2/17/2019

ದೇಶ | ವಿದೇಶ ವಿವರ ಪುಟ

ನವಲಕಲ್: ಭಕ್ತರ ಶಕ್ತಿ ಶ್ರೀಮಠಕ್ಕೆ ಆಸ್ತಿ- ಅಭಿನವಶ್ರೀಗಳು

Font size -16+

'ಸುದ್ದಿಮೂಲ ವಾರ್ತೆ
ಸಿರವಾರ, ಜು.12
ಬೃಹನ್ಮಠ ಭಕ್ತರ ಮನದಲ್ಲಿ ಅಚ್ಚಳಿಯದಂತೆ ಉಳಿಯಲು ಈ ಮಠದ ಮೇಲೆ ಭಕ್ತರು ಇಟ್ಟ ಭಕ್ತಿ ಈ ಮಠಕ್ಕೆ ಭಕ್ತರೇ ಶಕ್ತಿಯೆ ಕಾರಣ ಎಂದು ಅಭಿನವ ಶ್ರೀಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಸಮೀಪದ ನವಲಕಲ್ ಬೃಹನ್ಮಠದಲ್ಲಿ ಗುರುವಾರ ನಡೆದ ಗುರುವಂದನಾ ಕಾರ್ಯ ಕ್ರಮ ದಲ್ಲಿ ದಿವ್ಯಸಾನಿಧ್ಯವಹಿಸಿ ಮಾತ ನಾಡಿ 48ದಿನ ಮೌನ ತಪೋನು ಷ್ಠಾನ ಭಕ್ತರ, ವಿವಿಧ ಮಠದ ಪೂಜ್ಯ ಸಹಕಾರದಿಂದ ಯಶಸ್ವಿಯಾಗಲು ಸಾಧ್ಯವಾಯಿತು.
ಈ ಮಠದ ಭಕ್ತರು ಹೃದಯ ಶ್ರೀಮಂತಿಕೆ ದೊಡ್ಡದು, ನಿಮ್ಮ ಪ್ರೀತಿ, ಸಹಕಾರ, ವಿಶ್ವಾಸಕ್ಕೆ ಧಕ್ಕೆ ಬಾರದಹಾಗೆ ಈ ಮಠದ ಪೀಠಾಧಿಪತಿಯಾಗಿ ಧರ್ಮದಕಾರ್ಯ ಮಾಡಲಾಗುವದು ಎಂದರು.
ಕಾರ್ಯಕ್ರಮ ಕುರಿತು ಯರಡೋಣಿ, ರಾಯಚೂರು ಸೋಮವಾರಪೇಟೆ ದೇವಪೂರ, ನೀಲಗಲ್ ಶ್ರೀಗಳು ಮಾತನಾಡಿದರು. ಕಿಲ್ಲೆ ಬೃಹನ್ಮಠ, ಚಿಕಲಪರ್ವಿ, ಸಿಂಧನೂರು ರಂಭಾಪುರಿ ಶಾಖಾಮಠ, ಮಾನ್ವಿ ಕಲ್ಮಠ, ಬಲ್ಲಟಿಗಿ ಶ್ರೀಗಳು, ಸಿರವಾರ, ನವಲಕಲ್, ಚಾಗಭಾವಿ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಕುಂಭ, ಕಳಸ, ಡೋಳ್ಳು, ಭಾಜಿ, ಭಜನೆ, ಪಟಾಕಿ ಸಿಡಿಸಿ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತ ನಡೆಯಿತು.'