1/19/2019

ದೇಶ | ವಿದೇಶ ವಿವರ ಪುಟ

ಸರ್ವಧರ್ಮದ ಮೂಲ ಆಧಾರ ಹಾಲುಮತ ಸಂಸ್ಕೃತಿ - ಬಿಜ್ಜರಗಿ

Font size -16+

'ಸುದ್ದಿಮೂಲ ವಾರ್ತೆ
ಜಾಲಹಳ್ಳಿ, ಜ.13
ಜಗತ್ತಿನ ಎಲ್ಲಾ ಧರ್ಮಗಳಿಗೆ ಮೂಲ ಆಧಾರ ಹಾಲು ಮತ ಸಂಸ್ಕೃತಿ ಎಂದು ಬೀದರ್ ನ ಸಾಹಿತಿ ಚಂದ್ರಕಾಂತ ಬಿಜ್ಜರಗಿ ಹೇಳಿದರು.
ಅವರು ಇಂದು ಕಲ್ಬುರ್ಗಿ ವಿಭಾಗದ ಕಾಗಿನೆಲೆ ಗುರುಪಿಠ ತಿಂಥಣಿ ಬ್ರಿಜ್ ನಲ್ಲಿ 2018 ರ ಹಾಲು ಮತ ಸಂಸ್ಕೃತಿ ವೈಭವ ಕುರಿತು ಮಾತನಾಡುತ್ತಾ ಜಗತ್ತಿನ ಎಲ್ಲಾ ಧರ್ಮಗಳಿಗೆ ಮೂಲ ಆಧಾರವಾಗಿದ್ದು ಕುರುಬ ಸಂಸ್ಕೃತಿ ವಿಶ್ವದ ಎಲ್ಲಾ ಸಂಸ್ಕೃತಿ ಒಳಗೊಂಡಿದೆ ಎಂದರು.
ಕಾಡಿನಿಂದ ನಾಡಿಗೆ ಮನುಷ್ಯನನ್ನು ಕರೆತಂದಿದ್ದು ಕುರುಬ ಸಂಸ್ಕೃತಿ ಪಶು ಪಾಲನೆ ಮಾಡಿ ಹೊಸ ಸಂಸ್ಕೃತಿ ಗೆ ನಾಂದಿ ಹಾಡಿದ್ದು ವಿಶ್ವದಲ್ಲೆ 300 ವಿಶ್ವ ವಿದ್ಯಾಲಯಗಳಾಗಿದ್ದು ಹಾಲು ಮತ ಸಂಸ್ಕೃತಿ ಬಗ್ಗೆ ಅಧ್ಯಯನಗಳಾಗಿವೆ. ದೇಶದಲ್ಲಿ 17.5 ಕೋಟಿ ಕುರುಬರು ಇದ್ದಾರೆ ಎಂದು ಕೇಂದ್ರ ಸರ್ಕಾರ ವರದಿಯಲ್ಲಿ ತಿಳಿಸಿದೆ ಎಂದರು.
ಪ್ರಾಚೀನ ಕಾಲದಲ್ಲಿ ವಿಶ್ವದ 7 ಧರ್ಮಗಳು ಇದೇ ಸಂಸ್ಕೃತಿ ಇದೆ ಇವತ್ತಿನ ಲಿಂಗಾಯತರು ಹಿಂದೇ ದಲಿತರಾಗಿದ್ದರು ವಿಬೂತಿ ಸಂಸ್ಕೃತಿ ಬಂದಿದ್ದು ಅಗೋರಿಗಳಿಂದ ಎಂದು ಈ ಸಂದರ್ಭದಲ್ಲಿ ಅಮತೃರಾವ್ ಚಿಮಕೊಡ್ ತಾಯಿಯ ಹಾಲಿನಂತೆ ಪವಿತ್ರವಾದ್ದು ಹಾಲುಮತ ಸಂಸ್ಕೃತಿ ಎಂದು ಹೇಳಿದರು. ಅಂತರಾಷ್ಟ್ರೀಯ ಜನಪದ ಹಾಡುಗಾರ್ತಿ ಮಲ್ಲವ್ವ ಮಾದರ ಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಸಿದ್ದಯ್ಯತಾತ ಗುರುವಿನ್, ಶಿವಣ್ಣ ತಾತ, ವಿಶ್ವನಾಥ ಗಬ್ಬೂರು, ಲಿಂಗಸೂರು ಎಪಿಎಂಸಿ ಅಧ್ಯಕ್ಷೆ ಶಾಂತಲಾ ಕಂದಗಲ್, ಬಿ,ವಿರಣ್ಣ, ನಿಂಗಣ್ಣ ಚಿಂಚೋಡಿ ಇದ್ದರು.
ನಿರಂಜನಾಂದ ಸ್ವಾಮಿಜಿ, ಈಶ್ವರಾನಂದ ಸ್ವಾಮಿಜಿ, ಶಿವಾನಂದ ಸ್ವಾಮಿಜಿ, ಗೋಪಾಲ ಸ್ವಾಮಿ, ವರದಾನೇಶರ ಸಾನಿಧ್ಯ ವಹಿಸಿದ್ದರು.
ವೇದಿಕೆಯ ಮಹಾ ಸನ್ನಿದಾನ ಸಿದ್ದಾರಾಮನಂದ ಪುರಿ ವಹಿಸಿದ್ದರು ಶಿಕ್ಷಕ ಚಿದಾನಂದ ಮಾಡಿದರೆ ವಂದನಾರ್ಪಣೆ ಮಹಾಂತೇಶ ಕಲಗಿ ನಿರ್ವಹಿಸಿದರು.'