1/19/2019

ದೇಶ | ವಿದೇಶ ವಿವರ ಪುಟ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸ

Font size -16+

'ಸುದ್ದಿಮೂಲ ವಾರ್ತೆ, ರಾಯಚೂರು, ಜ.13
ರಾಯಚೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಗರದ ಎಲ್.ವಿ.ಡಿ.ಕಾಲೇಜಿನಲ್ಲಿಂದು ದತ್ತಿ ಉಪನ್ಯಾಸ ಕಾರ‌್ಯಕ್ರಮ ಆಯೋಜಿಸಲಾಗಿತ್ತು.
ಮೊದಲಿಗೆ ಮಾಚನೂರು ಕೊಂಡಾ ಕೃಷ್ಣಮೂರ್ತಿ ಮತ್ತು ಸಹೋದರರ ದತ್ತಿ ಉಪನ್ಯಾ ಸದಲ್ಲಿ ಶರಣ ಸಾಹಿತ್ಯದಲ್ಲಿ ಕಾಯಕ ಮತ್ತು ದಾಸೋಹ ಪ್ರಜ್ಞೆ ವಿಷಯ ಕುರಿತು ಉಪನ್ಯಾಸ ನೀಡಿದ ಡಾ.ದಸ್ತಗೀರಸಾಬ ದಿನ್ನಿ ಬದುಕಿನ ಸತ್ಯಾಸತ್ಯತೆಗಳನ್ನು ವಿಮರ್ಶೆ ಮಾಡುವ ಮೂಲಕ ದೊರಕಿದ ಅನುಭವಗಳನ್ನು ವಚನ ರೂಪದಲ್ಲಿ ಶರಣರು ದಾಖಲಿಸಿದ್ದಾರೆಂದು ತಿಳಿಸಿದರು. ತ್ರಿವೇಣಿ ಚಾರಿಟೇಬಲ್ ಟ್ರಸ್ಟಿನ ದತ್ತಿ ಉಪನ್ಯಾಸ ನೀಡಿದ ಗಮಕ ಕಲಾ ಪರಿಷತ್ತಿನ ಡಿ. ಕೋಮಲಾ ದಾಸ ಸಾಹಿತ್ಯಕ್ಕೆ ಉತ್ತರ ಕರ್ನಾಟಕದವರ ಕೊಡುಗೆ ಅಪಾರವಾಗಿದೆ ಎಂದರು.ಎಎಂಇ ಪ.ಪೂ.ಕಾಲೇಜಿನ ಪ್ರಾಚಾರ‌್ಯ ಡಾ.ರಾಜಶ್ರೀ ಕಲ್ಲೂರು ದಿ.ಕೆ.ಜಯಾಚಾರ‌್ಯ ಕೊಪ್ಪ ರ ದತ್ತಿ ಉಪನ್ಯಾಸ ನೀಡಿ, ವಿಜಯದಾಸರ ಅಪ್ರಕಟಿತ ಪದಗಳು ಹಾಗೂ ಉಗಾಭೋಗ ಗಳು ಕೃತಿ ಕುರಿತು ತಿಳಿಸಿದರು.
ಎಲ್‌ವಿಡಿ ಕಾಲೇಜಿನ ಪ್ರಾಂಶುಪಾಲ ಡಾ.ಶರಣಬಸವ ಖೇಣೇದ್ ಮಾತನಾಡಿದರು. ತಾ.ಕ.ಸಾ.ಪ.ಪದಾಧಿಕಾರಿಗಳಾದ ಶ್ಯಾಮಸುಂದರ,ಖಾಜಾ ಹುಸೇನ್ ಆನಾಹೊಸೂರು, ಮಲ್ಲಿ ಕಾರ್ಜುನ ಸ್ವಾಮಿ ಶಿಖರಮಠ, ಜಿ.ಕ.ಸಾ.ಪ.ಗೌ.ಕಾರ‌್ಯದರ್ಶಿ ಭೀಮನಗೌಡ ಇಟಗಿ, ಸದಸ್ಯ ರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಡಾ.ಶೀಲಾದಾಸ್, ಬಾಬು ಭಂಡಾರಿಗಲ್, ಚೆನ್ನ ಬಸವ ಹಿರೇಮಠ, ಬಿ.ವಿ.ಸೂಗಾ ಮತ್ತು ದತ್ತಿ ದಾನಿಗಳ ಕುಟುಂಬದವರು ಕಾರ‌್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾ.ಕ.ಸಾ.ಪ.ಅಧ್ಯಕ್ಷೆ ಕೆ.ಗಿರಿಜಾ ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಾಜಾ ಹುಸೇನ ಕಾರ‌್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಘವೇಂದ್ರ ಪ್ರಾರ್ಥಿಸಿದರು.ರಾಮಣ್ಣ ಬೋಯರ್ ವಂದಿಸಿದರು.'