5/27/2019

ದೇಶ | ವಿದೇಶ ವಿವರ ಪುಟ

ಎರಡು ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ ಶಾಶ್ವತ ಪರಿಹಾರ : ಸಚಿವ ನಾಡಗೌಡ

Font size -16+

'ನೂತನ ಸಚಿವರಿಗೆ ಅಭಿನಂದನಾ ಸಮಾರಂಭ

ಸುದ್ದಿಮೂಲ ವಾರ್ತೆ ಸಿಂಧನೂರು, ಜೂ.13
ನದಿ ಜೋಡಣೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ವರದಿ ಸಿದ್ದಪಡಿಸಿವೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ನೀರಾವರಿ ಯೋಜನೆಗಳಿಗೆ ಎರಡು ವರ್ಷಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪಶು ಸಂಗೋಪನಾ ಹಾಗೂ ಮೀನುಗಾರಿಕೆ ನೂತನ ಸಚಿವ ವೆಂಕಟರಾವ ನಾಡಗೌಡ ಹೇಳಿದರು.
ಅವರು ನಗರದ ಸತ್ಯಗಾರ್ಡ ನ್‌ನಲ್ಲಿ ಜೆಡಿಎಸ್ ತಾಲೂಕಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ದರು. ತುಂಗಭದ್ರಾ ನದಿಗೆ ಯಾವ ನದಿಗಳ ಜೋಡಣೆ ಮಾಡಬೇಕು ಎನ್ನುವ ಬಗ್ಗೆ ನುರಿತ ತಜ್ಞರ ಸಭೆ ಕರೆದು ಸಮಗ್ರವಾಗಿ ಚರ್ಚಿಸಲಾ ಗುವುದು. ಎಡದಂಡೆ ವ್ಯಾಪ್ತಿಯ ರೈತರಿಗೆ ಎರಡು ಬೆಳೆಗೆ ನೀರು ಕೊಡಲು ಎಲ್ಲಾ ರೀತಿಯ ಪ್ರಯತ್ನ ಗಳನ್ನು ಮಾಡುವುದಾಗಿ ತಿಳಿಸಿದರು.
ಸಾಲ ಮನ್ನಾ : ನಮ್ಮ ಪ್ರಣಾಳಿಕೆ ಯಲ್ಲಿ ಘೋಷಣೆ ಮಾಡಿದಂತೆ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಗಳು ಹಿಂದೇಟು ಹಾಕುತ್ತಿಲ್ಲ. ಈಗಾಗಲೇ ಎಲ್ಲಾ ಜಿಲ್ಲೆಗಳ ಪ್ರಗತಿಪರ ರೈತರ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾ ಗಿದೆ.
ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಪ್ರಸ್ತಾವನೆಯಿದೆ. ಮೊದಲ ಹಂತದಲ್ಲಿ ಕೃಷಿ ಸಾಲ ಅಂದರೆ ಸುಮಾರು 54 ಸಾವಿರ ಕೋಟಿ ಮನ್ನಾ ಮಾಡಲಾಗುವುದು. ಎರಡನೇ ಹಂತದಲ್ಲಿ ಟ್ರ್ಯಾಕ್ಟರ್, ಪಂಪ್‌ಸೆಟ್, ಜಮೀನು ಅಭಿವೃದ್ದಿ ಸಾಲವೂ ಸಹ ಮನ್ನಾ ಮಾಡಲಾಗುವುದು. ಆದರೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ರಾಜ್ಯದಲ್ಲಿ ವಿದ್ಯುತ್ ಅಭಾವವಿರುವದರಿಂದ ಪ್ರಸಕ್ತ ವರ್ಷ 10 ತಾಸು ವಿದ್ಯುತ್ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಮುಂದಿನ ವರ್ಷದಿಂದ 24 ಗಂಟೆಗಳ ಕಾಲವೂ ರೈತರಿಗೆ ವಿದ್ಯುತ್ ನೀಡಲಾಗುವುದು ಎಂದರು.
ಸಚಿವನಾದ ಮೇಲೆ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಕ್ಷೇತ್ರದ ಜನತೆಯ ಕೆಲಸವನ್ನು ಇಷ್ಟು ದಿನ ಕ್ಷೇತ್ರದಾಧ್ಯಂತ ಸಂಚಾರ ನಡೆಸಿ ಕೆಲಸ ಮಾಡುತ್ತಿದ್ದೆ ಆದರೀಗ ರಾಜ್ಯದ ಜವಾಬ್ದಾರಿ ನನ್ನ ಮೇಲಿದ್ದು, ಕ್ಷೇತ್ರದ ಜನತೆಯ ಕೆಲಸವನ್ನು ವಿಧಾನಸಭಾದ ಮೂರನೇ ಮಹಡಿಯಲ್ಲೇ ಕುಳಿತು ಕೆಲಸ ಮಾಡುವೆ. ಕ್ಷೇತ್ರದ ಜನತೆ ಏನೇ ಸಮಸ್ಯೆ ಇದ್ದರೂ ತಮ್ಮನ್ನು ೆನ್‌ನಲ್ಲಿ ಸದಾ ಚರ್ಚೆ ಮಾಡುತ್ತಾ ಬಗೆಹರಿಸಿಕೊಳ್ಳಬಹುದು. ಜೊತೆಗೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಲು ಇಬ್ಬರು ಅಧಿಕಾರಿಗಳನ್ನು ಸಹ ನೇಮಕ ಮಾಡಿಕೊಳ್ಳುತ್ತೇನೆ. ಏನೇ ಸಮಸ್ಯೆಗಳಿದ್ದರೂ ನೇರವಾಗಿ ಅವರನ್ನು ಸಂಪರ್ಕಿಸಬಹುದಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಒಳಬಳ್ಳಾರಿಯ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಸಿಂಧನೂರಿನ ಶಾಸಕರಾಗಿದ್ದ ನಾಡಗೌಡರು ಈಗ ಸಚಿವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹುದ್ದೆಗಳನ್ನು ಅಲಂಕರಿಸಿ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಕಂಕಣಬದ್ಧರಾಗಿ ಸೇವೆ ಸಲ್ಲಿಸಲಿ ಎಂದು ಆಶೀರ್ವದಿಸಿದರು.
ವೇದಿಕೆಯಲ್ಲಿ ರೌಡಕುಂದಾದ ಮರಿಸಿದ್ಧಲಿಂಗ ಮಹಾಸ್ವಾಮಿಗಳು, 3ಮೈಲ್‌ಕ್ಯಾಂಪಿನ ಸೋಮನಾಥ ಶ್ರೀಗಳು, ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿಗಳು, ಬಂಗಾರಿಕ್ಯಾಂಪಿನ ಸಿದ್ದಾರಾಮೇಶ್ವರ ಶರಣರು, ಸಾನಿಧ್ಯವಹಿಸಿದ್ದರು. ಮಾನ್ವಿಯ ಶಾಸಕ ರಾಜಾವೆಂಕಟಪ್ಪ ನಾಯಕ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ, ಜಿ.ಪಂ. ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು, ಜೆಡಿಎಸ್ ತಾಲೂಕಾಧ್ಯಕ್ಷ ಎಂ.ಲಿಂಗಪ್ಪ, ಜಿ.ಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಜೆಡಿಎಸ್ ಮುಖ್ಯ ಸಂಚಾಲಕ ಬಿ.ಹರ್ಷ, ವಕ್ತಾರ ಬಸವರಾಜ ನಾಡಗೌಡ, ಕಾರ್ಯಾಧ್ಯಕ್ಷ ಮಲ್ಲೇಶಗೌಡ, ನಾಗೇಶ ಹಂಚಿನಾಳಕ್ಯಾಂಪ್, ಗುರ್ರಂ ಗುನ್ನೇಶ್ವರರಾವ್, ಡಿ.ಸತ್ಯನಾರಾಯಣ, ಜಿ.ಸತ್ಯನಾರಾಯಣ, ಎಸ್.ಕೃಷ್ಣಮೂರ್ತಿ, ಧರ್ಮನಗೌಡ ಮಲ್ಕಾಪುರ, ಅಶೋಕಗೌಡ ಗದ್ರಟಗಿ, ರಾಮನಗೌಡ ಮಲ್ಕಾಪುರ, ರಂಗಾರೆಡ್ಡಿ, ಚಂದ್ರಶೇಖರ ಮೈಲಾರ, ಕೆ.ಮರಿಯಪ್ಪ, ಹಾಜಿಮಸ್ತಾನ್, ಸಾಯಿ ರಾಮಕೃಷ್ಣ, ನದೀಮುಲ್ಲಾ ಸೇರಿದಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.'