5/27/2019

ದೇಶ | ವಿದೇಶ ವಿವರ ಪುಟ

ವಿಧಾನ ಪರಿಷತ್ ಚುನಾವಣೆ 3 ಬಿಜೆಪಿ, 2 ಜೆಡಿಎಸ್, ಒಂದು ಸ್ಥಾನ ಕಾಂಗ್ರೆಸ್‌ಗೆ

Font size -16+

'ಸುದ್ದಿಮೂಲ ವಾರ್ತೆ, ಬೆಂಗಳೂರು, ಜೂ.13
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ನ ಚುನಾವಣೆಯ ಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಮೂರು, ಜೆಡಿಎಸ್ ಎರ ಡು, ಕಾಂಗ್ರೆಸ್ ಒಂದು ಸ್ಥಾನಗಳಿಸಿದೆ.
ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯ ಅವರ ಪುತ್ರ ಎಸ್. ಎಲ್.ಧರ್ಮೇ ಗೌಡ ಈಗಾಗಲೇ ಮೇಲ್ಮನೆ ಸದಸ್ಯರಾಗಿದ್ದು, ಇದೀಗ ಅವರ ಸಹೋದರ ಎಸ್.ಎಲ್.ಭೋಜೇಗೌಡ ಮೇಲ್ಮನೆಗೆ ಚುನಾಯಿತರಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಇದೀಗ ಸಹೋದರರ ಪರ್ವ ಆರಂಭವಾಗಲಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ವಿಭಾಗದ ಪದವೀದರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎ.ದೇವೇಗೌಡ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ವಿರುದ್ದ ಜಯಗಳಿಸಿದ್ದಾರೆ.
ನೈರುತ್ಯ ಪದವೀದರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ದಿನೇಶ್ ವಿರುದ್ದ ಜಯಗಳಿಸಿದ್ದರೆ, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರ ಶೇಖರ ಪಾಟೀಲ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ವಿರುದ್ದ ಜಯ ಸಾಧಿಸಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ, ಜೆಡಿಎಸ್‌ನ ರಮೇಶ್ ಬಾಬು ವಿರುದ್ದ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಮರಿತಿಬ್ಬೇ ಗೌಡ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಬೋಜೆ ಗೌಡ ಜಯ ಸಾಧಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಧರ್ಮೇಗೌಡ ಜೆಡಿಎಸ್ ಅಭ್ಯರ್ಥಿಯಾಗಿ ಅವಿ ರೋಧವಾಗಿ ಆಯ್ಕೆಯಾಗಿದ್ದರು. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಭೋಜೇಗೌಡ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ.'