2/17/2019

ದೇಶ | ವಿದೇಶ ವಿವರ ಪುಟ

ಬಡವರಿಗೆ ಜನೌಷಧಿ ಕೇಂದ್ರ ಸಹಾಯಕ : ಸಂಸದ ಸಂಗಣ್ಣ ಕರಡಿ

Font size -16+

'ಸುದ್ದಿಮೂಲ ವಾರ್ತೆ, ಸಿಂಧನೂರು, ಜು.12
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೌಷಧಿ ಕೇಂದ್ರಗಳು ದೇಶದ ಬಡ ಹಾಗೂ ಮಧ್ಯಮ ವರ್ಗದವರಿಗೆ ವರದಾನವಾಗಿವೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.
ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಕೇಂದ್ರದ ಸಂಚಾಲಕರೊಂದಿಗೆ ಮಳಿಗೆಯ ವ್ಯವಹಾರ ವಹಿವಾಟು ಕುರಿತು ಚರ್ಚಿ ಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೈಗೆಟುಕುವ ದರದಲ್ಲಿ ಪರಿಣಾಮಕಾರಿ ಮಾತ್ರೆ ಮತ್ತು ಔಷಧಿಗಳನ್ನು ಜನರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಈ ಮಳಿಗೆಗಳನ್ನು ಆರಂಭಿಸಲಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಜ್ವರ, ತಲೆನೋವು ಮತ್ತಿತರ ಮಾರಕ ರೋಗಗಳಿಗೂ ಇಲ್ಲಿ ಔಷಧಿಗಳು ದೊರೆಯುತ್ತವೆ.
ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಕೇಂದ್ರ ಸರ್ಕಾರ ಆರಂಭಿಸಿರುವ ಈ ಮಳಿಗೆಗಳಲ್ಲಿ ಹೆಚ್ಚಿನ ದರದಲ್ಲಿ ಯಾರಾದರೂ ಔಷಧಿ ಹಾಗೂ ಮಾತ್ರೆಗಳನ್ನು ಮಾರಾಟ ಮಾಡಿದ್ದು ಕಂಡು ಬಂದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಡಿವೆಪ್ಪ ಗೊರೇಬಾಳ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಎಂ.ಅಮರೇಗೌಡ, ಮುಖಂಡರಾದ ಆರ್.ಬಸನಗೌಡ ತುರ್ವಿಹಾಳ, ಸಾಯಿರಾಮಕೃಷ್ಣ, ಜನೌಷಧಿ ಮಳಿಗೆಯ ಸಂಚಾಲಕರಾದ ಶಿವರುದ್ರಪ್ಪ, ಶರಣು ಗೊರೇಬಾಳ, ದೇವಣ್ಣ, ಚಂದ್ರಪ್ಪ, ಮಹಾಂತೇಶ, ಬಸವರಾಜ ಕುರುಕುಂದಿ ಇದ್ದರು.'