2/17/2019

ದೇಶ | ವಿದೇಶ ವಿವರ ಪುಟ

ರೈತರ ಎರಡು ಬೆಳೆಗಳಿಗೆ ನೀರು ಕೊಡಲು ತುಂಗಭದ್ರಾ ರೈತ ಸಂಘ ಒತ್ತಾಯ

Font size -16+

'ಸುದ್ದಿಮೂಲ ವಾರ್ತೆ
ಬಳ್ಳಾರಿ, ಜು.12
ತುಂಗಭದ್ರಾ ಜಲಾಶಯದ ಅಚ್ಚು ಕಟ್ಟು ಪ್ರದೇಶದ ರೈತರಿಗೆ ಈ ವರ್ಷ ಎರಡು ಬೆಳೆಗಳಿಗೆ ನೀರು ಕೊಡುವಂತಹ ವ್ಯವಸ್ಥೆ ಮಾಡಬೇಕು ಎಂದು ತುಂಗಭದ್ರಾ ರೈತ ಸಂಘ ದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಒತ್ತಾಯಿಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಮಾತನಾಡಿ ಮಲೆ ನಾಡಿನ ಉತ್ತಮ ಮಳೆಯಾಗು ತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ದಲ್ಲಿ 55 ಟಿಯಂಸಿ ಯಷ್ಟು ನೀರು ಸಂಗ್ರಹವಾಗಿದೆ, ಅಲ್ಲದೆ ಒಳ ಹರಿವು ಸಹ 50 ಸಾವಿರ ಕ್ಯೂಸೆಕ್ ಇದ್ದು ಇನ್ನು ಹೆಚ್ಚಿನ ನೀರು ಹರಿದು ಬರುವ ನಿರೀಕ್ಷೆಯ ಜೊತೆ ಹವಾಮಾನ ಇಲಾಖೆಯಂತೆ ಆಗಸ್‌ಟ್ ತಿಂಗಳಿನಲ್ಲಿ ಸಹ ಉತ್ತಮ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ಜುಲೈ 16 ರಂದು ಮುನಿರಾ ಬಾದ್ ನಲ್ಲಿ ನಡೆಯುವ ತುಂಗ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಂಗಾರು ಹಂಗಾಮಿಗೆ ತಕ್ಷಣ ನೀರು ಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಅಲ್ಲದೆ ಅಂದಿನ ಸಭೆಯಲ್ಲಿ ಈಗಾಗಲೇ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಗುರುತಿಸಿ ಎರಡನೇ ಬೆಳೆಗೆ ನೀರು ಒದಗಿಸುವ ಕುರಿತಂತೆ ಚರ್ಚೆ ನಡೆಸಿ ತೀರ್ಮಾನ ತೆಗೆದು ಕೊಳ್ಳಬೇಕು, ಇದೀಗ ಜಲಾಶ ಯದಲ್ಲಿ ನೀರಿ ಹೆಚ್ಚಿನ ಸಂಗ್ರಹದಿಂದ ಹೆಚ್ಚಿಗೆ ಅನಗತ್ಯವಾಗಿ ನೀರು ಹರಿಸುವಲ್ಲಿ ಬೆಳೆಗೆ ಅನುಗುಣವಾಗಿ ನೀರು ಬಿಡಲು ಮುಂದಾಗಬೇಕು ಎಂದರು.
ಜಲಾಶಯದ ಕಾಲುವೆಗಳಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯ ವನ್ನು ಸ್ಥಗಿತಗೊಳಿಸಿ ರೈತರ ಬೆಳೆಗೆ ಅನುಕೂಲವಾಗವಂತಹ ಕ್ರಮ ಕೈಗೊಳ್ಳಲು ಮುಂದಾಗುವಂತೆ ಆಗ್ರಹಿಸಿದರು. ಕಳೆದ ವರ್ಷ ನೀರಿನ ಕೊರತೆಯಿಂದ ಸರಿಯಾಗಿ ಒಂದು ಬೆಳೆ ಸಹ ರೈತರ ಕೈಗೆ ಬರದೇ ರೈತರು ಸಂಕಷ್ಟವನ್ನು ಎದುರಿಸಬೇಕಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿ ದ್ದರಿಂದ ಅಧಿಕಾರಿಗಳು ಕೈಗಾರಿಕೆ ಮಾಲೀಕರ ಅಮಿಷಗಳಿಗೆ ಒಳಗಾ ಗದೆ ಅನ್ನದಾತನ ಎರಡನೇ ಬೆಳೆಗೆ ನೀರು ಹರಿಸಲುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾ ಗುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಾಲಿಹಾಳ್ ಶ್ರೀಧರ ಗೌಡ, ಗಂಗಾ ವತಿ ವೀರೇಶ್,ದರೂರು ರಾಜ ಸಾಬ್, ಗೋವಿಂದಪ್ಪ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.'