5/27/2019

ದೇಶ | ವಿದೇಶ ವಿವರ ಪುಟ

ಮೂರು ದಶಕದ ಕ್ಷೇತ್ರ ಕಳೆದುಕೊಂಡ ಬಿಜೆಪಿ, ಕುಗ್ಗಿದ ಸಂಖ್ಯೆ ವಿಧಾನ ಪರಿಷತ್ : ಹೈ.ಕ. ದಲ್ಲಿ ಬೀದರ್‌ಗೆ ಶುಕ್ರದೆಸೆ

Font size -16+

'ಬಿ.ವೆಂಕಟಸಿಂಗ್
ರಾಯಚೂರು, ಜೂ.13
ಕಳೆದ ಮೂರು ದಶಕಗಳಿಂದ ಈಶಾನ್ಯ ಪದವೀಧರ ಕ್ಷೇತ್ರ ತನ್ನ ವಶದಲ್ಲಿರಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷ ಈ ಬಾರಿ ಸೋಲುವ ಮೂಲಕ ಹೈ.ಕ ಭಾಗದಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯರ ಬಲ ಕುಸಿಯಲು ಕಾರಣವಾಗಿದೆ.
ದಿವಂಗತ ಎಂ.ಆರ್.ತಂಗಾ ಅವರಿಂದ ಹಿಡಿದು ಅಮರನಾಥ ಪಾಟೀಲವರೆಗೆ ಈಶಾನ್ಯ ಪದವೀಧರ ಕ್ಷೇತ್ರ 30 ವರ್ಷಗಳ ಕಾಲ ಬಿಜೆಪಿ ಗೆಲ್ಲುತ್ತಲೇ ಬಂದಿತ್ತು. ಆದರೆ, ಹಾಲಿ ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಅಮರನಾಥ ಪಾಟೀಲ ಅವರನ್ನು ಬದಲಿಸಿ ಬಳ್ಳಾರಿಯ ಶ್ರೀನಿವಾಸಗೆ ಬಿಜೆಪಿ ಟಿಕೆಟ್ ನೀಡಿದ್ದೇ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.
ಅತ್ಯಧಿಕ ಮತಗಳು ಹೊಂದಿದ ಗುಲಬರ್ಗಾದವರೇ ಬಿಜೆಪಿ ಅಭ್ಯರ್ಥಿ ಆಗುತ್ತಿರುವುದರಿಂದ ಸಹಜವಾಗಿ ಆ ಪಕ್ಷದ ಅಭ್ಯರ್ಥಿಗಳು ಜಯ ಗಳಿಸುತ್ತಿದ್ದರು. ಈ ಬಾರಿ ಗುಲಬರ್ಗಾದ ಅಮರನಾಥ ಪಾಟೀಲ ಅವರನ್ನು ಕಡೆಗಣಿಸಿ ಶ್ರೀರಾಮುಲು ಒತ್ತಾಯದ ಮೇರೆಗೆ ಶ್ರೀನಿವಾಸಗೆ ಟಿಕೆಟ್ ನೀಡಿದ್ದೇ ಬಿಜೆಪಿಗೆ ಯಡವಟ್ಟಾಗಿದೆ.
ಗುಲಬರ್ಗಾದವರಿಗೆ ಟಿಕೆಟ್ ಕೈತಪ್ಪಿಸಿದ ಕಾರಣ ಗುಲಬರ್ಗಾದಲ್ಲಿ ಅತ್ಯಧಿಕ ಮತದಾರರು ಮತ್ತು ಸಮುದಾಯ ಹೊಂದಿದ ಲಿಂಗಾ ಯತ ಮತ್ತು ಬಣಜಿಗ ಜನಾಂಗ ದವರ ಆಕ್ರೋಶ ಕಾಂಗ್ರೆಸ್‌ನ ಬಣಜಿಗ ಜನಾಂಗದ ಡಾ.ಚಂದ್ರಶೇಖರ ಪಾಟೀಲ್‌ಗೆ ವರದಾನವಾಯಿತು.
ಹೀಗಾಗಿ ಕಳೆದ 3 ದಶಕಗಳ ಕಾಲ ಬಿಜೆಪಿ ಹಿಡಿತದಲ್ಲಿದ್ದ ಈಶಾನ್ಯ ಪದವೀಧರ ಕ್ಷೇತ್ರ ಸಹ ಕೈತಪ್ಪಿ ಹೋಗಿದೆ. ಈ ಹಿಂದೆ ಸಹ ಶಿಕ್ಷಕರ ಕ್ಷೇತ್ರವೂ ಸಹ ಬಹಳ ವರ್ಷ ಬಿಜೆಪಿ ಕೈಯಲಿದ್ದು ಕಳೆದ ಬಾರಿ ರಾಯ ಚೂರಿನ ಶರಣಪ್ಪ ಮಟ್ಟೂರು ಅವರು ಗೆಲ್ಲುವ ಮೂಲಕ ಆ ಕ್ಷೇತ್ರವನ್ನು ಸಹ ಬಿಜೆಪಿಯಿಂದ ಕೈ ವಶ ಮಾಡಿ ಕೊಂಡಿತ್ತು.
ಈ ಎಲ್ಲಾ ಬೆಳವಣಿಗೆಯ ಮಧ್ಯೆ ವಿಧಾನ ಪರಿಷತ್‌ನಲ್ಲಿ ಹೈ.ಕ ಭಾಗದ ಬಿಜೆಪಿ ಸದಸ್ಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ.
ಬೀದರ್‌ಗೆ ಶುಕ್ರದೆಸೆ : ರಾಜಕೀಯವಾಗಿ ಕಲಬುರ್ಗಿಗಿಂತ ಪ್ರಾಬಲ್ಯವಾದ ಜಿಲ್ಲೆ ಅಲ್ಲವಾದರೂ ಈಗ ಬೀದರ ಜಿಲ್ಲೆಗೆ ಶುಕ್ರದೆಸೆ ಬಂದಿದೆ.
ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ನಿಂದ ರಾಜಶೇಖರ ಪಾಟೀಲ, ಜೆಡಿಎಸ್‌ನಿಂದ ಬಂಡೆಪ್ಪ ಖಾಸೆಂಪುರ ಸಚಿವರಾಗುವ ಮೂಲಕ ಜಿಲ್ಲೆಗೆ ಎರಡು ಸಚಿವ ಸ್ಥಾನ ದೊರೆತಿದ್ದು ಗಮನಾರ್ಹ ಸಂಗತಿಯಾಗಿದೆ.
ಈ ರಾಜಕೀಯ ಬೆಳವಣಿಗೆ ಮಧ್ಯೆ ವಿಧಾನ ಪರಿಷತ್‌ನಲ್ಲಿ ಬೀದರ್‌ನ ಸಂಖ್ಯಾ ಬಲ ಸಹ ಹೈ.ಕ ಭಾಗದ ಎಲ್ಲಾ ಜಿಲ್ಲೆಗಳಿಗಿಂತ ಹೆಚ್ಚಾಗಿದೆ.
ಈಗಾಗಲೇ ಸ್ಥಳೀಯ ಸಂಸ್ಥೆಗ ಳಿಂದ ವಿಜಯಸಿಂಗ್ ವಿಧಾನಸಭೆ ಯಿಂದ ವಿಧಾನ ಪರಿಷತ್‌ಗೆ ರಘು ನಾಥರಾವ್ ಮಲ್ಕಾಪುರೆ ಬಿಜೆಪಿ ಯಿಂದ,
ಅರವಿಂದಕುಮಾರ ಅರಳಿ ಕಾಂಗ್ರೆಸ್‌ನಿಂದ ನಾಮಕರಣಗೊಂಡಿದ್ದರೆ, ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಪಾಟೀಲ ಆಯ್ಕೆಯಾಗುವ ಮೂಲಕ ವಿಧಾನ ಪರಿಷತ್‌ನಲ್ಲಿ ಬೀದರ ಜಿಲ್ಲೆಯವರ ಸಂಖ್ಯೆ 4ಕ್ಕೆ ಏರಿದೆ.
ಉಳಿದಂತೆ ರಾಯಚೂರು ಜಿಲ್ಲೆಯಿಂದ ವಿಧಾನ ಪರಿಷತ್‌ನಲ್ಲಿ ಎನ್.ಎಸ್.ಬೋಸರಾಜು, ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು ಸದಸ್ಯರಾಗಿದ್ದು, ಹೈ.ಕದಲ್ಲಿ ರಾಯಚೂರು ವಿಧಾನ ಪರಿಷತ್‌ನಲ್ಲಿ 2ನೇ ಸದಸ್ಯ ಬಲ ಹೊಂದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂ ವೀರಭದ್ರಪ್ಪ ಇಬ್ಬರೂ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಸಹ ಬಿ.ಜಿ.ಪಾಟೀಲ ಮತ್ತು ಕೆ.ಬಿ.ಶಾಣಪ್ಪ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದು ಹೈ.ಕನಲ್ಲಿ ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಯ ಸದಸ್ಯರ ಸಂಖ್ಯೆ ತಲಾ 2 ಇರುವುದರೊಂದಿಗೆ ಸದಸ್ಯ ಬಲದಲ್ಲಿ 3ನೇ ಸ್ಥಾನದಲ್ಲಿದೆ.
ಆದರೆ, ಹೈ.ಕ. ಭಾಗದ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲದೆ ವಂಚಿತವಾಗಿವೆ. ಈ ಹಿಂದೆ ಹಾಲಪ್ಪಾಚಾರ್ ಕೊಪ್ಪಳ ಜಿಲ್ಲೆಯಿಂದ, ಚೆನ್ನಾರೆಡ್ಡಿ ತುನ್ನೂರು ಯಾಗದಿರಿ ಜಿಲ್ಲೆ ಪ್ರತಿನಿಧಿಸುತ್ತಿದ್ದರು. ಅವರ ತರುವಾಯ ಈ ಎರಡು ಜಿಲ್ಲೆಗಳಿಂದ ವಿಧಾನ ಪರಿಷತ್‌ನಲ್ಲಿ ಪ್ರಾತಿನಿಧ್ಯ ಇಲ್ಲದಂತೆ ಆಗಿದೆ.
ಪಕ್ಷವಾರು ಲೆಕ್ಕಾಚಾರ ಮಾಡಿದಾಗ ಕಾಂಗ್ರೆಸ್ 8, ಬಿಜೆಪಿ 3 ಸದಸ್ಯರು ಹೊಂದಿದ್ದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಬಲವೇ ಹೆಚ್ಚಾಗಿದೆ.
ಜಾತಿವಾರು ಲೆಕ್ಕಾಚಾರ ಮಾಡಿದಾಗ ವಿಧಾನ ಪರಿಷತ್‌ನಲ್ಲಿ ಹೈ.ಕ ಭಾಗದಿಂದ ಲಿಂಗಾಯತರದ್ದೇ ಪ್ರಾಬಲ್ಯ ಇದೆ. ಕಾಂಗ್ರೆಸ್‌ನಿಂದ ಅಲ್ಲಂ ವೀರಭದ್ರಪ್ಪ, ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮಟ್ಟೂರು, ಡಾ.ಚಂದ್ರಶೇಖರ ಪಾಟೀಲ ಮತ್ತು ಬಿಜೆಪಿಯಿಂದ ಬಿ.ಜಿ.ಪಾಟೀಲ ಸದಸ್ಯರಿದ್ದಾರೆ.
ಹಿಂದುಳಿದ ವರ್ಗದಿಂದ ಎನ್.ಎಸ್.ಬೋಸರಾಜು, ಕೆ.ಸಿ.ಕೊಂಡಯ್ಯ, ವಿಜಯಸಿಂಗ್ ಕಾಂಗ್ರೆಸ್‌ನಿಂದ ಸದಸ್ಯರಿದ್ದರೆ, ಬಿಜೆಪಿಯಿಂದ ರಘುನಾಥ ಮಲ್ಕಾಪುರೆ ಪ್ರಾತಿನಿಧ್ಯ ಪಡೆದಿದ್ದಾರೆ.
ಪರಿಶಿಷ್ಟ ಜಾತಿವತಿಯಿಂದ ಬಿಜೆಪಿಯ ಕೆ.ಬಿ.ಶಾಣಪ್ಪಮತ್ತು ಅರವಿಂದ ಕುಮಾರ ಅರಳಿ ವಿಧಾನ ಪರಿಷತ್‌ನಲ್ಲಿ ಸದಸ್ಯರಾಗಿದ್ದು, ಅಲ್ಪಸಂಖ್ಯಾತರಿಗೆ ಅವಕಾಶ ಇಲ್ಲ. ಈ ಹಿಂದೆ ಇಕ್ಬಾಲ್ ಅಹ್ಮದ್ ಸರಡಗಿ ವಿಧಾನ ಪರಿಷತ್ ಸದಸ್ಯರಾಗಿದ್ದು ಅವರ ನಿವೃತ್ತಿಯ ನಂತರ ಆ ಜನಾಂಗಕ್ಕೆ ಪ್ರಾತಿನಿಧ್ಯ ಇಲ್ಲದಂತೆ ಆಗಿದೆ.'