9/18/2019

ದೇಶ | ವಿದೇಶ ವಿವರ ಪುಟ

ಉಪ ಮುಖ್ಯಮಂತ್ರಿ ಹುದ್ದೆ ಖಚಿತ ಇಂದು ಸಚಿವರಿಗೆ ಖಾತೆ ಹಂಚಿಕೆ - ಬಿಎಸ್‌ವೈ

Font size -16+

'ಯುಎನ್‌ಐ,
ನವದೆಹಲಿ, ಆ.25
ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗುವುದು ಖಚಿತವಾಗಿದ್ದು, ಎಷ್ಟು ಮಂದಿ ಇರುತ್ತಾರೆ ಎಂಬುದು ಮಾತ್ರ ಸ್ಪಷ್ಟಗೊಂಡಿಲ್ಲ, ಈ ಎಲ್ಲಾ ಕುತೂಹಲಗಳಿಗೆ ನಾಳೆ ತೆರೆ ಬೀಳಲಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹ ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಾಳೆ ಪೂರ್ಣವಾ ಗಲಿದೆ. ನಾಳೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಎಷ್ಟು ಮಂದಿ ಉಪಮುಖ್ಯಮಂತ್ರಿ ಇರುತ್ತಾರೆ ಎಂಬುದು ತಿಳಿಯಲಿದೆ. ನಮ್ಮ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಇರುತ್ತಾರೆ. ಈ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದ್ದು ಅದನ್ನು ಪಾಲಿಸು ತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕೆಲವರಿಗೆ ಬೇಸರ ವಿದೆ. ಪಕ್ಷದ ವರಿಷ್ಠರ ಆದೇಶದಂತೆ ಸವದಿಗೆ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ ಬೆಳಗಾವಿಯ ಮತ್ತೊ ಬ್ಬರಿಗೆ ಅವಕಾಶ ನೀಡಲಾಗುವುದು. ಪ್ರಧಾನಿ ಹಾಗೂ ಪಕ್ಷದ ವರಿಷ್ಠರು ನೀಡಿರುವ ಸಲಹೆ ಸೂಚನೆ ಪಾಲಿ ಸುತ್ತೇನೆ. ಬಿಜೆಪಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜೆಡಿಎಸ್ ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇದೆ. ಸಚಿವ ಸ್ಥಾನ ದೊರೆಯದವರಿಗೆ ನಿಗಮ ಮಂಡಳಿ ಗಳಲ್ಲಿ ಅವಕಾಶ ನೀಡಲಾಗುವುದು.
ಸಂಪುಟ ರಚನೆಯ ವೇಳೆ ಸುದ್ದಿ ಯಲ್ಲೇ ಇರದಿದ್ದ ಉಪಮುಖ್ಯ ಮಂತ್ರಿ ಹುದ್ದೆ ಏಕಾಏಕಿ ಸೃಷ್ಟಿಯಾ ಗಿರುವುದು ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಎಷ್ಟು ಮಂದಿ ಉಪ ಮುಖ್ಯಮ ಂತ್ರಿಗಳಾಗುತ್ತಾರೆ, ಯಾರಾಗುತ್ತಾರೆ ಎಂಬುದು ಕುತೂಹಲಕಾರಿಯಾ ಗಿದೆ. ಈ ಹಿಂದಿನ ಬಿಜೆಪಿ ಸರ್ಕಾ ರದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಅವರು ಉಪ ಮುಖ್ಯಮಂತ್ರಿ ಯಾಗಿದ್ದರು. ಈ ಬಾರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಏಕೆ ಎಂಬುದೇ ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ.
ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿ ಯಲ್ಲಿ ಬಂಗಾರದ ಪದಕ ಗೆದ್ದ ಪಿ.ವಿ.ಸಿಂಧೂ ಅವರಿಗೆ ರಾಜ್ಯ ಸರ್ಕಾರ ಐದು ಲಕ್ಷ ರೂ ಬಹುಮಾನ ನೀಡಲಿದೆ ಎಂದು ಬಿ.ಎಸ್. ಯಡಿ ಯೂರಪ್ಪ ಪ್ರಕಟಿಸಿದರು.'