5/27/2019

ದೇಶ | ವಿದೇಶ ವಿವರ ಪುಟ

ಕ್ಯಾದಿಗ್ಗೇರಾ ಜಿ.ಪಂ. ಉಪ ಚುನಾವಣೆಗೆ ಇಂದು ಮತದಾನ

Font size -16+

'ಸುದ್ದಿಮೂಲ ವಾರ್ತೆ, ದೇವದುರ್ಗ, ಜೂ.13
ತಾಲೂಕಿನ ಕ್ಯಾದಿಗ್ಗೇರಾ ಜಿಲ್ಲಾ ಪಂಚಾಯತಿಗೆ ಗುರುವಾರ ಉಪ ಚುನಾವಣೆ ನಡೆಯಲಿದ್ದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಈ ಹಿಂದೆ ಭಾರತೀಯ ಜನತಾ ಪಕ್ಷದಿಂದ ಜಿ.ಪಂ.ಗೆ ಆಯ್ಕೆಯಾದ ವೆಂಕಟೇಶ ಪೂಜಾರಿಯವರು ಜಿಲ್ಲಾ ಪಂಚಾಯತ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆ.ಡಿ.ಎಸ್. ಪಕ್ಷ ಸೇರಿ ದೇವದುರ್ಗ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಜಿಲ್ಲಾ ಪಂಚಾಯತ ಕ್ಷೇತ್ರದ ಜನರು ಉಪ ಚುನಾವಣೆಯನ್ನು ಎದುರಿಸಬೇಕಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್. ಪಕ್ಷಗಳ ಮೈತ್ರಿಈ ಚುನಾವಣೆಯಲ್ಲಿ ಸಹ ಮುಂದುವರೆದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂದೀಪ ನಾಯಕ ಇವರಿಗೆ ಜೆ.ಡಿ.ಎಸ್. ಬೆಂಬಲ ನೀಡಿದೆ. ಕರೆಮ್ಮ ಜಿ.ನಾಯಕ ಇವರು ಪುನಃ ಜೆಡಿಎಸ್ ಸೇರಿರುವದರಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲಿ ಬಲ ಕಾಣುತ್ತಿದೆ.
ಇತ್ತ ಬಿಜೆಪಿ ಸ್ಥಳೀಯ ಶಾಸಕ ಕೆ. ಶಿವನಗೌಡ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಕಿಷ್ಟಪ್ಪ ನಾಯಕರನ್ನು ಗೆಲ್ಲಿಸಲೇಬೇಕೆಂದು ಹಠ ತೊಟ್ಟಿದ್ದು ಕಣ ರಂಗೇರಿದೆ. ಆದರೆ, ಮತದಾರ ಮಾತ್ರ ತನ್ನ ಗುಟ್ಟು ಬಿಡದೆ ಯಾರಿಗೆ ವಿಜಯಮಾಲೆ ಹಾಕುವನೋ ಕಾದು ನೋಡಬೇಕು.
ಸಕಲ ಸಿದ್ಧತೆ : ಕ್ಯಾದಿಗೇರಾ ಜಿ.ಪಂ. ಉಪ ಚುನಾವಣೆಗೆ ತಾಲೂಕ ಆಡಳಿತ ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿದ್ದು, 36 ಮತಗಟ್ಟೆ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಕಲ್ಪಿಸಿದೆ.
18 ಸೂಕ್ಷ್ಮ 2ಅತಿಸೂಕ್ಷ್ಮ ಕೇಂ ದ್ರಗಳಿದ್ದು, ಕರ್ತವ್ಯಕ್ಕೆ ನಿಯೋಜನೆ ಗೊಂಡ 200 ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿದೆ.
110 ಪೋಲಿಸ್ ಸಿಬ್ಬಂದಿಗಳು : ಕ್ಯಾದಿಗೇರಾ ಜಿ.ಪಂ. ಉಪ ಚುನಾ ವಣೆ ವೇಳೆ ಮತದಾನಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಪೋಲಿಸ್ ಇಲಾಖೆಯಿಂದ 110 ಪೋಲಿಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋ ಜನೆ ಮಾಡಲಾಗಿದೆ. ಒಂದು ಡಿಆರ್ ವಾಹನ ನಿಯೋಜಿಸಿ ಶಾಂತಿಯುತ ಮತದಾನಕ್ಕೆ ಬಿಗಿ ಪೋಲಿಸ್ ಬಂ ದೋಬಸ್‌ತ್ ಮಾಡಲಾಗಿದೆ ಎಂದು ಸಿಪಿಐ ಟಿ.ಸಂಜೀವಕುಮಾರ ತಿಳಿಸಿ ದರು.
6 ಬಸ್ ನಿಯೋಜನೆ : ಶಾಂತಿ ಯುತ ಮತದಾನ ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ಗಳನ್ನು ಮತಗಟ್ಟೆ ಕೇಂದ್ರಗಳಿಗೆ ಕರೆದೊ ಯ್ಯಲು ಸಾರಿಗೆ ಇಲಾಖೆಯಿಂದ 6 ಬಸ್‌ಗಳು ಬಿಡಲಾಗಿದೆ.
ಒಟ್ಟು 31ಸಾವಿರ 803 ಮತ ದಾರರು ಇದ್ದು, ಜಿ.ಪಂ. ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಚುನಾವ ಣಾಧಿಕಾರಿ ಎನ್.ಚಿದಾನಂದ ತಿಳಿಸಿ ದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ ಹಿರೋಳ್ಳಿ, ತರಬೇತಿ ಎಸಿ ಕೃಷ್ಣಕುಮಾರ ಸೇರಿ ಇತರರು ಇದ್ದರು.'