2/17/2019

ದೇಶ | ವಿದೇಶ ವಿವರ ಪುಟ

ಜು.30,31ರಂದು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಹಾಸ್ಯ ದಿಗ್ಗಜ ಬಿ.ಪ್ರಾಣೇಶ ಆಯ್ಕೆ

Font size -16+

'ಸುದ್ದಿಮೂಲ ವಾರ್ತೆ
ಗಂಗಾವತಿ, ಜು.12
ಗಂಗಾವತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.30 ಮತ್ತು 31 ರಂದು ಎರಡು ದಿನ ಆಚರಿಸಲು ನಿರ್ಣಯಿಸಿದ ತಾಲೂಕು ಕಸಾಪದ ಪದಾಧಿಕಾರಿಗಳು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಾಸ್ಯ ದಿಗ್ಗಜ ಗಂಗಾವತಿ ನಗರದ ಬಿ.ಪ್ರಾಣೇ ಶರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ತಾಲೂಕು ಕಸಾಪ ಪ್ರಕಟಿಸಿತು.
ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ.ಗೊಂಡಬಾಳ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕಾರಿ ಸಭೆಯಲ್ಲಿ ಗಂಗಾವತಿ ನಗರದಲ್ಲಿ ಜುಲೈ 30 ಮತ್ತು 31 ರಂದು 2 ದಿನಗಳ ಕಾಲ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಒಮ್ಮತದಿಂದ ತೀರ್ಮಾನಿಸಲಾಯಿತು.
ಬಳಿಕ ನಡೆದ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರ ಆಯ್ಕೆಗಾಗಿ ಸಾಹಿತಿಗಳಾದ ಶರಣಪ್ಪ ಮೆಟ್ರಿ, ವಿರುಪಾಕ್ಷಪ್ಪ ಪೂಲ ಭಾವಿ,ವಾಣಿಶ್ರೀ ಪಾಟೀಲ್, ಶಿವರುದ್ರಪ್ಪ ಕವಿಗಳು, ಬಿ. ಪ್ರಾಣೇಶ ಇವರುಗಳ ಹೆಸರುಗಳು ಪ್ರಸ್ತಾಪವಾ ದವು.ಹಾಜರಿದ್ದ ಸದಸ್ಯರ ಪೈಕಿ ಬಹುಪಾಲು ಸದಸ್ಯರು ಬಿ. ಪ್ರಾಣೇಶರವರ ಹೆಸರನ್ನು ಸಮ್ಮೇಳನ ಅಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾಪಿಸಿದರು.
ಅಂತಿಮವಾಗಿ ಟಿ. ಆಂಜನೇ ಯರವರು ಬಿ. ಪ್ರಾಣೇಶರವರ ಹೆಸರನ್ನು ಸೂಚಿಸಿದರು. ವಿರುಪಾಕ್ಷಪ್ಪ ಶಿರವಾರ ಅನುಮೋದಿಸಿದರು. ಕೊನೆಯಲ್ಲಿ ತಾಲೂಕ ಅಧ್ಯಕ್ಷ ಎಸ್.ಬಿ ಗೊಂಡಬಾಳ್ ಗಂಗಾವತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾಗಿ ಬಿ. ಪ್ರಾಣೇಶರವರ ಆಯ್ಕೆಯನ್ನು ಘೋಷಿಸಿದರು.
ಸಭೆಯಲ್ಲಿ ಜುಲೈ 08 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮತ್ತು ಸಾಹಿತಿಗಳ ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಸಲಹೆ ಸೂಚನೆಗಳನ್ನು ಸಮ್ಮೇಳನದಲ್ಲಿ ಅಳವಡಿಸಿಕೊಳ್ಳಲು ಸಭೆ ತೀರ್ಮಾನಿಸಿತು. ಸಮಯಾವಕಾಶ ಕಡಿಮೆ ಇರುವುದರಿಂದ ಅತೀ ಶೀಘ್ರದಲ್ಲಿ ಸ್ವಾಗತ ಸಮಿತಿ ಕಛೇರಿ ಉದ್ಘಾಟನೆ, ಲಾಂಛನ ಬಿಡುಗಡೆ, ಸಮ್ಮೇಳನ ಅಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡುವುದು ಕುರಿತಂತೆ ಸ್ವಾಗತ ಸಮಿತಿ ಅಧ್ಯಕ್ಷರಾದ, ಶಾಸಕರಾದ ಪರಣ್ಣ ಮುನವಳ್ಳಿರವರೊಂದಿಗೆ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಭೆಗೆ ತಿಳಿಸಲಾಯಿತು.
ಕೋಶಾಧ್ಯಕ್ಷ ಮಹೇಶ ಸಿಂಗನಾಳ, ಜಿಲ್ಲಾ ಗೌರವ ಕಾರ್ಯದರ್ಶಿ ಬಸವರೆಡ್ಡಿ ಆಡೂರು, ಗೌರವ ಕಾರ್ಯದರ್ಶಿಗಳಾದ ಶ್ರೀನಿವಾಸ ಅಂಗಡಿ,ವೀರಮಹೇಶ್ವರಿ, ಸದಸ್ಯರಾದ ರಮೇಶ ಕುಲಕರ್ಣಿ, ಟಿ. ಆಂಜನೇಯ, ವಿರುಪಾಕ್ಷಪ್ಪ ಶಿರವಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.'