2/17/2019

ದೇಶ | ವಿದೇಶ ವಿವರ ಪುಟ

ಮನೆಗೆ ಬೆಂಕಿ ಹಚ್ಚಿ ಮೂವರನ್ನು ಕೊಂದ ಆರೋಪಿ ಪೊಲೀಸರ ಅತಿಥಿ ಪೊಲೀಸರ ಮೇಲೆ ಹಲ್ಲೆ : ತಪ್ಪಿಸಿಕೊಳ್ಳಲೆತ್ನಿಸಿದ ಆರೋಪಿಗೆ ಗುಂಡೇಟು

Font size -16+

'ಸುದ್ದಿಮೂಲ ವಾರ್ತೆ ಕಲಬುರಗಿ, ಜು.12
ಇತ್ತೀಚಿಗೆ ಮನೆಗೆ ಬೆಂಕಿ ಹಚ್ಚಿ ಮಲಗಿರುವ ಸಂಬಂಧಿಕರನ್ನೇ ಸುಟ್ಟು ಹಾಕಿ ಅವರ ಸಾವಿಗೆ ಕಾರಣವಾದ ಕೊಲೆ ಗಡುಕನನ್ನು ಪೊಲೀಸರು ಗುಂಡು ಹಾರಿಸುವ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತ್ರೀಬಲ್ ಮರ್ಡರ್ ಪ್ರಕರಣದ ಕೊಲೆ ಆರೋಪಿ ಮೊಹ್ಮದ್ ಮುಸ್ತ್ಾನ ಕಾಲಿಗೆ ಎರಡು ಗುಂಡುಗಳು ಬಿದ್ದಿದ್ದು, ಬಂಧಿಸಲಾಗಿದೆ.
ಬುಧವಾರ ನಗರದ ಹೊರವಲಯದಲ್ಲಿರುವ ರಾಯಲ್ ದಾಬಾ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರತ್ನಿಸಿದಾಗ ಬ್ರಹ್ಮಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಾಳಿಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ತಿಂಗಳು 4 ರಂದು ನಗರದ ಇಕ್ಬಾಲ್ ಕಾಲೋನಿಯಲ್ಲಿರುವ ಸೈಯದ್ ಅಕ್ಬರ್ ಮನೆಗೆ ಬೆಂಕಿ ಹಚ್ಚಿ ಮಲಗಿದ್ದವರನ್ನು ಸುಟ್ಟು ಹಾಕಿ ಪರಾರಿಯಾಗಿದ್ದ. ಘಟನೆಯಲ್ಲಿ ಅಕ್ಬರ್ ಕುಟುಂಬದ ನಾಲ್ವರಿಗೆ ಬೆಂಕಿ ತಗುಲಿ ಗಂಭೀರ ಗಾಯವಾಗಿತ್ತು. ಅದರಲ್ಲಿ ಸೈಯದ್ ಅಕ್ಬರ್ ಅವರ ಪತ್ನಿ ಶಹಾನ್ ಬೇಗಂ, ಪುತ್ರಿ ಸಾನಿಯಾ ಬೇಗಂ, ಚಿಕಿತ್ಸೆ ಲಕಾರಿಯಾಗದೇ ಮೃತಪಟ್ಟಿದ್ದು, ಪುತ್ರ ಸೈಯದ್ ಯಾಸಿನ್ ಸೋಲ್ಲಾಪೂರದ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮುಸ್ತಾಭಾನನ್ನು ಅಜ್ಮೀರದಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿ ಮುಸ್ತಾಾ ಬಳಿಯಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಮುಸ್ತಾಾನನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿ ಆರೋಪಿ ಮುಸ್ತಾಾ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ.
ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಪೇದೆಗಳಾದ ಸದರ್ ಪಟೇಲ್ ಸಲೀಂ ಪಟೇಲ್ ಮತ್ತು ಶಿವಲಿಂಗ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ಎ.ಎಸ್ಪಿ ಲೋಕೇಶ, ಹೆಚ್ಚುವರಿ ಎಸ್ಪಿ ಜಯಪ್ರಕಾಶ ಅವರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯಲ್ಲಿ ಗಾಯ ಗೊಂಡ ಪೇದೆಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.'