9/18/2019

ದೇಶ | ವಿದೇಶ ವಿವರ ಪುಟ

ಬಳ್ಳಾರಿಗೆ ಮತ್ತೊಮ್ಮೆ ಕೈ ತಪ್ಪುವುದೇ ಕೆ.ಎಂ.ಎ್ ಅಧ್ಯಕ್ಷ ಸ್ಥಾನ ?

Font size -16+

'ಸುದ್ದಿಮೂಲ ವಾರ್ತೆೆ, ಬಳ್ಳಾರಿ, ಆ.25
ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕ ರಾಜ್ಯ ಹಾಲು ಒಕ್ಕೂಟ ಮಂಡಳಿಯ ಅಧ್ಯಕ್ಷ ಸ್ಥಾನ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ಎರಡನೇ ಬಾರಿಗೆ ಬಂದಿದೆ.
ರಾಜ್ಯ ಹಾಲು ಒಕ್ಕೂಟ ಮಂಡಳಿಯ ಅಧ್ಯಕ್ಷ ಸ್ಥಾನ ಅಂದಿನ ಬಿಜೆಪಿಯ ಯಡಿ ಯೂರಪ್ಪ ಸರ್ಕಾರದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅಲಂಕರಿಸಿ ಬಳ್ಳಾರಿ ಜಿಲ್ಲೆಯ ರಾಜ್ಯದ ಪ್ರಥಮ ಅಧ್ಯಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಆ ನಂತರದಲ್ಲಿ ಮಾಜಿ ಮುಖ್ಯ ಮಂತ್ರಿ ಎಂ.ಪಿ.ಪ್ರಕಾಶ್ ರವರ ಪುತ್ರ ಹರ ಪನಹಳ್ಳಿಯ ದಿ.ಮಾಜಿ ಶಾಸಕ ಎಂ.ಪಿ. ರವೀಂದ್ರ ರವರಿಗೂ ಸಹ ಕೆ.ಎಂ.ಎ್ ಅಧ್ಯಕ್ಷ ಸ್ಥಾನ ಇನ್ನೇನು ಒಲಿದು ಬಂತು ಎನ್ನುವ ವೇಳೆಗೆ ತಕ್ಷಣ ಕಾಂಗ್ರೆಸ್‌ನಲ್ಲಿ ಕೆಲ ವು ನಾಯಕರುಗಳು ಅಪಸ್ವರ ಹಾಗೂ ಭಿನ್ನ ಮತದಿಂದ ಬೇರೆಯವರ ಪಾಲಾಯಿತು.
2 ವರ್ಷದ ಅವಧಿಗಾಗಿ ರಾಮನಗರದ ನಾಗರಾಜ್ ಅಧ್ಯಕ್ಷರು ಮುಂದಿನ ಮೂರು ವರ್ಷದ ಅಧ್ಯಕ್ಷ ಸ್ಥಾನ ಎಂ.ಪಿ.ರವೀಂದ್ರ ರವರಿಗೆ ನೀಡಬೇಕು ಎರಡು ವರ್ಷಗಳು ಪೂರೈಸಿದ ನಂತರ ನಾಗರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರವೀಂದ್ರ ರವರಿಗೆ ಅನುವು ಮಾಡಿಕೊಡಬೇಕು ಎನ್ನುವ ಒಪ್ಪ ಂದ ನಾಯಕರುಗಳು ನಿರ್ಧರಿಸಿದ್ದರು.
ಆದರೆ ನಾಗರಾಜ್ 2 ವರ್ಷದ ಅಧಿಕಾರ ಪೂರೈಸಿದರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೇ ಕೊನೆಯ ವರೆಗೂ ರವೀಂದ್ರ ರವರಿಗೆ ಕೆ.ಎಂ.ಎ್ ಅಧ್ಯಕ್ಷ ಸ್ಥಾನ ದೊರೆಯಲಿಲ್ಲ. ನಂತರ ಅವರ ಮೃತಪಟ್ಟರು.
ಇದೀಗ ಕಾಂಗ್ರೆಸ್ ನ ಶಾಸಕ ಭೀಮಾನಾಯಕ್ ಸಮ್ಮಿಶ್ರ ಸರ್ಕಾರದ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ಮೈತ್ರಿ ಯಲ್ಲಿ ಕೆ,ಎಂ.ಎ್ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯನವರ ಮನವೊಲಿಸಿ ಚುನಾ ವಣೆಗೆ ಸ್ಪರ್ಧಿಸಲು ಮುಂದಾಗಿದ್ದರು ಅಲ್ಲದೆ ನಿರ್ದೇಶಕರ ಮನಸಹ ಒಲಿಸಿ ದ್ದರು, ಆದರೆ ಅಂದಿನ ಲೋಕೋಪ ಯೋಗಿ ಸಚಿವ ಹೆಚ್.ಡಿ. ರೇವಣ್ಣ ಕೆ.ಎಂ. ಎ್ ಅಧ್ಯಕ್ಷ ಸ್ಥಾನದ ಚುನಾವಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆ ಕೆಲ ನಿರ್ದೇಶರನ್ನು ಹೈಜಾಕ್ ಮಾಡಿ ಕೆಲ ನಿರ್ದೇಶಕರಿಗೆ ಆಮಿಷೆ ಒಡ್ಡಿ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಭೀಮಾನಾಯಕ್ ಆರೋಪ ಮಾಡಿದ್ದರು.
ಭೀಮಾನಾಯ್‌ಕ್ ಇನ್ನು ಚಿಕ್ಕವನು, ಆಕಳು ಎಮ್ಮೆ ಸಾಕಿದರೇ ಒಂದು ಲೀಟರ್ ಹಾಲು ಹಾಕಿದ್ದಾರೆಯೇ ಎನ್ನುವ ಕುರಿತು ಇದರ ಬಗ್ಗೆ ಅವರಿಗೆ ಅರಿವು ಕಡಿಮೆ ಎನ್ನುವಂತಹ ಹೇಳಿಕೆ ರೇವಣ್ಣ ನೀಡಿದ್ದ ಲ್ಲದೆ, ಕೆ.ಎಂ.ಎ್ ಅಧ್ಯಕ್ಷ ಬಿಟ್ಟುಕೊ ಡಲಾರೆ ಎನ್ನುವ ಒಳ ಸುಳಿವು ನೀಡಿದ್ದರು. ಆದರೆ ನಿಗದಿತ ದಿನಾಂಕ ಚುನಾವಣೆ ನಡೆ ದಿದ್ದರೆ ಕೆ.ಎಂ.ಎ್ ಗೆ ರೇವಣ್ಣ ಅಧ್ಯಕ್ಷ ರಾಗಿ ಬಿಡುತ್ತಿದ್ದರೇನೋ ಆದರೆ ಕಾಂಗ್ರೆಸ್ ನ ಕೆಲ ಮುಖಂಡರುಗಳು ಒತ್ತಡ ತಂದು ಚುನಾವಣೆಯ ದಿನಾಂಕ ಮುಂದಕ್ಕೆ ಹಾಕ ಲಾಯಿತು ಇದರಿಂದ ಭೀಮಾನಾಯ್‌ಕ್ಗೆ ಕೊಂಚ ತೃಪ್ತಿ ತಂದರೂ ಮುಂದಿನ ದಿನಾಂಕದ ಚುನಾವಣೆ ನಡೆಯುವ ವೇಳೆಗೆ ಸರ್ಕಾರವೇ ಪತನವಾಗಿತ್ತು.
ಬಿಜೆಪಿ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಯಡ್ಡಿಯೂರಪ್ಪನವರನ್ನು ಭೀಮಾನಾಯ್ಕ ಕಂಡು ತಮಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದರು, ಆದರೆ ಬಿಜೆಪಿ ಸರ್ಕಾರದಲ್ಲಿ ಉಂಟಾಗು ತ್ತಿರುವ ಬೆಳವಣಿಗೆಗಳಲ್ಲಿ ಬಾಲಚಂದ್ರ ಜಾರಕಿಹೊಳಿ ರವರಿಗೆ ಕೆ.ಎಂ.ಎ್ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಅಂತೂ ಇಂತೂ ಕುಂತಿಮ ಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಬಳ್ಳಾರಿ ಜಿಲ್ಲೆ ಯ ಕಾಂಗ್ರೆಸ್ ಶಾಸಕರುಗಳಿಗೆ ನಿರ್ದೇ ಶಕರ ಬೆಂಬಲವಿದ್ದರೂ ಅಧ್ಯಕ್ಷರ ಕುರ್ಚಿ ಮರೀಚಿಕೆ ಯಾಗಿದೆ ಎಂದರೆ ತಪ್ಪಾಗ ಲಾರದು.'