್ನು ನೆಟ್ಟು ಪೋಷಿ ಸುವ ಕಾರ್ಯ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಆರ್ಥಿಕ ಸದೃಢತೆಯ ಜೊತೆಗೆ ಇಂತಹ ಸಮಾಜ ಮುಖಿ ಕಾರ್ಯ ಮಾಡುತ್ತಿರುವ ಬಸವಶ್ರೀ ಬ್ಯಾಂಕು ಬಸವ ಣ್ಣನ ಕಾಯಕ, ದಾಸೋಹ, ಸಮಾನತೆ ತತ್ವಗಳ ನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು ಈ ಬ್ಯಾಂಕು ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಡಾ.ಶಂಕರಗೌಡ ಎಸ್.ಪಾಟೀಲ್ ಮಾತನಾಡಿ ಜಿಲ್ಲೆಯ ಜನತೆಯ ಸಹಕಾರದೊ ಂದಿಗೆ ಮಾನ್ವಿ ಸೇರಿದಂತೆ ಜಿಲ್ಲೆಯ ಐದು ಕಡೆ ನಮ್ಮ ಬ್ಯಾಂಕು ಶಾಖೆಗಳನ್ನು ಹೊಂದಿದ್ದು 31-3-2019 ಕ್ಕೆ ಇದ್ದಂತೆ ಈ ಬ್ಯಾಂಕು 515 ಕೋ.ರೂ.ಗಳ ವಹಿವಾಟಿನೊಂದಿಗೆ ಪ್ರಸಕ್ತ ವರ್ಷ 1 ಕೋಟಿ 95 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದರು.
ನಿವೃತ್ತ ನೌಕರರನ್ನು, 80 ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಾನಿಧ್ಯ ವಹಿಸಿದ್ದ ಕಲ್ಮಠದ ಪೀಠಾಧ್ಯಕ್ಷ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾ ರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ದರು. ಬ್ಯಾಂಕಿನ ಮುಖ್ಯ ಕಾರ್ಯನಿವಾ ಣಾರ್ಧಿಕಾರಿ ವೀರೇಶ ಎನ್.ಹೊಸೂರು ವಾರ್ಷಿಕ ವರದಿ ಮಂಡಿಸಿದರು.
ವೇದಿಕೆಯ ಮೇಲೆ ನಿವೃತ್ತ ಬ್ಯಾಂಕ್ ಅಧಿಕಾರಿ ವಿ.ವಿ.ಮುಳುಗುಂದ, ಬ್ಯಾಂಕಿನ ನಿರ್ದೇಶಕರಾದ ಅಯ್ಯಣ್ಣ ಐರೆಡ್ಡಿ, ರೇವಣ ಸಿದ್ದಯ್ಯ ಹಿರೇಮಠ, ವೀರನಗೌಡ, ದೇವ ಯ್ಯಸ್ವಾಮಿ, ಅಮರಪ್ಪ, ಶರಣಪ್ಪ ಮಲ್ಲಾ ಪುರ, ಡಾ.ರುದ್ರಗೌಡ ಪಾಟೀಲ್, ಹೆಚ್. ಚನ್ನಪ್ಪ, ಬಸವರಾಜ ಪಾಟೀಲ್, ಜೆ.ಸಂಗನ ಗೌಡ, ಕೆ.ಮಲ್ಲಿಕಾರ್ಜುನ, ಬಸಮ್ಮ ಕಮತರ್, ಗಂಗಮ್ಮ ಎಸ್.ರಾಮದುರ್ಗ, ನಿರ್ಮಲಾ ಎಂ.ಅಶೋಕ್‌ಕುಮಾರ್, ಎಸ್.ಶರಣಪ್ಪ, ಕಾನೂನು ಸಲಹೆಗಾರರಾದ ವೀರನಗೌಡ ಎಂ.ಪೋತ್ನಾಳ್, ಭೂಪನಗೌಡ ಕರಡಕಲ್, ರವಿಕುಮಾರ್ ಅಳ್ಳುಂಡಿ, ಅರುಣ್‌ಕುಮಾರ್ ಉಪಸ್ಥಿತರಿದ್ದರು.'