1/19/2019

ದೇಶ | ವಿದೇಶ ವಿವರ ಪುಟ

ನಗರದಲ್ಲಿ ಹದಗೆಟ್ಟ ರಸ್ತೆ ಸಂಚಾರಿ ವ್ಯವಸ್ಥೆ : ಜ.22 ರಂದು ರಾಯಚೂರು ಬಂದ್‌ಗೆ ಕರೆ

Font size -16+

'ಸುದ್ದಿಮೂಲ ವಾರ್ತೆ
ರಾಯಚೂರು, ಜ.13
ರಾಯಚೂರು ಶಾಸಕ ಮತ್ತು ಸಂಸದರ ಜನ ವಿರೋಧಿ ಧೋರಣೆ ಖಂಡಿಸಿ ಜನವರಿ 22 ರಂದು ರಾಯ ಚೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ರಸ್ತೆ, ಕುಡಿಯುವ ನೀರು, ಟ್ರಾಫಿಕ್, ಮನೆ ಹಕ್ಕುಪತ್ರ ವಿಳಂಬ ಮುಂತಾದ ಹತ್ತು-ಹಲವು ಸಮಸ್ಯೆಗಳು ತಾಂಡ ವವಾಡುತ್ತಿದ್ದರೂ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ 3 ದಿನ ರಾಯಚೂರು, 4 ದಿನ ಬೆಂಗಳೂರು ಪ್ರವಾಸ ಮಾಡುತ್ತಿದ್ದರೆ, ಸಂಸದ ಬಿ.ವಿ.ನಾಯಕ ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಪಾಪಾರೆಡ್ಡಿ ಟೀಕಿಸಿದರು.
ಕಳೆದ 4ವರೆ ವರ್ಷಗಳು ಕಾದು ನೋಡಿದರೂ ಕನಿಷ್ಠ ಕಾಳಜಿ ತೋರುತ್ತಿಲ್ಲ ಎಂದು ಶಾಸಕ ಮತ್ತು ಸಂಸದರ ಮೇಲೆ ಹರಿಹಾಯ್ದ ಅವರು, ನಗರದಲ್ಲಿನ ತಗ್ಗು-ಗುಂಡಿ ಮುಚ್ಚುವ ಕಾರ್ಯ ಡಿಸಿ ಆರಂಭಿಸರುವುದು ಬಿಟ್ಟರೆ ಯಾವುದೇ ಪ್ರಗತಿದಾಯಕ ಮತ್ತು ಆಶಾದಾಯಕ ಕಾರ್ಯಗಳು ಆಗುತ್ತಿಲ್ಲ ಎಂದರು.
ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಹಲವಾರು ಸಲ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿದೆ. ಎಸ್‌ಪಿಯ ವರು ಹೊಸ ದಾಗಿ ಬಂದಿ ದ್ದು ಜಿಲ್ಲಾಡಳಿತ ಸಮಸ್ಯೆಗೆ ಪರಿಹಾರ ಸೂಚಿಸುತ್ತಿಲ್ಲ ಎಂದರು.
ನೇತಾಜಿ-ಶಶಿಮಹಲ್ ರಸ್ತೆ, ಮಹಾವೀರ ಸರ್ಕಲ್-ತೀನಕಂದಿಲ್ ರಸ್ತೆ ನೋಡಲಾಗದಂತ ಸ್ಥಿತಿಗೆ ತಲುಪಿದೆ. ಮಚ್ಚಿ ಬಜಾರ್ ರಸ್ತೆ ಅಗಲೀಕರಣ ವಿಳಂಬವಾಗುತ್ತಿದೆ ಎಂದು ಆಪಾದಿಸಿದರು.
ನಗರದಲ್ಲಿ 2-3 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾ ಗುತ್ತಿದೆ.
ಮನೆಗಳ ಹಕ್ಕುಪತ್ರ ವಿತರಣೆ ಕಾರ್ಯ ಆಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತದ ಗಮನ ಸೆಳೆದರೂ ನಿಷ್ಟ್ರಿಯೆವಾಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಜನವರಿ 22 ರಂದು ರಾಯಚೂರು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಘೋಷಿಸಿದರು.
ಪಕ್ಷದ ಮುಖಂಡರಾದ ಅಶೋಕ ಗಸ್ತಿ, ದೊಡ್ಡ ಮಲ್ಲೇಶಪ್ಪ, ಕಡಗೋಲ ಅಂಜಿನೇಯ್ಯ, ರಾಜಕುಮಾರ್, ರವಿ ಜಲ್ದಾರ, ಆರ್.ಕೆ.ಅಮರೇಶ, ಬಸವರಾಜ ಕಳಸ, ಮಲ್ಲೇಶ ನಾಯಕ, ಗುಡ್ಸಿ ನರಸರೆಡ್ಡಿ, ರಮಾನಂದ ಯಾದವ್, ಎ.ಚಂದ್ರಶೇಖರ, ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.'