9/18/2019

ದೇಶ | ವಿದೇಶ ವಿವರ ಪುಟ

ವಿಪಕ್ಷ ನಾಯಕ ಸ್ಥಾನ ಬೇಡ - ಡಿ.ಕೆ.ಶಿ

Font size -16+

'ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.25
ತಮಗೆ ಯಾವ ವಿರೋಧ ಪಕ್ಷದ ಸ್ಥಾನವೂ ಬೇಡ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬೆಂಗಳೂರಿ ನಲ್ಲಿಂದು ಹೇಳಿದ್ದಾರೆ.
ನನಗೆ ಯಾವುದೇ ಅಧಿಕಾರವೂ ಬೇಡ. ಪಕ್ಷದ ವಿಚಾರವಾಗಿ ಹೈಕಮಾ ಂಡ್ ಯಾವುದೇ ನಿರ್ಧಾರ ಬೇಕಾ ದರೂ ತೆಗೆದುಕೊಳ್ಳಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷದ ಪ್ರಮು ಖ ಹುದ್ದೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ,ತಮಗೆ ಯಾವುದಕ್ಕೂ ಆತುರ ಇಲ್ಲ ಯಾರಿಗೆ ಅಧಿಕಾರ ಬೇಕು, ಯಾರಿಗೆ ಕಾರು ಬೇಕೋ, ಮನೆ ಬೇಕೋ ತೆಗೆದುಕೊ ಳ್ಳಲಿ. ನನಗೆ ಸ್ವಂತ ಮನೆ ಇದೆ ಸಧ್ಯಕ್ಕೆ ಅದು ಸಾಕು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಕೂಡ ಮಾತನಾಡಿದ, ನನಗೆ ಏನೂ ಗೊತ್ತಿಲ್ಲ. ನಾಳೆ ರಾಜ್ಯಕ್ಕೆ ನಮ್ಮ ಪಕ್ಷದ ನಾಯಕರು ಬರುತ್ತಿದ್ದಾರೆ. ನೋಡೊ ೀಣ’ ಎಂದು ಅವರು ಹೇಳಿದರು.
ಸಮ್ಮಿಶ್ರ ಸರ್ಕಾರ ಪತನಗೊ ಳ್ಳಲು ಸಿದ್ದರಾಮಯ್ಯ ಕಾರಣ ಅನ್ನೋ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಷಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೇ ನು ಗೊತ್ತಿಲ್ಲ. ಈ ವಿಷಯ ಕುರಿತು ದಿನಪತ್ರಿಕೆಯಲ್ಲಿ ಓದಿದ್ದೇನಷ್ಟೇ. ಕುಮಾರಸ್ವಾಮಿ ಆರೋಪದ ಬಗ್ಗೆ ತಮಗೆ ಗೊತ್ತಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಹೇಳಿ ಕೆಗಳನ್ನು ನೀಡಿದ್ದಾರೆ ಅಂತ ತಿಳಿದಿದೆ. ಆದರೆ, ಇವರ ಮಾತಿಗೆಲ್ಲ ನಾನು ಉತ್ತರ ನೀಡಲು ಆಗುವುದಿಲ್ಲ. ಮತ್ತು ತಮಗೆ ಸಮಯವೂ ಇಲ್ಲ. ದಯವಿಟ್ಟು ತಮ್ಮನ್ನು ಒಂಟಿಯಾ ಗಿರಲು ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ತಾವು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಅಧೀನದಲ್ಲಿ 14 ತಿಂಗಳು ಕೆಲಸ ಮಾಡಿದ್ದೇನೆ. ಏನೇ ಕೆಲಸ ಮಾಡಿದ್ದರೂ ತಮ್ಮ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಬದ್ದನಾಗಿದ್ದೇನೆ ಅಷ್ಟೆ. ನನಗೆ ಯಾವ ವಿರೋಧ ಪಕ್ಷದ ನಾಯಕನ ಸ್ಥಾನವೂ ಬೇಡ. ಈ ಸ್ಥಾನ ಯಾರಿಗೆ ಅವಸರವಿದೆಯೋ ಅವರು ಅದನ್ನು ಅಲಂಕರಿಸಲಿ. ಕಾರು ಬೇಕಾದವರು, ಮನೆ ಬೇಕಿದ್ದವರು ಆ ಸ್ಥಾನಕ್ಕೆ ಹೋಗಲಿ. ನನಗೆ ಶಾಶ್ವತ ಮನೆ ಇದೆ. ನನಗೆ ಯಾವ ಅಧಿಕಾರವೂ ಅವಶ್ಯಕತೆ ಇಲ್ಲ ಎಂದು ಅವರು ಸಿದ್ದರಾಮಯ್ಯ ಅವರಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಪಕ್ಷದ ನಾಯಕತ್ವ ಯಾವುದೇ ತೀರ್ಮಾನ ತೆಗೆದುಕೊಳ್ಳಲಿ. ಅದಕ್ಕೆ ನಾನು ಬದ್ಧ. ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಳೆ ನಗರಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾರೆ. ಎಲ್ಲರ ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಎಲ್ಲರ ಜೊತೆ ಮಾತಾಡಿ ತೀರ್ಮಾನ ತೆಗೆದುಕೊಳ್ತಾರೆ. ಪಕ್ಷಕ್ಕೆ ಒಳ್ಳೆಯದಾಗೋ ತೀರ್ಮಾನವನ್ನೇ ಅವರು ತೆಗೆದುಕೊಳ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದರು. ’ಜೇಟ್ಲಿ ಅವರು ಮಾದರಿ ರಾಜಕಾರಣಿ. ನಾನೂ ಎಷ್ಟೋ ಬಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕರ್ನಾಟಕ ರಾಜಕಾರಣದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅವರ ಜೀವನ ಇಷ್ಟು ಬೇಗ ಅಂತ್ಯ ಕಾಣಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.'