9/18/2019

ದೇಶ | ವಿದೇಶ ವಿವರ ಪುಟ

ಭಾರತದ ಬೆಡಗಿ ಸಿಂಧೂಗೆ ವಿಶ್ವ ಬ್ಯಾಡ್ಮಿಂಟನ್ ಕಿರೀಟ

Font size -16+

'ಯುಎನ್‌ಐ, ಬಾಸೆಲ್ (ಸ್ವಿಟ್ಜರ್‌ಲೆಂಡ್), ಆ.25
ಬಹು ವರ್ಷಗಳಿಂದ ಭಾರತೀಯ ಕ್ರೀಡಾ ಅಭಿಮಾನಿಗಳು ಕಾಯುತ್ತಿದ್ದ ಸಮಯಕ್ಕೆ ಭಾನುವಾರ ಸಾಕ್ಷಿಯಾಗಿದ್ದು, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಭಾರತೀಯ ಆಟಗಾರ್ತಿಯೊಬ್ಬರು ಚಿನ್ನದ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದರು. ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದ ಸಿಂಧು, ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಸುಲಭ ಜಯ ದಾಖಲಿಸಿದರು.
ಭಾನುವಾರ ನಡೆದಿದ್ದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು 21-7, 21-7ರಿಂದ ಜಪಾನ್ ನೋಜೊಮಿ ಒಕುಹರ ವಿರುದ್ಧ 38 ನಿಮಿಷಗಳಲ್ಲಿ ಸುಲಭ ಜಯ ದಾಖಲಿಸಿದರು. ಎರಡು ನೇರ ಗೇಮ್ ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಬಂಗಾರದ ಸಾಧನೆ ಮಾಡಿದರು. ಈ ವರೆಗೆ ಸಿಂಧು ಹಾಗೂ ಒಕುಹರ ಅವರು 16 ಬಾರಿ ಮುಖಾಮುಖಿಯಾಗಿದ್ದು ಸಿಂಧು 9ರಲ್ಲಿ ಜಯ ಸಾಧಿಸಿದ್ದಾರೆ.
2017ರಲ್ಲಿ ಗ್ಲಾಸ್ಗೋದಲ್ಲಿ ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಸಿಂಧು ಒಕುಹರ ವಿರುದ್ಧ ನಿರಾಸೆಯನ್ನು ಅನುಭವಿಸಿದ್ದರು. ಅಲ್ಲದೆ ಕಳೆದ ವರ್ಷವೂ ಸ್ಪೇನ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಆಘಾತ ಕಂಡಿದ್ದರು.
ಆದರೆ ಮೂರನೇ ಪ್ರಯತ್ನದಲ್ಲಿ ಮುತ್ತಿನಗರಿಯ ಬೆಡಗಿಗೆ ಬಂಗಾರದ ಕಿರೀಟ ಸಂದಿದೆ. ಸಿಂಧು, 2014, 2013ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದು ಬೀಗಿದ್ದರು.
ಕ್ವಾರ್ಟರ್ ೈನಲ್ಸ್ ಹಾಗೂ ಸೆಮಿೈನಲ್ಸ್ ನಲ್ಲಿ ಘಟಾನುಘಟಿ ಆಟಗಾರರನ್ನು ಮಣಿಸಿದ್ದ ಸಿಂಧು, ೈನಲ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು. ಈ ಹಿಂದೆ ಅನುಭವಿಸಿದ್ದ ಎರಡು ಸೋಲುಗಳ ಕಹಿಯನ್ನು ಮರೆಯುವಂತೆ ಆಡಿದ ಸಿಂಧು, ಕೋಟ್ಯಾಂತರ ಭಾರತೀಯರ ಮನ ಗೆದ್ದರು.
ಮೊದಲ ಗೇಮ್ ನಲ್ಲಿ ಸಿಂಧು, ಒಕುಹರ ಸವಾಲು ಮೆಟ್ಟಿ ನಿಂತರು. ಅಲ್ಲದೆ ಸತತ ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಅಲ್ಲದೆ ಮೊದಲ ಗೇಮ್ ನಲ್ಲಿ ಸುಲಭ ಜಯ ದಾಖಲಿಸಿದರು. ಎರಡನೇ ಗೇಮ್ ನಲ್ಲಿ ಪುಟಿದೇಳುವ ಕನಸು ಹೊಂದಿದ್ದ ಜಪಾನ್ ಆಟಗಾರ್ತಿಯ ಕನಸು ನುಚ್ಚು ನೂರಾಯಿತು. ಆರಂಭದಿಂದಲೂ ಅಂಕದ ಬೇಟೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಸಿಂಧು, ಧೃತಿ ಗೆಡದೆ ಮುಂದೆ ಸಾಗಿದರು. ಲವಾಗಿ ಎರಡನೇ ಗೇಮ್ ನಲ್ಲೂ ಸುಲಭ ಜಯ ದಾಖಲಿಸಿದರು. ಈ ಮೂಲಕ ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಇತಿಹಾಸ ಬರೆದರು.
ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ : ಸ್ವಿಟ್ಜರ್ಲೆಂಡ್ನ ಬಾಸೆಲ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎ್ವಲ್ಡರ್ ಬಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಚಿನ್ನ ಮುಡಿಗೇರಿಸಿಕೊಂಡಿರುವ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.'