9/18/2019

ದೇಶ | ವಿದೇಶ ವಿವರ ಪುಟ

ಸ್ವಚ್ಛತೆಗಾಗಿ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ಕೆ ಚಾಲನೆ ಶಾಲೆ ಬಳಿ, ಗುಟ್ಕಾ, ಸಿಗರೇಟು ಮಾರಾಟ ಮಾಡಿದರೆ ಕ್ರಮ - ಎಸ್‌ಪಿ ಎಚ್ಚರಿಕೆ

Font size -16+

'ಸುದ್ದಿಮೂಲ ವಾರ್ತೆ
ರಾಯಚೂರು,ಆ.25
ಶಾಲಾ - ಕಾಲೇಜು ಆವರಣದ ಪಕ್ಕದಲ್ಲಿ ಗುಟ್ಕಾ ಮತ್ತು ಸಿಗರೇಟು ಮಾರಾಟ ಮಾಡುವುದು ದಂಡನೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದ್ದು, ಆ ರೀತಿ ಶಾಲಾ - ಕಾಲೇಜು ಪಕ್ಕದಲ್ಲಿ ಗುಟ್ಕಾ ಮತ್ತು ಸಿಗರೇಟು ಮಾರಾಟ ಮಾಡುತ್ತಿದ್ದಾರೆ ಅದನ್ನು ಜಪ್ತಿ ಮಾಡುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಎಚ್ಚರಿಕೆ ನೀಡಿದರು.
ಇಂದು ರಾಯಚೂರು ನಗರದ ಸಿಯತಾಲಾಬ್‌ನಲ್ಲಿ ಸ್ವಚ್ಛತಾ ಜಾಗೃತಿ ಮತ್ತು ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಹಿಂದಿ ವರ್ಧಮಾನ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡಾವಣೆಯಲ್ಲಿ ಸಸಿ ನೆಡುವ ಮೂಲಕ ಹಸಿರು ಕಾಯ್ದುಕೊಳ್ಳಬೇಕು.
ಪ್ರತಿಯೊಬ್ಬ ನಿವಾಸಿ ಸಸಿ ನೆಡುವ ಜವಾಬ್ದಾರಿ ನಿರ್ವಹಿಸಬೇಕು.
ಈ ಹಿನ್ನೆಲೆಯಲ್ಲಿ ಮನೆಗೊಂದು ಸಸಿ ನೀಡಿ, ಪರಿಸರ ಸಂರಕ್ಷಣೆಗೆ ಈ ಆಂದೋಲನಾ ಹಮ್ಮಿಕೊಳ್ಳಲಾಗಿದೆಯೆಂದು ಹೇಳಿದರು. ಬಯಲು ಶೌಚಾಲಯ ಬಳಕೆ ಹಾನಿಕಾರಕ ಈ ಹಿನ್ನೆಲೆಯಲ್ಲಿ ಮನೆಗೊಂದು ಶೌಚಾಲಯ ಮೂಲಕ ನಮ್ಮ ಪರಿಸರವನ್ನು ನಾವೇ ಸಂರಕ್ಷಿಸಬೇಕು. ಇದು ಆರೋಗ್ಯ ಜೀವನಕ್ಕೆ ಪೂರಕ.
ಪ್ರತಿಯೊಬ್ಬ ದ್ವಿಚಕ್ರ ವಾಹನ ಚಾಲಕರು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಬೇಕೆಂದು ಹೇಳಿದರು.
ಹಿಂದಿ ವರ್ಧಮಾನ್ ಶಾಲೆಯ ವಿದ್ಯಾರ್ಥಿಗಳು ಮಾತನಾಡಿ, ತಮ್ಮ ಶಾಲೆಯ ಆವರಣದಲ್ಲಿ ರಾತ್ರಿ ಆಕ್ರಮ ಚಟುವಟಿಕೆಗಳು ನಡೆಯುತ್ತಿವೆ ಹಾಗೂ ನಾವು ವಾಸವಿರುವ ಸಿಯಾತಾಬನ್ ಮನೆಗಳಲ್ಲಿ ಶೌಚಾಲಯವಿಲ್ಲ. ನಿರ್ಮಿಸಿಕೊಡುವ ಕೆಲಸ ಮಾಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್, ಗ್ರೀನ್ ರಾಯಚೂರು ಕಾರ್ಯದರ್ಶಿ ರಾಜೇಂದ್ರ ಕುಮಾರ, ಸರಸ್ವತಿ ಕಿಲಕಿಲೆ, ಸಾಯಿ ಕಿರಣ್ ಆದೋನಿ ಕುಮಾರ, ಎಸ್.ಬಿ.ಪಾಟೀಲ್, ಹಿಂದಿ ವಧರ್ಮಾನ್ ಶಾಲೆಯ ಮುಖ್ಯೋಪಾಧ್ಯಾಯರಾದ ಕವಿತಾ, ಹಿಂದಿ ವರ್ಧಮಾನ್ ಶಾಲೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿ, ಭೀಮಣ್ಣ ಸೇರಿದಂತೆ ವಿವಿಧ ಸಂಘ-ಸಂಸ್ಥೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ನಗರಸಭೆಯ ಅಸಹಕಾರ : ನಿರ್ಲಕ್ಷ ್ಯಕ್ಕೆ ಟೀಕೆ
ಅಲ್ಲದೇ ನಗರಸಭೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಒದಗಿಸಬೇಕಾದ ಮಾಸ್‌ಕ್ ಮತ್ತು ಗ್ಲೌಸ್‌ಗಳು ನೀಡದೇ ನಿರ್ಲಕ್ಷ್ಯ ತೋರಿದ ಆರೋಪಗಳು ಇಂದು ತೋರಿಬಂದವು.
ತಾವು ಮಾಡಬೇಕಾದ ಕೆಲಸ ಪೊಲೀಸ್ ಅಧಿಕಾರಿ, ಸಾರ್ವಜನಿಕ ಸಂಘ-ಸಂಸ್ಥೆಗಳ ನೆರವಿನಿಂದ ಮಾಡಿದರು. ನಗರಸಭೆ ಅಧಿಕಾರಿಗಳು ಸೌಜ್ಯನಕ್ಕದರೂ ಈ ಕಾರ್ಯಕ್ರಮಕ್ಕೆ ಭಾಗವಹಿಸದೇ ತಮ್ಮ ಲಜ್ಜೆಗೇಡಿತನ ಪ್ರದರ್ಶಿಸಿದ್ದಾರೆ ಎಂದು ಸಿಯಾತಾಲಾಬ್ ನಿವಾಸಿಗಳು ಆರೋಪಿಸಿದರು.'