9/18/2019

ದೇಶ | ವಿದೇಶ ವಿವರ ಪುಟ

ಧಾರ್ಮಿಕ ಮುಖಂಡರ ಭಾವಚಿತ್ರಗಳಿಗೆ ಅಪಮಾನ, ಓರ್ವ ವಶಕ್ಕೆ ಲಿಂಗಸೂಗೂರು: ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ, 11 ಜನ ಬಂಧನ

Font size -16+

'ಸುದ್ದಿಮೂಲ ವಾರ್ತೆೆ
ಲಿಂಗಸೂಗೂರು, ಆ.25
ಲಿಂಗಸುಗೂರಿಲ್ಲಿ ಧಾರ್ಮಿಕ ಮು ಖಂಡರ ಭಾವಚಿತ್ರಗಳ ಅಪಮಾನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿದ ಯುವಕನ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆ ಸಿದವ ರನ್ನು ಚದುರಿಸಿ ಹನ್ನೊಂದು ಜನರನ್ನು ಬಂಧಿಸಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗು ತ್ತಿದ್ದಂತೆ ಮರಾಠ, ಕುರುಬ ಹಾಗೂ ನಾಯಕ ಸಮಾಜದ ಯುವಕರು ರೊಚ್ಚಿಗೆದ್ದು ಗಡಿಯಾರ ವೃತ್ತ ಸೇರಿ ವಿವಿಧೆಡೆ ಪ್ರತಿಭಟನೆ ನಡೆಸಿದ್ದಲ್ಲದೆ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿ ಪೊಲೀಸ್ ವಾಹನಗಳಿಗೆ ಕಲ್ಲು ತೂರಾಟ ಮಾಡಿದಾಗ ಉಂಟಾದ ಉದ್ರಿಕ್ತ ವಾತಾವರಣ ತಡೆಯಲು ಪೊಲೀಸರು ಉದ್ರಿಕ್ತರನ್ನು ಚದುರಿಸಿ 11 ಜನರನ್ನು ಬಂಧಿಸಿದ್ದಾರೆ.
ಧಾರ್ಮಿಕ ಮುಖಂಡರ ಅಪ ಮಾನ ಮಾಡಿ ಸಾಮಾಜಿಕ ಜಾಲತಾ ಣದಲ್ಲಿ ಅಪಮಾನ ಮಾಡಿದ ಆರೋ ಪದ ಮೇಲೆ ಪಿಡ್ಡನಗೌಡ ನೀಡಿದ ದೂರಿನ ಮೇಲೆ ಸೈಯದ್ ಬಿನ್ ಅಹಮದ್ (20) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.
ಆದರೂ ಪ್ರತಿಭಟನಾಕಾರರು ಉದ್ರಿಕ್ತರಾದ ಕಾರಣ ಮುಂಜಾ ಗ್ರತಾ ಕ್ರಮವಾಗಿ ಆರೋಪಿಯ ಮನೆ ಮುಂದೆ ಪೊಲೀಸ್ ಬಂದೋಬಸ್‌ತ್ ನಿಯೋಜನೆ ಮಾಡಲಾಗಿದ್ದು
ಘಟ ನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿಬಿ ವೇದಮೂರ್ತಿ ಭೇಟಿ ನೀಡಿ ಪರಿಸ್ಥಿತಿ ತಹಬದಿಗೆ ತಂದು ಮುಂಜಾಗ್ರತಾ ಕ್ರಮವಾಗಿ 144ನೇ ಕಲಂನಡಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಸದ್ಯ ಲಿಂಗಸೂಗೂರಿನಲ್ಲಿ ಬಿಗು ವಿನ ವಾತಾವರಣವಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಲಿಂಗಸುಗೂರಿನಲ್ಲಿ ಮೊಕ್ಕಾಂ ಹೂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ಜರುಗ ದಂತೆ ಡಿಎಸ್‌ಪಿ ಹರೀಶ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್‌ತ್ ಬಿಗಿಗೊಳಿ ಸಲಾಗಿದ್ದು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ಮುಂದುವರೆ ಸಲಾಗಿದೆ.'