9/18/2019

ದೇಶ | ವಿದೇಶ ವಿವರ ಪುಟ

ಗಬ್ಬೂರು ಮಠಕ್ಕೆ ಸಂಸದ ನಾಯಕ್ ಭೇಟಿ, ಸನ್ಮಾನ

Font size -16+

'ಸುದ್ದಿಮೂಲ ವಾರ್ತೆೆ, ಗಬ್ಬೂರು, ಆ.25
ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ್ ಇಂದು ಇಲ್ಲಿಯ ಶ್ರೀ ಬೂದಿ ಬಸವೇ ಶ್ವರ ಮಠಕ್ಕೆ ಭೇಟಿ ನೀಡಿ ಮಠದ ಶ್ರೀಗಳ ದರ್ಶನಾಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನೂ ಸಹ ಈ ಮಠದ ಭಕ್ತನಾಗಿದ್ದು, ಆಗಾಗ ಬಂದು ಹೋಗುತ್ತೇನೆ ಆದರೆ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ಮೇಲೆ ಇಲ್ಲಿಗೆ ಬರಲಾಗಿದ್ದಿಲ್ಲ, ಈಗ ಬಂದಿದ್ದೇನೆ. ಶ್ರೀಗಳು ಶ್ರೀಮಠದ ಪ್ರಗತಿಗೆ ನೆರವು ಬಯಸಿದಲ್ಲಿ ಸಂಸದರ ಅನುದಾನದಿಂದ ಮಂಜೂರು ಮಾಡುವುದಾಗಿ ಆಶ್ವಾಸನೆ ನೀಡಿದರು.
ಬಿಜೆಪಿ ಮುಖಂಡರುಗಳಾದ ರವೀಂದ್ರ ಜಲ್ದಾರ, ಪಂಪನಗೌಡ ತಿಮ್ಮಾಪೂರ, ಶಾಂತನ ಗೌಡ ಸಿಂಗನೋಡಿ,ಬಸನಗೌಡ ಕಲ್ಮಲಾ, ಬೂದೆಯ್ಯಸ್ವಾಮಿ ಮಠದ , ಬಸ್ಸಯ್ಯಸ್ವಾಮಿ, ರವೀಂದ್ರಗೌಡ, ಗ್ರಾ.ಪಂ.ಸದಸ್ಯ ಸೂಗರೆಡ್ಡಿ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.'