5/27/2019

ದೇಶ | ವಿದೇಶ ವಿವರ ಪುಟ

ವಿಮ್‌ಸ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಭೇಟಿ ಭೂ ಲೋಕದ ನರಕ ಬಳ್ಳಾರಿಯ ವಿಮ್‌ಸ್

Font size -16+

'ಸುದ್ದಿಮೂಲ ವಾರ್ತೆ, ಬಳ್ಳಾರಿ, ಜೂ.13
ಚಿಕಿತ್ಸೆ ಪಡೆಯಲೆಂದು ಆಗಮಿಸುವ ರೋಗಿಗಳಿಗೆ ನೇರವಾಗಿ ನರಕ ತೋರಿಸುವ ಮತ್ತು ಕಳುಹಿಸುವ ಜಾಗ ವಿಮ್‌ಸ್...!ಹೀಗೆಂದು ಅತೃಪ್ತಿ ಮತ್ತು ಅಸಮಾಧಾನ ಹೊರಹಾಕಿದ ವರು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ.
ಈ ವಿಮ್‌ಸ್ನಲ್ಲಿರುವ ಬೆಡ್‌ಶೀಟ್ ಗಳು, ಟ್ರೇಗಳು, ಶೌಚಾಲಯ ಮತ್ತು ರೋಗಿಗಳಿಗೆ ಒದಗಿಸಲಾಗು ತ್ತಿರುವ ಸೌಕರ್ಯಗಳನ್ನು ನೋಡಿ ದಾಗ ನಾವು 1947ಕ್ಕಿಂತ ಮುಂಚೆ ಇದ್ದೇವಾ ಎಂಬ ಸಂಶಯ ಮೂಡು ತ್ತದೆ. ಬೆಡ್‌ಗಳು ತೊಟ್ಟಿಲಾಗಿ ಮಾರ್ಪಟ್ಟಿವೆ; ಜಿರಲೆ, ತಿಗಣೆಗಳು ಅದರಲ್ಲಿ ಸೇರಿಕೊಂಡಿವೆ.
ಗ್ರೂಪ್ ಡಿ, ನರ್ಸ್‌ಗಳ ನಡವ ಳಿಕೆ ಸರಿಯಿಲ್ಲ, ನಿರ್ವಹಣೆ ಸರಿ ಯಿಲ್ಲ ಮತ್ತು ಸ್ವಚ್ಛತೆ ಎಂಬುದು ಕೇಳಲೇಬೇಡಿ ಎನ್ನುವಂತಾಗಿದೆ. ರೋಗಿಗಳನ್ನು ಕೆಳಗಡೆ ಮಲಗಿರು ವುದು ಕಣ್ಣಾರೆ ಕಂಡಿರುವೆ. ಈ ಕುರಿತು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಮಂತ್ರಿಗ ಳೊಂದಿಗೆ ಚರ್ಚಿಸುವೆ ಮತ್ತು ಸಂಬಂಧಿಸಿದ ಆಯುಕ್ತರೊಂದಿಗೆ ಮಾತನಾಡಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಕೋರಲಾಗುವುದು ಮತ್ತು ವಿಮ್‌ಸ್ ಈ ದುಸ್ಥಿತಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಒತ್ತಾಯಿಸಲಿದೆ ಎಂದು ಅವರು ಹೇಳಿದರು.
ವಿಮ್‌ಸ್ನಲ್ಲಿನ ವಿವಿಧ ವಾರ್ಡ್ ಗಳನ್ನು ಬುಧವಾರ ಪರಿಶೀಲನೆ ನಡೆಸಿ ಮತ್ತು ರೋಗಿಗಳೊಂದಿಗೆ ಸಂವಾದ ನಡೆಸಿ
ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮಹಿಳಾ ವಾರ್ಡ್ ಮತ್ತು ಲೇಬರ್ ವಾರ್ಡ್, ಮಕ್ಕಳ ವಾರ್ಡ್ ಸ್ಥಿತಿ ಅತ್ಯಂತ ಶೋಚ ನೀಯವಾಗಿದೆ. ರೋಗಿಗೆ ಚಿಕಿತ್ಸೆ ಕೊಡಿಸಲು ಜತೆಗೆ ಬರುವವರು ಸಹ ಮತ್ತೊಂದು ರೋಗ ಹಚ್ಚಿಕೊಂಡು ಅದೇ ಬೆಡ್‌ಗೆ ಮಲಗುವಂತ ಸ್ಥಿತಿ ಇಲ್ಲಿದೆ ಎಂದು ಹೇಳಿದರು.
ಸಂಬಂಧಿಸಿದ ಆಯುಕ್ತರೊಂ ದಿಗೆ ಮಾತನಾಡಿ ತಕ್ಷಣ ವಿಮ್‌ಸ್ಗೆ ಭೇಟಿ ನೀಡಿ, ಇಲ್ಲಿನ ಸ್ಥಿತಿ ಸುಧಾರಿ ಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಹೇಳಿದ ನಾಗಲಕ್ಷ್ಮೀಬಾಯಿ, ಈ ವಿಮ್‌ಸ್ನಲ್ಲಿ ಎಲ್ಲೆಂದರಲ್ಲಿ ಲಂಚಾವತಾರ ಕಂಡುಬರುತ್ತಿದ್ದು,ಇದಕ್ಕೆ ಮೊದಲು ಕಡಿವಾಣ ಹಾಕುವ ಕೆಲಸ ಮಾಡುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ವಿಮ್‌ಸ್ ವೈದ್ಯಕೀಯ ಅಧೀಕ್ಷಕ ಮರಿರಾಜ್ ಅವರಿಗೆ ಸೂಚಿಸಿದರು.
ವಿಮ್‌ಸ್ ಆಸ್ಪತ್ರೆಯು ವೈದ್ಯ ಕೀಯ ಕಾಲೇಜಿನೊಂದಿಗೆ ಅಟ್ಯಾಚ್ ಇದ್ದು, ಇಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪಡೆಯಲು ಆಗಮಿಸುವ ವಿದ್ಯಾರ್ಥಿ ಗಳಿಗೆ ಇದು ಮಾದರಿ ಆಸ್ಪತ್ರೆಯಾ ಗಬೇಕು; ಆದರೇ ನ್ಯೂನ್ಯತೆ ಆಸ್ಪತ್ರೆಯಾ ಗಿದೆ ಎಂದರು. ಈ ಆಸ್ಪತ್ರೆ ವ್ಯವಸ್ಥೆ ಸುಧಾರಿಸುವವರೆಗೆ ಇದನ್ನು ಮುಚ್ಚಿಹಾಕಿ ಎಂದರು. ವಿಮ್‌ಸ್ ವೈದ್ಯಕೀಯ ಅಧೀಕ್ಷಕ ಮರಿರಾಜ್ ಅವರು ವಿಮ್‌ಸ್ನಲ್ಲಿ ಬೆಡ್‌ಶೀಟ್ ಮತ್ತು ಕಾಟ್‌ಸ್ ಸಮಸ್ಯೆ ಹಾಗೂ ಇನ್ನೂ ಕೆಲ ಸೌಕರ್ಯಗಳ ಕುರಿತು ನಮ್ಮ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದರು.'