2/17/2019

ದೇಶ | ವಿದೇಶ ವಿವರ ಪುಟ

ಮಾನ್ವಿ: 446 ಜನರಿಗೆ ಉದ್ಯೋಗ-ಸಚಿವ ಶ್ರೀನಿವಾಸ

Font size -16+

'ಸುದ್ದಿಮೂಲ ವಾರ್ತೆ ಬೆಂಗಳೂರು, ಜು.12
ಮಾನ್ವಿ ತಾಲೂಕಿನಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ 446 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್‌ಆರ್ ಶ್ರೀನಿವಾಸ ತಿಳಿಸಿದ್ದಾರೆ.
ಮಾನ್ವಿ ಶಾಸಕ ವೆಂಕಟಪ್ಪ ನಾಯಕ ವಿಧಾನಸಭೆಯಲ್ಲಿ ಗಮನ ಸೆಳೆಯುವ ಪ್ರಶ್ನೆೆಗೆ ಉತ್ತರ ನೀಡಿದ ಅವರು, ಮಾನ್ವಿ ತಾಲೂಕಿನಲ್ಲಿ 2007ನೇ ಸಾಲಿನಲ್ಲಿ 59 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಿ ಅದರಲ್ಲಿ 133 ನಿವೇಶನಗಳು ಹಂಚಿಕೆ ಮಾಡಲಾಗಿದ್ದು, ಪೈಕಿ 54 ಘಟಕಗಳು ಕೈಗಾರಿಕೆ ಚಿವಟಿಕೆಗಳಲ್ಲಿ ತೊಡಗಿದ್ದು ಇದರಿಂದ 446 ಜನರಿಗೆ ಉದ್ಯೋಗ ದೊರೆತು ಇನ್ನೂ 79 ಘಟಕಗಳು ವಿವಿಧ ಸ್ಥಾಪನೆ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
2017-18ನೇ ಸಾಲಿನಲ್ಲಿ ಮಾನ್ವಿ ತಾಲೂಕಿನಲ್ಲಿ 85 ಹೊಸ ಕೈಗಾರಿಕೆ ಘಟಕಗಳು ಸ್ಥಾಪನೆಯಾಗಿದ್ದು ಅವುಗಳಿಂದ 2ಸಾವಿರದ 715 ಲಕ್ಷ ಬಂಢವಾಳ ಹೂಡಿಕೆಯಾಗಿದ್ದು,ಇದರಿಂದ 660 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
2017-18ನೇ ಸಾಲಿನಲ್ಲಿ ಮಾನ್ವಿ ತಾಲೂಕಿನಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 14 ನಿರುದ್ಯೋಗಿಗಳಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಿದ್ದು ಅವರು, ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ.ಅದೇ ರೀತಿ ಮುಖ್ಯಮಂತ್ರಿ ಸ್ವಯಂ ಉದ್ಯೋಗ ಯೋಜನೆಯಡಿಯೂ ಸಹ ಇಬ್ಬರು ನಿರುದ್ಯೋಗಿಗಳು ಬ್ಯಾಂಕ್ ಸಾಲ ಹಾಗೂ ಕೈಗಾರಿಕಾ ಇಲಾಖೆ ಸಹಾಯ ಧನ ಪಡೆದು ಸ್ವಯಂ ಉದ್ಯೋಗ ಕಲ್ಪಿಸಿಕೊಂಡಿದ್ದಾರೆ ಎಂದು ಸಚಿವ ಶ್ರೀನಿವಾಸ ತಿಳಿಸಿದ್ದಾರೆ.
ರಾಯಚೂರು ಜಿಲೆಯಲ್ಲಿ 2017-18ನೇ ಸಾಲಿನವರೆಗೆ 13ಸಾವಿರದ 963 ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ನೊಂದಣೆಯಾಗಿದ್ದು ಇದರಿಂದ 111ಕೋಟಿ ಬಂಢವಾಳ ಹೂಡಿಕೆಯಾಗಿ 79 ಸಾವಿರ ಜನರು ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ ಮತ್ತು ಅನೇಕ ವಿದ್ಯಾವಂತರೂ ಕೆಲಸವಿಲ್ಲದೇ ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಿಗೆ ಉದ್ಯೋಗ ಅರಿಸಿ ಗುಳೆ ಹೋಗುತಿದ್ದಾರೆ ಅದಕ್ಕಾಗಿ ರಾಯಚೂರು ಸೇರಿದಂತೆ ಮಾನ್ವಿಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜಾ ವೆಂಕಟಪ್ಪ ನಾಯಕ ನಾಯಕ ಅವರ ಮನ ಸೆಳೆಯುವ ಪ್ರಶ್ನೆಗೆ ಮೇಲಿನಂತೆ ಉತ್ತರ ನೀಡಿದ ಅವರು, ರಾಯಚೂರು ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಹಲವು ಪ್ರೋತ್ಸಾಹ ಕಾರ್ಯಕ್ರಮಗಳು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಮುಂದ್ರಾಂಕ ಮತ್ತು ಶುಲ್ಕ ವಿನಾಯತಿ, ಭಂಡವಾಳ ಹೂಡಿಕೆಗೆ ಸಹಾಯಧನ, ಭೂ ಪರಿವರ್ತನ ಶುಲ್ಕ ಮರು ಪಾವತಿ, ಪ್ರವೇಶ ತೆರಿಗೆ ವಿನಾಯತಿ ,ರ್ತು ಆಧಾರಿತ ಘಟಕಗಳಿಗೆ ರಿಯಾಯತಿ ,ಕಷಿ ಉತ್ಪನ್ನ ಮಾರುಕಟ್ಟೆ ತೆರಿಗೆಯಿಂದ ವಿನಾಯ್ತಿ,ತ್ಯಾಜ್ಯ ಸಂಸ್ಕರಣ ಯಂತ್ರ ಸ್ಥಾಪನೆಗೆ ಸಹಾಯಧನ ಮತ್ತು ವಿದ್ಯುತ್ ತೆರಿಗೆ ವಿನಾಯ್ತಿ ನೀಡಲಾಗುತ್ತಿದೆ ಎಂದು ತಿಳಿಸಿಇದ್ದಾರೆ.
10 ಲಕ್ಷ ರೂ.ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಘಟಕ ಸ್ಥಾಪಿಸುವವರಿಗೆ ಮುಖ್ಯಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ 2.5 ಲಕ್ಷದಿಂದ 3 ವರೆ ಲಕ್ಷ ಸಹಾಯಧನ ಮತ್ತು ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ 25 ಲಕ್ಷ ಬ್ಯಾಂಕ್ ಪಡೆದು ಕೈಗಾರಿಕಾ ಸ್ಥಾಪಿಸುವರಿಗೆ 3ಲಕ್ಷ 75 ಸಾವಿರದಿಂದ 8 ಲಕ್ಷ 75 ಸಾವಿರದ ವರೆಗೆ ಮತ್ತು ಕೆಎ್ಎ್ಸಿ ವತಿಯಿಂದ ಮಹಿಳಾ ಉದ್ಯಮದಾರರಿಗೆ ಶೇ.4 ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದೆಂದು ತಿಳಿಸಿದ್ದಾರೆ.
ಪರಿಶಿಷ್ಟರು ಸ್ಥಾಪಿಸುವ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಸಹಾಯಧನ ಮತ್ತು ಹೆಚ್ಚಿನ ಸಾಲದ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.'